ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

Public TV
2 Min Read
Lord Rama

ಕೊಪ್ಪಳ: ಐತಿಹಾಸಿಕ ರಾಮ ಮಂದಿರ (Ram Mandir) ಉದ್ಘಾಟನೆಗೆ ಕೆಲವೇ ದಿನಗಳು ಬಾಕಿ ಉಳಿದಿವೆ. ಈ ಸಂದರ್ಭದಲ್ಲಿ ಕರ್ನಾಟಕದಲ್ಲಿಯೂ ಅನೇಕ ಸ್ಥಳಗಳಲ್ಲಿ ಶ್ರೀರಾಮನ ಹೆಜ್ಜೆಗುರುತುಗಳು ಕಂಡುಬಂದಿವೆ. ಅದರಲ್ಲೂ ಶ್ರೀರಾಮನ ಬಂಟ ಹನುಮನ ಜನ್ಮಸ್ಥಳ ಇರುವ ಕೊಪ್ಪಳ (Koppal) ಜಿಲ್ಲೆಗೆ ಹೆಚ್ಚಿನ ನಂಟಿರೋದು ಸಾಬೀತಾಗಿದೆ. ಏಕೆಂದರೇ ಪ್ರಸಿದ್ಧ ಅಂಜನಾದ್ರಿ ಬೆಟ್ಟ (Anjanadri Hills) ಇರೋದು ಈ ಕೊಪ್ಪಳ ಜಿಲ್ಲೆಯಲ್ಲೇ, ಹೀಗಾಗಿ ರಾಮ ಮತ್ತು ಆಂಜನೇಯನ ಅನೇಕ ಕಥೆಗಳು ಕೊಪ್ಪಳ ಜಿಲ್ಲೆಯಲ್ಲಿವೆ.

Lord Rama 2

ಮೋಡಕ್ಕೆ ಮುತ್ತಿಟ್ಟಂತೆ ಸುತ್ತಲೂ ಹರಿಯುತ್ತಿರುವ ತುಂಗಭದ್ರ ನದಿ. ನದಿಯ ದಡದಲ್ಲಿ ಒಂದೇ ಕಲ್ಲಿನಿಂದ ನಿರ್ಮಾಣವಾಗಿರುವ ಪುಟ್ಟ ಗೋಡೆ. ಮತ್ತೊಂದೆಡೆ ನದಿ ದಡದಲ್ಲಿರುವ ದೊಡ್ಡ ಕಲ್ಲು ಬಂಡೆಯ ಮೇಲಿರುವ ಪಾದದ ಗುರುತು . ಇದು ನೋಡುವುದಕ್ಕೆ ಸಾಮಾನ್ಯ ಸ್ಥಳದಂತೆ ಕಂಡರೂ ರಾಮಯಣದಲ್ಲಿ ಮಹತ್ವ ಪಡೆದ ಸ್ಥಳವೆಂದೇ ಖ್ಯಾತಿ ಪಡೆದಿದೆ. ಇದನ್ನೂ ಓದಿ: ‘ಅನಿಮಲ್’ ಸಕ್ಸಸ್ ಪಾರ್ಟಿಯಲ್ಲಿ ರಶ್ಮಿಕಾ ಕೆನ್ನೆಗೆ ಮುತ್ತಿಟ್ಟ ರಣ್‌ಬೀರ್ ಕಪೂರ್

ಏಕೆಂದರೆ ಇದೇ ಸ್ಥಳದಲ್ಲಿ ರಾಮ, ಲಕ್ಷ್ಮಣರು ಮತ್ತು ಹನುಮಂತ, ಸುಗ್ರೀವರು ಭೇಟಿಯಾಗುತ್ತಾರೆ. ನಂತರ ಏನು ನಡೆಯುತ್ತೇ ಅನ್ನೋದು ಎಲ್ಲರಿಗೂ ಗೊತ್ತಿರುವ ಸಂಗತಿ. ಇಂತಹದ್ದೊಂದು ಐತಿಹಾಸಿಕ ಸ್ಥಳ ಇರೋದು ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಆನೆಗೊಂದಿ ಬಳಿಯಿರೋ ಚಂಚಲ ಕೋಟೆಯಲ್ಲಿ.

Lord Rama 3

ಹೌದು. ಸೀತೆಯನ್ನು ಹುಡುಕಿಕೊಂಡು ಅಯೋಧ್ಯೆಯಿಂದ ರಾಮ ಮತ್ತು ಸಹೋದರ ಲಕ್ಷ್ಮಣ ಹೊರಟಿದ್ದರು. ರಾಮ, ಲಕ್ಷ್ಮಣರು ಹತ್ತಿರ ಬಂದು, ಆಂಜನೇಯ ಮತ್ತು ಸುಗ್ರೀವರನ್ನು ಮಾತನಾಡಿಸುತ್ತಾರೆ. ಆಗ ತಾವು ವಾಲಿಯ ಬಂಟರಲ್ಲಾ, ರಾಮ, ಲಕ್ಷ್ಮಣರು ಅಂತ ಹೇಳುತ್ತಾರೆ. ತನ್ನ ಪತ್ನಿ ಸೀತೆಯನ್ನು ರಾವಣ ಅಪಹರಿಸಿಕೊಂಡು ಹೋಗಿದ್ದಾನೆ. ಸೀತೆಯನ್ನು ಹುಡುಕಿಕೊಂಡು ತಾವು ಹೊರಟಿರುವುದಾಗಿ ಹೇಳುತ್ತಾನೆ. ರಾಮ ಮತ್ತು ಸುಗ್ರೀವ ಇಬ್ಬರ ನೋವು ಒಂದೇ ಆಗಿತ್ತು. ಇದೇ ಚಂಚಲಕೋಟೆಯ ಗುಡ್ಡದಲ್ಲಿ ರಾಮ, ಲಕ್ಷ್ಮಣರು, ಮತ್ತು ಆಂಜನೇಯ, ಸುಗ್ರೀವರ ಮೊದಲ ಭೇಟಿಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಜೀವಂತವಾಗಿದೆ.

ರಾಮ, ಆಂಜನೇಯ, ಸುಗ್ರೀವ ಭೇಟಿಯಾಗಿದ್ದು ಇದೇ ಚಂಚಲಕೋಟೆಯಲ್ಲಿ ಅನ್ನೋದು ಇತಿಹಾಸಕಾರರ ಮಾತಾಗಿದೆ. ಹೀಗಾಗಿ ಬೃಹತ್ ಕಲ್ಲು ಬಂಡೆಯ ಮೇಲೆ ಪಾದುಕೆಗಳಿದ್ದು, ಅವು ರಾಮನ ಪಾದುಕೆಗಳು ಅಂತ ಹೇಳಲಾಗುತ್ತಿದೆ. ಚಂಚಲ ಕೋಟೆಯಲ್ಲಿ ರಾಮ ಕಾಲಿಟ್ಟ ಹೆಜ್ಜೆಗುರುತುಗಳು ಇವು ಅಂತ ಹೇಳುತ್ತಾರೆ. ಈ ಸಮಯದಲ್ಲಿ ವಾಲಿಯ ದೌರ್ಜನ್ಯದ ಬಗ್ಗೆ ಸುಗ್ರೀವ ಮತ್ತು ಹನುಮಂತ, ರಾಮನಿಗೆ ಹೇಳುತ್ತಾರೆ. ತಮಗೆ ಸಹಾಯ ಮಾಡುವಂತೆ ಕೇಳುತ್ತಾರೆ. ನಂತರ ವಾಲಿ ಮತ್ತು ರಾಮನ ನಡುವೆ ಯುದ್ಧ ನಡೆಯುತ್ತಲೇ, ವಾಲಿಯನ್ನು ರಾಮ ವಧೆ ಮಾಡುತ್ತಾನೆ ಅನ್ನೋದು ಪುರಾಣ. ಇದನ್ನೂ ಓದಿ: ಜೀವನದಲ್ಲಿ ಭರವಸೆಯಿಲ್ಲ, ಜೈಲಿನಲ್ಲೇ ಸಾಯೋದು ಉತ್ತಮ: ಜೆಟ್‌ ಏರ್‌ವೇಸ್‌ ಸಂಸ್ಥಾಪಕ ಗೋಯಲ್‌

ಕೊಪ್ಪಳದ ಕಿಷ್ಕಿಂದೆ ಭಾಗದಲ್ಲಿ ಶ್ರೀರಾಮನ ಅನೇಕ ಹೆಜ್ಜೆ ಗುರುತುಗಳಿವೆ. ಜೊತೆಗೆ ರಾಮನ ಹೆಜ್ಜೆ ಗುರುತುಗಳ ಬಗ್ಗೆ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಗಳೂ ಇವೆ ಎಂದು ಹೇಳಲಾಗಿದೆ. ಒಟ್ಟಿನಲ್ಲಿ ರಾಮನ ಅನೇಕ ಹೆಜ್ಜೆ ಗುರುತುಗಳನ್ನು ಕಂಡಿರುವ ಕೊಪ್ಪಳದ ಜನರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ಉದ್ಘಾಟನೆಯಾಗುತ್ತಿರುವುದು ಹೆಚ್ಚಿನ ಖುಷಿ ತಂದಿದೆ. ಇದನ್ನೂ ಓದಿ: KSRTC, BMTC ಬಸ್‌ಗಳಲ್ಲಿ ಕಂಡಕ್ಟರ್ 10 ರೂ. ಕಾಯಿನ್ ತೆಗೆದುಕೊಳ್ಳಲೇಬೇಕು!

Share This Article