ನವದೆಹಲಿ: ಮುಖ್ಯಮಂತ್ರಿಯಾಗುವ ಸಲುವಾಗಿ ಪಕ್ಷವನ್ನು ಒಡೆಯಬೇಡಿ ಒಟ್ಟಾಗಿ ಪಕ್ಷವನ್ನು ಮುನ್ನೆಡೆಸಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ಗೆ ದೆಹಲಿ ಮೂಲದ ಅನಾಮಧೇಯ ಹಿರಿಯ ವಕೀಲರೊಬ್ಬರು ಮನವಿ ಮಾಡಿದ್ದಾರೆ.
ಇಂದು ಇಡಿ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಮುಗಿಸಿ ಡಿ.ಕೆ ಶಿವಕುಮಾರ್ ವಾಪಸ್ ಬರುವಾಗ, ನ್ಯಾಯಾಲಯ ಕಟ್ಟಡದ ಲಿಫ್ಟ್‌ನಲ್ಲಿ ಆಕಸ್ಮಿಕವಾಗಿ ಸಿಕ್ಕ ದೆಹಲಿ ಮೂಲದ ವಕೀಲರೊಬ್ಬರು ಡಿ.ಕೆ ಶಿವಕುಮಾರ್‌ಗೆ ಹೀಗೆ ಮನವಿ ಮಾಡಿದ್ದರು. ಇದನ್ನೂ ಓದಿ: ಫಸ್ಟ್ ಟೈಂ ಬೆಂಗಳೂರಿನಲ್ಲಿ ಲ್ಯಾಂಡ್ ಆಗಲಿದೆ ವಿಶ್ವದ ಅತಿ ದೊಡ್ಡ ಸೂಪರ್‌ಜಂಬೋ ವಿಮಾನ
Advertisement
Advertisement
ಡಿ.ಕೆ ಶಿವಕುಮಾರ್ ಲಿಫ್ಟ್ ಪ್ರವೇಶ ಮಾಡುತ್ತಿದ್ದಂತೆ ವಕೀಲರೊಬ್ಬರು ಅವರನ್ನು ಗುರುತಿಸಿದರು. ನೀವೂ ಡಿ.ಕೆ ಶಿವಕುಮಾರ್ ಅಲ್ಲವೇ ಎಂದು ಕೇಳಿದರು. ಅದಕ್ಕೆ ಡಿ.ಕೆ ಶಿವಕುಮಾರ್ ಹೌದು ಎಂದರು. ಬಳಿಕ ಮಾತು ಮುಂದುವರಿಸಿದ ಆ ಹಿರಿಯ ವಕೀಲ, ನಾನು ನಿಮ್ಮನ್ನು ಟಿವಿಯಲ್ಲಿ ಬಹಳ ಸಲ ನೋಡಿದ್ದೇನೆ. ಉತ್ತಮ ನಾಯಕರು, ನೀವೂ ಪಕ್ಷವನ್ನು ಕಟ್ಟುತ್ತಿದ್ದೀರಿ ಎಂದರು.
Advertisement
ಕರ್ನಾಟಕದಲ್ಲಿ ನಿಮಗೆ ಅವಕಾಶಗಳಿದಿಯೇ ಎಂದು ಡಿ.ಕೆ ಶಿವಕುಮಾರ್ ಅವರನ್ನು ಪ್ರಶ್ನೆ ಮಾಡಿದರು. ಅದಕ್ಕೆ ಹೌದು ಉತ್ತಮ ಅವಕಾಶಗಳಿದೆ ಎಂದರು. ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ವಕೀಲ ನೀವೂ ಸಿಎಂ ಆಗಬೇಕು ಸರ್..! ಆದರೆ ಸಿಎಂ ಆಗಲು ಪಕ್ಷವನ್ನು ಒಡೆಯಬೇಡಿ ಎಂದು ಮನವಿ ಮಾಡಿದರು. ಇದನ್ನೂ ಓದಿ: ಭಾರತದ ಅತಿ ಉದ್ದದ ಸರಕು ರೈಲು ‘ಸೂಪರ್ ವಾಸುಕಿ’ – ಇದರ ವಿಶೇಷತೆ ಏನು ಗೊತ್ತಾ?
Advertisement
ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಕೆ ಶಿವಕುಮಾರ್ ನಾನು ಪಕ್ಷ ಒಡೆಯುವ ಕೆಲಸ ಎಂದೂ ಮಾಡುವುದಿಲ್ಲ, ಪಕ್ಷ ಕಟ್ಟುತ್ತಿದ್ದೇನೆ, ಅಧಿಕಾರಕ್ಕೆ ತರುತ್ತೇವೆ ಎಂದು ಮುಗುಳು ನಗುತ್ತಾ ಭರವಸೆ ನೀಡಿದರು.