ಬೆಂಗಳೂರು: ಇತ್ತ ಬೆಂಗಳೂರಿಗರಿಗೆ ಬಿಎಂಟಿಸಿ ಬಸ್ ಯಮಸ್ವರೂಪಿಯಾದ್ರೆ… ಅತ್ತ ಬಿಬಿಎಂಪಿ ಕಸದ ಲಾರಿಯೂ (BBMP Garbage Truck) ಅಮಾಯಕರ ಜೀವಗಳನ್ನು ಬಲಿ ಪಡೆಯುತ್ತಿದೆ. ಕಸದ ಲಾರಿಗಳಿಂದ ಸಾಲು-ಸಾಲು ಆಕ್ಸಿಡೆಂಟ್ ಆಗುತ್ತಿದ್ರೆ, ಬಲಿಯಾದವರ ಸಂಖ್ಯೆಯೂ ಹೆಚ್ಚಾಗುತ್ತಲೇ ಇದೆ.
ನಿನ್ನೆ 12 ವರ್ಷದ ಬಾಲಕನನ್ನು ಕಸದ ಲಾರಿ ಬಲಿ ಪಡೆದಿದೆ. ಯಮಸ್ವರೂಪಿ ಕಸದ ಲಾರಿ ವಿರುದ್ಧ ಜನ ನಿಗಿನಿಗಿ ಕೆಂಡವಾಗಿದ್ದಾರೆ. ಅಡ್ಡಾದಿಡ್ಡಿ ಚಾಲನೆ, ಓವರ್ ಸ್ಪೀಡ್, ರೂಲ್ಸ್ ಬ್ರೇಕ್‌ನಿಂದಲೇ ಅಪಘಾತಗಳ (Accident) ಸರಮಾಲೆ ಹೆಚ್ಚಾಗಿದೆ. ಸಾಲು-ಸಾಲು ಸಾವಾದ್ರೂ ಬಿಬಿಎಂಪಿಯಿಂದ ಯಾವ್ದೇ ಶಿಸ್ತು ಕ್ರಮವಾಗಿಲ್ಲ. ಹಾಗಿದ್ರೆ, ಕಸದ ಲಾರಿಗಳ ಬಲಿಯಾಟಕ್ಕೆ ಬ್ರೇಕ್ ಯಾವಾಗ.. ಈವರೆಗೂ ಬಲಿಯಾದವರೆಷ್ಟು ಅಂತ ನೋಡೋದಾದ್ರೆ..
* ದಿನಾಂಕ ಸೆಪ್ಟೆಂಬರ್ -22 – 2018
* ಸ್ಥಳ: ಯಶವಂತಪುರ ಟ್ರಾಫಿಕ್ ಪೊಲೀಸ್ ಠಾಣೆ
* 30 ವರ್ಷದ ಭುವನೇಶ್ವರಿ ಎಂಬ ಮಹಿಳೆ ಬಲಿ
* ಇದು ಕಸದ ಲಾರಿಗೆ ವರದಿಯಾಗಿರೋ ಮೊದಲ ಬಲಿ
* ದಿನಾಂಕ ಮಾರ್ಚ್/21/ 2022
* ಸ್ಥಳ: ಹೆಬ್ಬಾಳ
* ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಅಕ್ಷತಾ ಬಲಿ
* ದಿನಾಂಕ: ಮಾರ್ಚ್ 31/2022
* ಸ್ಥಳ: ಥಣಿಸಂದ್ರ ಮುಖ್ಯರಸ್ತೆ
* ದ್ವಿಚಕ್ರ ವಾಹನದಲ್ಲಿ ಹೋಗ್ತಿದ್ದ ಸವಾರ ಸಾವು
* ವಿ. ರಾಮಯ್ಯ 76 ವರ್ಷದ ವೃದ್ಧ ಬಲಿ
* ದಿನಾಂಕ: ಏಪ್ರಿಲ್ 18/2022
* ಸ್ಥಳ: ಮೈಸೂರು ರಸ್ತೆ ನಾಯಂಡಹಳ್ಳಿ ಜಂಕ್ಷನ್
* ಸ್ಕೂಟರ್‌ನಲ್ಲಿ ಹೋಗ್ತಿದ್ದ ಮಹಿಳೆ ಮೇಲೆ ಹರಿದ ಕಸದ ಲಾರಿ
* ಎಸ್‌ಬಿಐ ಬ್ಯಾಂಕ್ ಉದ್ಯೋಗಿ ಪದ್ಮಿನಿ (40) ಬಲಿ
ದಿನಾಂಕ ಮೇ 14/2022
* ಸ್ಥಳ: ನಾಗವಾರ ಮುಖ್ಯರಸ್ತೆ
* ಸ್ವಿಗ್ಗಿ ಡಿಲವರಿ ಬಾಯ್‌ನ ಪ್ರಾಣ ತೆಗೆದ ಕಸದ ಲಾರಿ
* ದೇವಣ್ಣ (25) ಯುವಕ ಕಸದ ಲಾರಿಗೆ ಬಲಿ
* ದಿನಾಂಕ: ಜುಲೈ 10/2022
* ಸ್ಥಳ: ನಾಗರಬಾವಿ ಸರ್ಕಲ್
* ದ್ವಿಚಕ್ರ ವಾಹನದ ಮೇಲೆ ಹರಿದ ಕಸದ ಲಾರಿ
* ಕಲಾ (37) ವರ್ಷದ ಮಹಿಳೆ ಸಾವು
* ಪತಿ ಯೋಗೇಂದ್ರ ಗಂಭೀರ ಗಾಯ
* ದಿನಾಂಕ: ನವೆಂಬರ್ 29/2022
* ಸ್ಥಳ: ದೊಡ್ಡಬಳ್ಳಾಪುರದ ಚಿಗರೇನಹಳ್ಳಿ ಡಂಪ್ ಯಾರ್ಡ್
* ಬಿಬಿಎಂಪಿ ಕಸದ ಲಾರಿಗೆ ಇಬ್ಬರು ಯುವಕರು ಬಲಿ
* ಮಾರುತಿ ಮತ್ತು ಮಹೇಶ್ ಮೃತ ದುರ್ದೈವಿಗಳು
* ದಿನಾಂಕ: ಜುಲೈ 17/2023
* ಸ್ಥಳ: ಹಡ್ಸನ್ ಸರ್ಕಲ್
* ರಸ್ತೆ ದಾಟುತ್ತಿದ್ದ ಮಹಿಳೆಗೆ ಗುದ್ದಿದ್ದ ಕಸದ ಲಾರಿ
* ಮುನಿಯಮ್ಮ 60 ವರ್ಷದ ವೃದ್ದೆ ಸಾವು
* ದಿನಾಂಕ: ಸೆಪ್ಟೆಂಬರ್ 25/2023
* ಸ್ಥಳ: ಜಯನಗರ ಮೆಟ್ರೋ ನಿಲ್ದಾಣ
* ನವವಿವಾಹಿತ ಬಲಿ ಪಡೆದ ಬಿಬಿಎಂಪಿ ಕಸದ ಲಾರಿ
* ವೈಜ್ಞಾನಿಕ ಪಾರ್ಕಿಂಗ್ ಮಾಡಿದ್ದ ಲಾರಿ
* ಲಾರಿ ಕಾಣದೆ ಬೈಕ್‌ನಲ್ಲಿ ಗುದ್ದಿ ಸಾವು
* ರಾಮನಗರದ ಯಶವಂತ ಬಲಿಯಾದ ಯುವಕ
* ದಿನಾಂಕ: ಜನವರಿ 29/2024
* ಸ್ಥಳ: ಪುಲಕೇಶಿನಗರದ ಮಸೀದಿ ರೋಡ್
* 14 ವರ್ಷದ ವಿದ್ಯಾರ್ಥಿನಿ ಮೇಲೆ ಹರಿದ ಕಸದ ಲಾರಿ
* ದಿನಾಂಕ: ಜುಲೈ 28/2024
* ಸ್ಥಳ: ಶೇಷಾದ್ರಿ ರೋಡ್, ಕೆಆರ್ ಸರ್ಕಲ್
* ಇಬ್ಬರ ಸಾವಿಗೆ ಕಾರಣವಾಗಿರೋ ಬಿಬಿಎಂಪಿ ಕಸದ ಲಾರಿ
* ಪ್ರಶಾಂತ್ (25), ಶಿಲ್ಪಾ(27) ಇಬ್ಬರು ಟೆಕ್ಕಿಗಳು ಬಲಿ
* ದಿನಾಂಕ: ಜನವರಿ 05/2025
* ಸ್ಥಳ: ನಾಗವಾರ ಮುಖ್ಯರಸ್ತೆ ಥಣಿಸಂದ್ರ..
* ಸಹೋದರಿಯರನ್ನ ಬಲಿ ಪಡೆದಿದ್ದ ಕಸದ ಲಾರಿ
* ದ್ವಿಚಕ್ರವಾಹನದಲ್ಲಿ ಬರುತ್ತಿದ್ದಾಗ ಕಸದ ಲಾರಿ ಡಿಕ್ಕಿ
* ನಾಸೀಯಾ ಸುಲ್ತಾನ್, ನಾಸೀಯಾ ಇರ್ಫಾನ್ ಬಲಿ