ಚೆನ್ನೈ: ಮಂಗಳವಾರ ನಡೆದ ಲೋಕಸಭಾ ಚುನಾವಣೆಯಲ್ಲಿ ಕೇರಳದ ಕಣ್ಣೂರಿನ ಮತಗಟ್ಟೆಯೊಂದರ ವಿವಿ ಪ್ಯಾಟ್‍ನಲ್ಲಿ ಹಾವು ಸೇರಿಕೊಂಡಿತ್ತು. ತಮಿಳುನಾಡಿನ ಕೊಯಂಬತ್ತೂರಿನ ಥಾನಿರಪಂಡಾಲಾ ರಸ್ತೆಯ ಎಟಿಎಂ ಕೇಂದ್ರದಲ್ಲಿ ಹಾವು ಸೇರಿಕೊಂಡಿತ್ತು.
ಜನರು ಹಣ ಪಡೆದುಕೊಳ್ಳಲು ಎಟಿಎಂ ಮುಂದೆ ನಿಂತಿದ್ದರು. ಈ ವೇಳೆ ಒಬ್ಬರಿಗೆ ಎಟಿಎಂ ಕೇಂದ್ರದಲ್ಲಿ ಹಾವು ಕಾಣಿಸಿಕೊಂಡಿದೆ. ಕೂಡಲೇ ಹೊರ ಬಂದ ವ್ಯಕ್ತಿ ಜನರಿಗೆ ವಿಷಯ ತಿಳಿಸಿದ್ದಾರೆ. ಕೊನೆಗೆ ಉರಗ ರಕ್ಷಕರಿಗೆ ಕರೆಸಿ ಹಾವನ್ನು ಸೆರೆಹಿಡಿಯಲಾಗಿದೆ. ಬೇಸಿಗೆ ಆಗಿದ್ದರಿಂದ ತಂಪು ಪ್ರದೇಶಗಳತ್ತ ಹಾವುಗಳು ಆಗಮಿಸುತ್ತೇವೆ. ಹೀಗೆ ಬಂದಾಗ ಅವುಗಳನ್ನು ಸಾಯಿಸದೇ ನಮಗೆ ಮಾಹಿತಿ ನೀಡಿ ಎಂದು ಉರಗ ತಜ್ಞರು ತಿಳಿಸಿದ್ದಾರೆ.
Advertisement
Advertisement
ಹಾವು ಎಟಿಎಂ ಹಿಂದೆ ಮತ್ತು ಎಸಿ ಹತ್ತಿರ ಕುಳಿತಿತ್ತು. ಉರಗ ತಜ್ಞ ಹಾವನ್ನು ಸೆರೆಹಿಡಿಯುವ ದೃಶ್ಯಗಳನ್ನು ಸ್ಥಳೀಯರು ತಮ್ಮ ಮೊಬೈಲಿನಲ್ಲಿ ಸೆರೆ ಹಿಡಿದುಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿಕೊಂಡಿದ್ದಾರೆ.
Advertisement
ಮಂಗಳವಾರ ಕಣ್ಣೂರು ಲೋಕಸಭಾ ಕ್ಷೇತ್ರದ ಮಯ್ಯಿಲ್ ಕಂದಕ್ಕಯಿ ನಿರ್ವಾಚನದ ಬೂತ್ ನಲ್ಲಿ ವಿವಿ ಪ್ಯಾಟ್ ತೆರೆಯುತ್ತಿದ್ದಂತೆ ಚಿಕ್ಕ ಹಾವು ಕಾಣಿಸಿಕೊಂಡಿತ್ತು. ಕೂಡಲೇ ಚುನಾವಣಾ ಸಿಬ್ಬಂದಿ ಸ್ಥಳೀಯರ ನೆರವಿನೊಂದಿಗೆ ಹಾವನ್ನು ಓಡಿಸಿ ಮತದಾನಕ್ಕೆ ಅನುಕೂಲ ಮಾಡಿಕೊಟ್ಟಿದ್ದರು.
Advertisement
#WATCH Tamil Nadu: A Snake found inside an ATM near Thaneerpandal Road in Coimbatore; later rescued by a snake catcher. ( 23.04.2019) pic.twitter.com/Yk6YSOIQVn
— ANI (@ANI) April 24, 2019