ಬೆಂಗಳೂರು: ಅಪ್ಪ-ಅಮ್ಮನಿಗೆ ತುಂಬಾ ಕಷ್ಟ ಆಗ್ತಿದೆ, ನನ್ನ ಫ್ರೆಂಡ್ಸ್‌ಗೂ ಕಷ್ಟ ಆಗ್ತಿದೆ. ಲೆಟರ್ ಕಳಿಸಿರೋನ ವಿರುದ್ಧ ನಾನಂತೂ ಪೊಲೀಸ್ ಕಂಪ್ಲೇಂಟ್ (Police Complaint) ಕೊಟ್ಟೇ ಕೊಡ್ತೀನಿ… ಇದು ಬಾಂಬ್ ಬೆದರಿಕೆಗೆ ಒಳಗಿದ್ದ ಶಾಲೆಯ ಪುಟ್ಟ ಬಾಲಕನ (School Boy) ಆಕ್ರೋಶದ ನುಡಿ…
ಉಗ್ರ ಸಂಘಟನೆ ಮುಜಾಹಿದ್ದೀನ್ ಬೆಂಬಲಿಸಿ ಬೆಂಗಳೂರಿನ (Bengaluru) 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ (Bomb Threat) ಹಾಕಿದ್ದಾರೆ. ಇ-ಮೇಲ್ ಮೂಲಕ ನಗರದ ಬಸವೇಶ್ವರ ನಗದರ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಕೇಳಿಬಂದಿದೆ. ಈ ಬೆನ್ನಲ್ಲೇ ಬೆದರಿಕೆ ಬಂದಿರುವ ಶಾಲೆಗಳಿಗೆ ರಜೆ ಘೋಷಿಸಲಾಗಿದ್ದು, ಪೋಷಕರು ಆತಂಕದಲ್ಲಿ ಬಂದು ಮಕ್ಕಳನ್ನು ಕರೆದೊಯ್ಯುತ್ತಿದ್ದಾರೆ. ಇದನ್ನೂ ಓದಿ: ಮುಸ್ಲಿಮರ ಅವಹೇಳನ ಮಾಡ್ತಿರೋದಕ್ಕೆ ಬಾಂಬ್ ಬೆದರಿಕೆ ಸಂದೇಶ: ಆರ್.ಅಶೋಕ್
ಈ ಸಂದರ್ಭದಲ್ಲಿ ಪುಟ್ಟ ಬಾಲಕನೊಬ್ಬ ʻಪಬ್ಲಿಕ್ ಟಿವಿʼಯೊಂದಿಗೆ (Public TV) ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾನೆ. ಅಪ್ಪ-ಅಮ್ಮ ಕೆಲಸಕ್ಕೆ ಹೋಗಿರ್ತಾರೆ, ಅವರಿಗೂ ಕೆಲಸ ಇರುತ್ತೆ. ಹೇಗೋ ಕಷ್ಟಪಟ್ಟು ಶಾಲೆಗೆ ಕರೆದುಕೊಂಡು ಬರ್ತಾರೆ. ಪುನಃ ಶಾಲೆಗೆ ಬಂದು ಕರ್ಕೊಂಡ್ ಹೋಗ್ಬೇಕು ಅಂದ್ರೆ ಅವರಿಗೂ ಕಷ್ಟ ಆಗುತ್ತೆ. ನನ್ನ ಫ್ರೆಂಡ್ಸ್‌ಗೂ ಕಷ್ಟ ಆಗಿದೆ. ಬೆದರಿಕೆ ಲೆಟರ್ ಕಳಿಸಿದವನ ವಿರುದ್ಧ ಪೊಲೀಸ್ ಕಂಪ್ಲೆಂಟ್ ಕೊಟ್ಟೇ ಕೊಡ್ತೀನಿ ಎಂದು ಹೇಳಿಕೊಂಡಿದ್ದಾನೆ. ಇದನ್ನೂ ಓದಿ: ಡಿಕೆಶಿ ಮನೆ ಎದುರಿನ ಶಾಲೆಗೂ ಬಾಂಬ್ ಬೆದರಿಕೆ – ಸ್ಥಳಕ್ಕೆ ಭೇಟಿ ನೀಡಿ ಖುದ್ದು ಮಾಹಿತಿ ಪಡೆದ ಡಿಸಿಎಂ
20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ:
ಬೆಂಗಳೂರಿನ 15ಕ್ಕೂ ಹೆಚ್ಚು ಶಾಲೆಗಳಿಗೆ ಆಗಂತುಕರು ಬಾಂಬ್ ಬೆದರಿಕೆ ಹಾಕಿರುವ ಸಂಗತಿ ಬೆಳಿಕೆ ಬಂದಿತ್ತು. ತನಿಖೆ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿರುವುದು ಬೆಳಕಿಗೆ ಬಂದಿದೆ. ನಗರದ ಬಸವೇಶ್ವರ ನಗರದ ನ್ಯಾಪಲ್, ವಿದ್ಯಾಶಿಲ್ಪ ಸೇರಿದಂತೆ 20ಕ್ಕೂ ಹೆಚ್ಚು ಶಾಲೆಗಳಿಗೆ ಬಾಂಬ್ ಬೆದರಿಕೆ ಹಾಕಿದ್ದಾರೆ. ಬಾಂಬ್ ಬೆದರಿಕೆಯ ಹಿನ್ನೆಲೆಯಲ್ಲಿ ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದು, ಮಕ್ಕಳನ್ನು ಶಾಲೆಯಿಂದ ಮನೆಗೆ ವಾಪಸ್ ಕಳುಹಿಸಿದ್ದಾರೆ.
ಖಾರಿಜೈಟ್ಸ್ ಎಂಬ ಮೂಲಭೂತವಾದಿ ಸಂಘಟನೆ ಹೆಸರಲ್ಲಿ ಬಂದ ಇ-ಮೇಲ್ ಬಂದಿದೆ. ಎಲ್ಲಾ ಶಾಲೆಗೂ ಒಂದೇ ರೀತಿಯ ಇ- ಮೇಲ್ ಬಂದಿರುವ ಮಾಹಿತಿ ಲಭ್ಯವಾಗಿದ್ದು, ರಾಜಕೀಯ ನಾಯಕರು ಆತಂಕ ಹೊರಹಾಕಿದ್ದಾರೆ. ಇದನ್ನೂ ಓದಿ: Bomb Threat: ಇಸ್ಲಾಂಗೆ ಮತಾಂತರವಾಗಿ ಇಲ್ಲವೇ ಸಾಯಲು ಸಿದ್ಧರಾಗಿ; ಖಾರಿಜೈಟ್ಸ್ ಹೆಸರಲ್ಲಿ ಇ-ಮೇಲ್