ಹಾಸನ: ನಾಯಿಮರಿಗೆ ನೀರು ಕುಡಿಸಲು ಹೋದ ಸಂದರ್ಭದಲ್ಲಿ ರಸ್ತೆ ಅಪಘಾತವಾಗಿ ಅಸುನಿಗಿದ್ದ ಯೋಧನ (Soldier) ಅಂತ್ಯಕ್ರಿಯೆ ಹಾಸನದ (Hassan) ಆಲೂರು ತಾಲೂಕಿನ ಪಾಳ್ಯ ಹೋಬಳಿಯ ಚಿಕ್ಕಕಣಗಾಲು-ಹೊಸಳ್ಳಿ ಗ್ರಾಮದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಇಂದು ನೆರವೇರಿತು.
ರಸ್ತೆ ಅಪಘಾತದಲ್ಲಿ ಚನ್ನಬಸಪ್ಪ ಮೃತಪಟ್ಟಿದ್ದ ಯೋಧ. ಚನ್ನಬಸಪ್ಪ 1986ರಲ್ಲಿ ಭಾರತೀಯ ಸೇನೆಗೆ ಸೇರಿ ಭೂಸೇನೆ, ವಾಯುಸೇನೆ, ಜಲಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು. ನ.19ರಂದು ಬೆಂಗಳೂರಿನ (Bengaluru) ವಿಮಾನ ನಿಲ್ದಾಣಕ್ಕೆ ಹೋಗುವ ಹೈವೇ ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ನಾಯಿ ಮರಿಗೆ ಬಾಟಲಿಯಲ್ಲಿ ನೀರು ಕುಡಿಸುವ ವೇಳೆ ಇದನ್ನು ಕಂಡು ವ್ಯಕ್ತಿಯೊಬ್ಬರು ಕಾರನ್ನು ನಿಲ್ಲಿಸಿದ್ದರು. ಇದೇ ಸಂದರ್ಭದಲ್ಲಿ ಹಿಂಬದಿಯಿಂದ ಬಂದ ಮತ್ತೊಂದು ಕಾರು ನಿಂತಿದ್ದ ಕಾರಿಗೆ ಡಿಕ್ಕಿ ಹೊಡೆದಿದ್ದು, ಮುಂದೆ ಇದ್ದ ಕಾರು ಚನ್ನಬಸಪ್ಪ ಅವರ ಮೇಲೆ ಹರಿದಿದೆ. ಇದರಿಂದಾಗಿ ತೀವ್ರವಾಗಿ ಗಾಯಗೊಂಡು ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಬುಧವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
Advertisement
Advertisement
ಇಂದು ಬೆಳಗ್ಗೆ ಸಂರಕ್ಷಣಾ ಸೇನೆ, ಹಾಗೂ ಪೊಲೀಸ್ ಸೇನೆ, ನೇತೃತ್ವದಲ್ಲಿ ಮೃತದೇಹವನ್ನು ಮೆರವಣಿಗೆಯಲ್ಲಿ ತಂದು ಮೂರು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಿ ಅಂತಿಮ ಗೌರವ ನಮನ ಸಲ್ಲಿಸಿ, ತ್ರಿವರ್ಣ ಧ್ವಜದೊಂದಿಗೆ ಘೋಷಣೆಗಳನ್ನು ಕೂಗುತ್ತಾ ಸರ್ಕಾರಿ ಅಂತ್ಯಸಂಸ್ಕಾರ ನಡೆಸಲಾಯಿತು. ವೀರ ಯೋಧನ ಸಾವಿನಿಂದ ಇಡೀ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿತ್ತು. ಇದನ್ನೂ ಓದಿ: 15 ರೂ. ಹಣ ಪಾವತಿಸಲು ಹೋಗಿ 7 ಲಕ್ಷ ಹಣ ಕಳೆದುಕೊಂಡ
Advertisement
Advertisement
ಅಂತ್ಯಸಂಸ್ಕಾರದ ವೇಳೆ ಹಾಸನದ ಎನ್.ಸಿ.ಸಿ. ಸೇವಾದಳದ ಸುಭೆದಾರ್ ಮಹಮ್ಮದ್ ಅಜೀಮ್ ಮತ್ತು ತಂಡ ಹಾಗೂ ಬೆಂಗಳೂರಿನ ಇಂಡಿಯನ್ ಆರ್ಮಿ ತಂಡದಲ್ಲಿ ಜೊತೆಯಾಗಿ ಸೇವೆ ಸಲ್ಲಿಸಿದ ಸಿಪಾಯಿಗಳಾದ ಶ್ರೀ ಶೈಲಾಭಟ್ ಕುರ್ಕಿ, ಸಂದೀಪ್ ಪಾಟೀಲ್, ಪೊಲೀಸರು ಸೇರಿದಂತೆ ತಹಶೀಲ್ದಾರ್ ಹಾಗೂ ರಾಜಕೀಯ ಮುಖಂಡರು ಮತ್ತು ಅಪಾರ ಜನಸ್ತೋಮ ನೆರೆದಿತ್ತು. ಇದನ್ನೂ ಓದಿ: ನವೆಂಬರ್‌ನಲ್ಲಿ 1.45 ಲಕ್ಷ ಕೋಟಿ ಜಿಎಸ್‌ಟಿ ಸಂಗ್ರಹ – ಕರ್ನಾಟಕದ ಪಾಲು ಎಷ್ಟು?