ಕೊಪ್ಪಳ: ತಾನು ರೈತ ಆಗಬೇಕು ಅಂದುಕೊಂಡಿದ್ದ ಇವರು ಎಂಎಸ್ಸಿ ಮಾಡಿದ ಬಳಿಕ ಹೈಬ್ರಿಡ್ ಟೊಮೆಟೋ ಬಗ್ಗೆ ಪಿಹೆಚ್‍ಡಿ ಮಾಡಿದ್ದರು. ಆದರೆ ಬದುಕಿನ ಮಗ್ಗಲು ವಾಲಿದ್ದು ಪೊಲೀಸ್ ವೃತ್ತಿ ಕಡೆಗೆ.
ಹೌದು. ಕಾನೂನು ಸುವ್ಯವಸ್ಥೆ ಕಾಪಾಡಿ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿರೋ ಕೊಪ್ಪಳದ ಎಸ್‍ಪಿ ಆಗಿರೋ ಡಾ. ಅನೂಪ್ ಶೆಟ್ಟಿ ಇಂದಿನ ನಮ್ಮ ಪಬ್ಲಿಕ್ ಹೀರೋ. ಇವರು ಮೂಲತಃ ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆ ನಿವಾಸಿ. ಕೃಷಿ ಕುಟುಂಬದಲ್ಲಿ ಹುಟ್ಟಿದ ಕಾರಣದಿಂದ ಕೃಷಿ ಕಡೆ ಒಲವಿತ್ತು. ಎಂಎಸ್ಸಿ ಓದಿದ ಬಳಿಕ 2013 ರಲ್ಲಿ `ಹೈಬ್ರೀಡ್ ಡೆವಲಪ್ ಮೆಂಟ್ ಇನ್ ಟಮೋಟೋ’ ಎನ್ನುವ ವಿಷಯದಲ್ಲಿ ಪಿಹೆಚ್‍ಡಿ ಪಡೆದರು. ಇದೇ ಸಮಯದಲ್ಲಿ ಐಪಿಎಸ್ ಪಾಸ್ ಮಾಡಿ ಪೊಲೀಸ್ ವೃತ್ತಿಗೆ ಸೇರಿದರು.
6 ತಿಂಗಳು ದಾವಣಗೆರೆ, ಭಟ್ಕಳದಲ್ಲಿ 1 ವರ್ಷ, ತೀರ್ಥಹಳ್ಳಿಯಲ್ಲಿ ಮೂರು ತಿಂಗಳು ಕೆಲಸ ಮಾಡಿದ ಬಳಿಕ ಕೊಪ್ಪಳ ಎಸ್ಪಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಕೊಪ್ಪಳಕ್ಕೆ ಎಸ್ಪಿಯಾಗಿ ಬಂದಾಗ ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ, ಅಕ್ರಮ ಗಣಿಗಾರಿಕೆ, ಅಕ್ರಮ ಮದ್ಯ ಮಾರಾಟ ಜೋರಾಗಿತ್ತು. ಮಫ್ತಿಯಲ್ಲೇ ಕೆಲಸ ಮಾಡಿ ಎಲ್ಲವನ್ನೂ ಮಟ್ಟ ಹಾಕಿದ್ದಾರೆ.
ಅನೂಪ್ ಶೆಟ್ಟಿ ಅವರ ಸೇವೆ ನೋಡಿದ ತಿಗರಿ ಗ್ರಾಮದ ಗಂಗಾಧರ ಮತ್ತು ಶ್ರೀದೇವಿ ದಂಪತಿ ತಮ್ಮ ಮಗುವಿಗೆ ಅನೂಪ್ ಶೆಟ್ಟಿ ಅಂತ ನಾಮಕರಣ ಮಾಡಿದ್ದಾರೆ. ಇವರ ಅಭಿಮಾನಿಗಳು ಅನೂಪ್ ಶೆಟ್ಟಿ ಅವರ ಫೇಸ್ ಬುಕ್ ಪೇಜ್ ಕೂಡಾ ತೆರೆದಿದ್ದಾರೆ.
ವಿಶೇಷ ಏನೆಂದರೆ ಡಾ.ಅನೂಪ್ ಶೆಟ್ಟಿ ಅವರ ಪತ್ನಿ ನಿಶಾ ಜೇಮ್ಸ್ ರಾಯಚೂರು ಜಿಲ್ಲೆಯಲ್ಲಿ ಎಸ್ಪಿಯಾಗಿ ಕೆಲಸ ಮಾಡ್ತಿದ್ದಾರೆ.