ಪಾಟ್ನಾ: ವೈದ್ಯ (Doctor) ರ ಗುಂಪೊಂದು ವ್ಯಕ್ತಿಯ ಹೊಟ್ಟೆಯಿಂದ ಸ್ಟೀಲ್ ಲೋಟವನ್ನು ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದ ವಿಲಕ್ಷಣ ಘಟನೆಯೊಂದು ಬಿಹಾರದ ಪಾಟ್ನಾದಲ್ಲಿ ನಡೆದಿದೆ.
ವ್ಯಕ್ತಿಯನ್ನು ರಿತೇಶ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ ಹೊಟ್ಟೆಯಿಂದ 5.5 ಇಂಚು ಉದ್ದದ ಗ್ಲಾಸ್ ಹೊರತೆಗೆಯಲಾಗಿದೆ. ಇದನ್ನೂ ಓದಿ: ಕೇರಳದಲ್ಲಿ ನರಬಲಿ ಪ್ರಕರಣ – ಮಹಿಳೆ ದೇಹವನ್ನು 56 ತುಂಡು ಮಾಡಿ ಭಕ್ಷಿಸಿರುವ ಶಂಕೆ
Advertisement
Advertisement
ತೀವ್ರ ಹೊಟ್ಟೆ ನೋವಿನಿಂದ ಬಳಲುತ್ತಿದ್ದ ರಿತೇಶ್, ಪಾಟ್ನಾ ಮೆಡಿಕಲ್ ಕಾಲೇಜ್ ಹಾಗೂ ಹಾಸ್ಪಿಟಲ್ (ಪಿಎಂಸಿಹೆಚ್) ಗೆ ಬಂದಿದ್ದಾನೆ. ಈ ವೇಳೆ ವೈದ್ಯರು ಆತನಿಗೆ ಎಕ್ಸ್ ರೇ ಮಾಡಿದ್ದಾರೆ. ಎಕ್ಸ್ ರೇ ನೋಡಿದ ವೈದ್ಯರೇ ದಂಗಾಗಿ ಹೋಗಿದ್ದಾರೆ. ರೋಗಿಯನ್ನು ಪರೀಕ್ಷೆ ಮಾಡಿದ ವೈದ್ಯರು ತಕ್ಷಣ ಆತನಿಂದ ಯಾವುದೇ ಹಣವನ್ನು ತೆಗೆದುಕೊಳ್ಳದೆ ಚಿಕಿತ್ಸೆ ನೀಡಲು ನಿರ್ಧರಿಸಿದರು.
Advertisement
Advertisement
ರಿತೇಶ್ ಹೊಟ್ಟೆಯೊಳಗೆ ಸ್ಟೀಲ್ ಗ್ಲಾಸ್ (Steel Glass) ಹೇಗೆ ಇಳಿಯಿತು ಎಂಬುದರ ಕುರಿತು ಮಾತನಾಡಿದ ವೈದ್ಯರು, ಘಟನೆ ನಡೆದಾಗ ರೋಗಿಯು ಕುಡಿದಿರಬೇಕು ಅಥವಾ ಯಾರಾದರೂ ಅದನ್ನು ಅವನ ದೇಹದೊಳಗೆ ಹಾಕಿರಬೇಕು ಎಂದು ತಿಳಿಸಿದ್ದಾರೆ. ಸದ್ಯ ರೋಗಿಯು ಈ ಬಗ್ಗೆ ಸ್ಪಷ್ಟವಾಗಿ ತಿಳಿಸಲು ಸಾಧ್ಯವಿಲ್ಲ. ಹೀಗಾಗಿ ಆತ ಸಂಪೂರ್ಣ ಗುಣಮುಖನಾದ ಬಳಿಕ ಆತನಿಂದ ಕಾರಣ ಕೇಳಲಾಗುವುದು ಎಂದು ಅವರು ಹೇಳಿದ್ದಾರೆ.
ಆಪರೇಷನ್ ಯಶಸ್ವಿಯಾಗಿದ್ದಕ್ಕೆ ವೈದ್ಯರು ಸಂತಸ ವ್ಯಕ್ತಪಡಿಸಿದ್ದು, ಸದ್ಯ ರೋಗಿ ಐಸಿಯುನಲ್ಲಿದ್ದಾರೆ. ಈ ರೀತಿಯ ಯಾವುದೇ ಪ್ರಕರಣವನ್ನು ಎಂದಿಗೂ ಪರಿಗಣಿಸಿಲ್ಲ ಎಂದು ಇದೇ ವೇಳೆ ಡಾ.ಕುಮಾರ್ ಬೈಭವ್ ಹೇಳಿದರು.