ಚೆನ್ನೈ: ಚಾಲಕರೊಬ್ಬರು ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಬಸ್ ಚಾಲಕನನ್ನು ಶಿವಕುಮಾರ್ ಎಂದು ಗುರುತಿಸಲಾಗಿದೆ. ಬಸ್ ಕೊಯಮತ್ತೂರಿನಿಂದ ಈರೋಡ್ ಕಡೆ ಸಂಚರಿಸುತ್ತಿತ್ತು. ಈ ಬಸ್ ನಲ್ಲಿ ಇದೇ ಮೊದಲ ಬಾರಿಗೆ ಬಸ್ ಚಾಲಕ ಹೆಲ್ಮೆಟ್ ಧರಿಸಿ ಬಸ್ ಚಲಾಯಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ಸಿಬ್ಬಂದಿಗೂ ಐಎಸ್‍ಐ ಹೆಲ್ಮೆಟ್ ಕಡ್ಡಾಯ- ಮೈಸೂರು ಪೊಲೀಸ್ ಆಯುಕ್ತರಿಂದ ಸುತ್ತೋಲೆ
Advertisement
Advertisement
ಹೆಲ್ಮೆಟ್ ಧರಿಸಲು ಕಾರಣವೇನು?
ತಮಿಳುನಾಡು ಸಾರಿಗೆ ಇಲಾಖೆಯ ಸಿಬ್ಬಂದಿ ವಿವಿಧ ಬೇಡಿಕೆ ಈಡೇರಿಸುವಂತೆ ಪ್ರತಿಭಟನೆ ನಡೆಸುತ್ತಿದ್ದು, ಈ ಪ್ರತಿಭಟನೆ ಮಂಗಳವಾರ ಐದನೇ ದಿನಕ್ಕೆ ಕಾಲಿಟ್ಟಿದೆ. ಪ್ರತಿಭಟನೆಯಿಂದಾಗಿ ಕೊಯಮತ್ತೂರು ಪ್ರಯಾಣಿಕರು ಬಸ್ ಗಾಗಿ ಕಾದು ಸುಸ್ತಾಗಿದ್ದರು. ಕೊನೆಗೊಂದು ಬಸ್ ಬಂತು. ಆ ಬಸ್ ನಲ್ಲಿ ಜನವಿಲ್ಲದ ಕಾರಣ ಪ್ರಯಾಣಿಕರು ಬೇಗ ಬೇಗ ಹತ್ತಿ ಸೀಟ್ ನಲ್ಲಿ ಕುಳಿತುಕೊಂಡ್ರು. ಇದನ್ನೂ ಓದಿ: ಕೈಗೆ ಸಿಕ್ಕ ಹೆಲ್ಮೆಟ್ ಹಾಕೊಂಡು ಪೊಲೀಸರಿಂದ ಬಚಾವಾದ್ರೆ ಸಾಕು ಅಂತಿದ್ರೆ ನೀವು ಈ ಸುದ್ದಿ ಓದ್ಲೇಬೇಕು
Advertisement
ಈ ವೇಳೆ ಬಸ್ ಚಾಲಕ ಹೆಲ್ಮೆಟ್ ಹಾಕಿರುವುದು ಕೆಲ ಮಂದಿಯ ಗಮನಕ್ಕೆ ಬಂದಿದೆ. ಕೂಡಲೇ ಅದರಲ್ಲೊಬ್ಬ ಪ್ರಯಾಣಿಕ ಚಾಲಕನ ಹತ್ತಿರ ಹೋಗಿ ಯಾಕೆ ಹೆಲ್ಮೆಟ್ ಧರಿಸಿದ್ದೀರಿ ಎಂದು ಕೇಳಿದ್ದಾನೆ. ಈ ವೇಳೆ ಚಾಲಕ ಸಾರಿಗೆ ನೌಕರರು ಎಲ್ಲರೂ ಪ್ರತಿಭಟನೆ ನಡೆಸುತ್ತಿದ್ದಾರೆ. ನಾನು ಮಾತ್ರ ಕೆಲಸ ಮಾಡುತ್ತಿದ್ದೇನೆ. ಹೀಗಾಗಿ ನಾನು ಅವರಿಗೆ ಟಾರ್ಗೆಟ್ ಆಗಬಾರದೆಂದು, ನನ್ನ ರಕ್ಷಣೆಗೋಸ್ಕರ ನಾನು ಹೆಲ್ಮೆಟ್ ಹಾಕ್ಕೊಂಡು ಕೆಲಸ ಮಾಡುತ್ತಿದ್ದೇನೆ ಅಂತ ಹೇಳಿದ್ದಾರೆ. ಚಾಲಕನ ಒಳ್ಳೆಯತನದ ಗುಣಕ್ಕೆ ಬಸ್ ನಲ್ಲಿದ್ದ ಪ್ರಯಾಣಿಕರು ಕೃತಜ್ಞತೆ ಸಲ್ಲಿಸಿದ್ದಾರೆ.
Advertisement
https://youtu.be/5-2to324ssU