ಕೊಪ್ಪಳ: ನಾವು ಎಷ್ಟೋ ಜನ ಮೇಷ್ಟ್ರನ್ನ ಪಬ್ಲಿಕ್ ಹೀರೋ ಆಗಿ ತೋರಿಸಿದ್ದೇವೆ. ಆದರೆ ಇವತ್ತಿನ ಟೀಚರ್ ಫುಲ್ ಡಿಜಿಟಲ್. ಈ ಸರ್ಕಾರಿ ಮೇಷ್ಟ್ರು ತಮ್ಮ ಜೇಬಿನಿಂದಲೇ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡಿದ್ದಾರೆ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕರು ಸರಿಯಾಗಿ ಶಾಲೆಗೇ ಬರಲ್ಲ, ಬಂದರು ಚೆನ್ನಾಗಿ ಪಾಠ ಮಾಡಲ್ಲ. ಒಳ್ಳೇ ರಿಸಲ್ಟ್ ಕೊಡಲ್ಲ ಮತ್ತು ಸುಮ್ಮನೆ ಟೈಂ ಪಾಸ್ ಮಾಡುತ್ತಾರೆ. ಮಕ್ಕಳಿಗೆ ಪಾಠ ಬಿಟ್ಟು ಬೇರೇ ಯಾವುದೇ ಚಟುವಟಿಕೆಗಳನ್ನು ಮಾಡಿಸಲ್ಲ. ಹೀಗೆ ಸರ್ಕಾರಿ ಶಾಲೆಗಳ ಬಗ್ಗೆ ಸಾಕಷ್ಟು ಆರೋಪಗಳಿವೆ. ಆದರೆ ನಮ್ಮ ಪಬ್ಲಿಕ್ ಹೀರೋ ತುಂಬಾನೇ ಡಿಫರೆಂಟ್. ತಮ್ಮ ಜೇಬಿನಿಂದಲೇ ಒಂದೂವರೆ ಲಕ್ಷ ರೂಪಾಯಿ ಖರ್ಚು ಮಾಡಿ ಸ್ಮಾರ್ಟ್ ಕ್ಲಾಸ್ ಮಾಡುತ್ತಿದ್ದಾರೆ.
Advertisement
ಅಂದಹಾಗೇ ಮೇಷ್ಟ್ರ ಹೆಸರು ಮೊಹಮ್ಮದ್ ಅಬಿದ ಹುಸೇನ್ ಅತ್ತಾರ. ಕೊಪ್ಪಳದ ಹೃದಯ ಭಾಗದಲ್ಲಿರೋ ಸರ್ಕಾರಿ ಕೇಂದ್ರ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದಾರೆ. ತಮ್ಮ ಸಂಬಳದ ಒಂದಿಷ್ಟು ಹಣವನ್ನು ಬಡ ಮಕ್ಕಳ ಶಿಕ್ಷಣಕ್ಕಾಗಿ ಬಳಸುತ್ತಿದ್ದಾರೆ.
Advertisement
ಪ್ರೊಜೆಕ್ಟರ್ ಮೂಲಕ ಮಕ್ಕಳಿಗೆ ಚೆನ್ನಾಗಿ ಗಣಿತವನ್ನು ಅರ್ಥ ಮಾಡಿಸುತ್ತಾರೆ. ಮಕ್ಕಳು ಕೂಡಾ ಈ ಮೇಷ್ಟ್ರನ್ನ ಕಂಡರೆ ಅಷ್ಟೇ ಇಷ್ಟ ಪಡುತ್ತಾರೆ. ಕೇವಲ ಸಂಬಳಕ್ಕಾಗಿ ಕೆಲಸ ಮಾಡದೆ ಬಡ ವಿದ್ಯಾರ್ಥಿಗಳಿಗೂ ಗುಣಾತ್ಮಕ ಶಿಕ್ಷಣ ನೀಡುತ್ತಿರೋ ಅತ್ತಾರ ಮೇಷ್ಟ್ರಿಗೆ ನಮ್ಮದೊಂದು ಸಲಾಂ.