ಬೆಂಗಳೂರು: ದೋಷ ಇದೆ, ವಿಶೇಷ ಪೂಜೆ ಮಾಡಬೇಕೆಂದು ಹೇಳಿ ಪೂಜಾರಿಯೊಬ್ಬ ಮಹಿಳೆಯ (Woman) ಮೇಲೆ ಅತ್ಯಾಚಾರವೆಸಗಿರುವ (Rape) ಘಟನೆ ಬೆಂಗಳೂರಿನ ಬಗಲಗುಂಟೆಯಲ್ಲಿ (Bagalgunte) ನಡೆದಿದೆ.
ಹಾಸನ (Hassan) ಮೂಲದ ದಯಾನಂದ್ ಅತ್ಯಾಚಾರವೆಸಗಿರುವ ಪೂಜಾರಿ. ಈತ ಹಾಸನದ ಪ್ರಸಿದ್ಧ ಪುರದಮ್ಮ ದೇವಾಲಯದ ಪೂಜಾರಿಯಾಗಿದ್ದ. ಯುವತಿ ಪೂಜೆಗೆ ದೇವಸ್ಥಾನಕ್ಕೆ ಹೋದ ಸಂದರ್ಭದಲ್ಲಿ ಆರೋಪಿ ದಯಾನಂದ್‌ಗೆ ಪರಿಚಯವಾಗಿದ್ದಾರೆ. ಆಗ ಪೂಜಾರಿ ದಯಾನಂದ್ ಯುವತಿಯ ಹಸ್ತರೇಖೆ ನೋಡಿ ನಿನಗೆ ಮದುವೆ ದೋಷ ಇದೆ. ವಿಶೇಷ ಪೂಜೆ ಮಾಡಿದರೆ ಪರಿಹಾರವಾಗುತ್ತೆ ಎಂದು ಪುಂಗಿದ್ದಾನೆ. ಡೋಂಗಿ ಪೂಜಾರಿ ಮಾತು ನಂಬಿದ ಯುವತಿ ಪೂಜೆಗೆ ಎಂದು 10 ಸಾವಿರ ರೂಪಾಯಿ ಕೊಟ್ಟಿದ್ದಾಳೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಲೋಕಸಭೆಯಲ್ಲೂ ವಾಲ್ಮೀಕಿ ಹಗರಣ ಪ್ರತಿಧ್ವನಿ; ಗ್ಯಾರಂಟಿಗೆ SC-ST ಹಣ ಬಳಕೆ – ಸಿದ್ದರಾಮಯ್ಯ ವಿರುದ್ಧ ವಿತ್ತ ಸಚಿವೆ ಟೀಕೆ
- Advertisement -
- Advertisement -
ಅಲ್ಲದೇ ಆರೋಪಿ ಸಂತ್ರಸ್ತ ಯುವತಿಗೆ ನಿಂಬೆಹಣ್ಣು ಮಂತ್ರಿಸಿ ಮಲಗುವಾಗ ತಲೆದಿಂಬಿನ ಕೆಳಗಡೆ ಇಟ್ಟುಕೊಂಡು ಮಲಗಲು ಸೂಚಿಸಿದ್ದಾನೆ. ಅದೇ ರೀತಿ ನಿಂಬೆ ಹಣ್ಣು ಮಂತ್ರಿಸಿಕೊಟ್ಟು ಯುವತಿಯನ್ನು ವಶೀಕರಣ ಮಾಡಿಕೊಂಡಿದ್ದಾನೆ. ಬಳಿಕ ಯುವತಿಗೆ ತಾನು ಹೇಳಿದಹಾಗೆ ಕೇಳುವಂತೆ ಪಳಗಿಸಿಕೊಂಡು ಕೃತ್ಯ ಎಸಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: Wayanad Landslides: 93 ಮೃತದೇಹ ಸಿಕ್ಕಿವೆ, ಸಾವಿನ ಸಂಖ್ಯೆ ಹೆಚ್ಚಾಗಬಹುದು – ಸಿಎಂ ಪಿಣರಾಯಿ ಆತಂಕ
- Advertisement -
- Advertisement -
ಸಂತ್ರಸ್ತ ಯುವತಿ ನಗರದ ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿಯಾಗಿದ್ದರು. ಹಾಗಾಗಿ ಆರೋಪಿ ಆಗಾಗ ಬಂದು ಕಾರಿನಲ್ಲಿ ಕರೆದುಕೊಂಡು ಹೋಗಿ ದೇವರ ತಾಳಿ ಹಾಕಿಕೊಳ್ಳುವಂತೆ ಹೇಳಿ ಫೋಟೋ ತಗೆದುಕೊಂಡಿದ್ದಾನೆ. ಅಲ್ಲಿಂದ ಹೆಚ್‌ಎಸ್‌ಆರ್ ಲೇಔಟ್, ಮೈಸೂರು ರೋಡ್‌ಗೆ ಕರೆದುಕೊಂಡು ಹೋಗಿ ಕಾರಿನಲ್ಲಿಯೇ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ. ಇತ್ತೀಚಿಗೆ ಬೆಂಗಳೂರಿನ ಲಾಡ್ಜ್ಗೆ ಕರೆದುಕೊಂಡು ಹೋಗಿ ಅತ್ಯಾಚಾರ ಮಾಡಿ ವಿಡಿಯೋ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡಲು ಶುರು ಮಾಡಿದ್ದಾನೆ. ಸಂತ್ರಸ್ತ ಯುವತಿ ಬಗಲಗುಂಟೆ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಕೇಸ್ ದಾಖಲಿಸಿದ್ದಾರೆ. ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು ಪೂಜಾರಿ ದಯಾನಂದ್‌ನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: Shirur Landslide; ನಾಪತ್ತೆಯಾದವರ ಕುಟುಂಬಸ್ಥರ ಕಣ್ಣೀರು ನೋಡಿ ಮತ್ತೆ ಕಾರ್ಯಾಚರಣೆ ನಿರ್ಧಾರ: ಈಶ್ವರ್ ಮಲ್ಪೆ