ಬೆಂಗಳೂರು: ಜಮ್ಮು-ಕಾಶ್ಮೀರ (Jammu And Kashmir) ರಜೌರಿಯಲ್ಲಿ ಉಗ್ರರರ ವಿರುದ್ಧ ನಡೆದ ಎನ್‌ಕೌಂಟರ್‌ನಲ್ಲಿ ಹುತಾತ್ಮರಾದ ಕ್ಯಾಪ್ಟನ್ ಪ್ರಾಂಜಲ್ ಅವರ ಅಂತಿಮ ದರ್ಶನ ಮುಕ್ತಾಯಗೊಂಡಿದ್ದು, ಅಂತ್ಯಕ್ರಿಯೆಗಾಗಿ ಮೆರವಣಿಗೆ ಸಾಗಿದೆ. ಕೂಡ್ಲುಗೇಟ್‌ನ ಸೋಮಸುಂದರ್ ಪಾಳ್ಯ ರಸ್ತೆಯ ವಿದ್ಯುತ್ ಚಿತಾಗಾರದಲ್ಲಿ ಬ್ರಾಹ್ಮಣ ಸಂಪ್ರಾದಾಯದಂತೆ ಅಂತಿಮ ಸಂಸ್ಕಾರ ನಡೆಯಲಿದ್ದು, ಪ್ರಾಂಜಲ್ ಅವರ ಪಾರ್ಥೀವ ಶರೀರವನ್ನು ಹೊತ್ತ ವಾಹನ ಮೆರವಣಿಗೆಯಲ್ಲಿ ಸಾಗಿದೆ.
Advertisement
ಬೆಳಗ್ಗೆ 7 ಗಂಟೆಯಿಂದ 9:30ರ ವರೆಗೆ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಬಳಿಕ 9:45 ರಿಂದ 10:15ರ ವರೆಗೆ ಗಣ್ಯರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಈ ವೇಳೆ ದರ್ಶನ ಪಡೆದ ಪ್ರಾಂಜಲ್ ಸ್ನೇಹಿತರು, ಕುಟುಂಬಸ್ಥರು ಹಾಗೂ ರಾಜಕೀಯ ನಾಯಕರು ಪ್ರಾಂಜಲ್ ಬಗೆಗಿನ ಭಾವುಕ ನುಡಿಗಳನ್ನು `ಪಬ್ಲಿಕ್ ಟಿವಿ’ಯೊಂದಿಗೆ ಹಂಚಿಕೊಂಡಿದ್ದಾರೆ.
Advertisement
Advertisement
ದೇಶಕ್ಕಾಗಿ ಹೋರಾಡಿದ ಪುಣ್ಯಪುರುಷ:
ಕ್ಯಾಪ್ಟನ್ ಪ್ರಾಂಜಲ್ ನಮ್ಮೆಲ್ಲರನ್ನು ಅಗಲಿದ್ದು, ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ. ಸೇನೆಯಲ್ಲಿ ಧೈರ್ಯ ಶೌರ್ಯದಿಂದ ಹೋರಾಡಿ ವೀರ ಮರಣವನ್ನಪ್ಪಿದ್ದಾರೆ. ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಪುಣ್ಯಪುರುಷ ಪ್ರಾಂಜಲ್. ಈ ರೀತಿ ಕರ್ನಾಟಕದ ಮಣ್ಣಿನ ಗುಣ ಅನೇಕ ಜನರಿಗೆ ಇದೆ. ಪ್ರಾಂಜಲ್ ಅವರ ದೇಶ ಸೇವೆ ಇತರರಿಗೆ ಮಾದರಿಯಾಗಲಿದೆ. ಅವರು ಅಗಲಿದ್ದರೂ ನಮ್ಮೆಲ್ಲರ ಹೃದಯದಲ್ಲಿ ನೆಲೆಸಿದ್ದಾರೆ ಎಂದು ವಿಧಾನಸಭಾ ವಿಪಕ್ಷ ನಾಯಕ ಆರ್.ಅಶೋಕ್ ಹೇಳಿದ್ದಾರೆ.
Advertisement
ಯೋಧನಿಲ್ಲದೇ ಬದುಕು ಸಾಧ್ಯವಿಲ್ಲ:
ಒಬ್ಬ ಯೋಧ ಇಲ್ಲದಿದ್ದರೆ ನಾವು ಬುದುಕೋಕೆ ಸಾಧ್ಯವಿಲ್ಲ. ಪ್ರಾಂಜಲ್ ಅವರನ್ನು ಕಳೆದುಕೊಂಡ ದುಃಖದಲ್ಲಿ ನಾವಿದ್ದೇವೆ. ಅವರಿಗೆ ಅಂತಿಮ ನಮನ ಸಲ್ಲಿದ್ದೇವೆ. ಅವರ ಕುಟುಂಬಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುತ್ತೇನೆ ಎಂದು ಸಂಸದ ಡಿ.ಕೆ ಸುರೇಶ್ ತಿಳಿಸಿದ್ದಾರೆ.
ಪತ್ನಿ ಜೊತೆ ಮನೆಗೆ ಬಂದಿದ್ರು:
ಪ್ರಾಂಜಲ್‌ನ ತುಂಬಾ ಮಿಸ್ ಮಾಡ್ಕೊಂಡಿದ್ದೇವೆ. ಜೂನ್‌ನಲ್ಲಿ ಮನೆಗೆ ಪತ್ನಿ ಜೊತೆ ಬಂದಿದ್ದ. ಪ್ರಾಂಜಲ್ ನನ್ನ ಮಗಳ ಕ್ಲಾಸ್‌ಮೇಟ್ ಆಗಿದ್ರು. ನಮ್ಮ ಕುಟುಂಬದ ಜೊತೆ ತುಂಬಾ ಅನ್ಯೋನ್ಯವಾಗಿದ್ದರು ಎಂದು ಪ್ರಾಂಜಲ್ ಅವರ ಹೈಸ್ಕೂಲ್ ಟೀಚರ್ ಸುಮಾದೇವಿ ಭಾವುಕವಾಗಿ ಮಾತನಾಡಿದ್ದಾರೆ.