ಚಿಕ್ಕೋಡಿ: ದೇವಸ್ಥಾನ ಕಂಪೌಂಡ್ ಗೋಡೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪಿಎಸ್‍ಐ ಹಾಗೂ ಶಿಕ್ಷಕನೋರ್ವನ ಮಧ್ಯೆ ಗಲಾಟೆ ಆಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ನಡೆದಿದೆ.
ಮುಗಳಖೋಡ ಪಟ್ಟಣದ ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡುವ ವಿಚಾರವಾಗಿ ಜಗಳ ನಡೆದಿದೆ. ಹಾರೂಗೇರಿ ಪಿಎಸ್‍ಐ ರಾಘವೇಂದ್ರ ಖೋತ್ ಹಾಗೂ ಶಿಕ್ಷಕ ಚಂದ್ರು ಲಮಾಣಿ ಮಧ್ಯೆ ವಾಗ್ವಾದ ನಡೆದಿದೆ. ದುರ್ಗಾದೇವಿ ಸೇವಾಲಾಲ್ ದೇವಸ್ಥಾಕ್ಕೆ ಕಂಪೌಂಡ್ ನಿರ್ಮಾಣ ಮಾಡಲು ಪುರಸಭೆ ಅಧಿಕಾರಿಗಳು ತಯಾರಿ ನಡೆಸಿದ್ದರು.
Advertisement
Advertisement
ಶಿಕ್ಷಕ ಚಂದ್ರು ಲಮಾಣಿ ಇದನ್ನು ವಿರೋಧಿಸಿದ ಕಾರಣ ಪುರಸಭೆ ಅಧಿಕಾರಿಗಳು ಪೊಲೀಸರ ಮೊರೆ ಹೋಗಿದ್ದರು. ಪುರಸಭೆ ಅಧಿಕಾರಿಗಳ ದೂರಿನನ್ವಯ ಸ್ಥಳ ಪರಿಶೀಲನೆ ಮಾಡಲು ಹೋಗಿದ್ದ ಸಂದರ್ಭದಲ್ಲಿ ಈ ಗಲಾಟೆ ನಡೆದಿದೆ. ಇದನ್ನೂ ಓದಿ: ಹಣ ಇದ್ದವರು ಮಾತ್ರ ಸಿಎಂ ಆಗ್ತಾರೆ ಅನ್ನೋದು ಇತಿಹಾಸದಲ್ಲೇ ಇಲ್ಲ – ಯತ್ನಾಳ್‍ಗೆ ಶ್ರೀರಾಮುಲು ತಿರುಗೇಟು
Advertisement
ಸ್ಥಳ ಪರಿಶೀಲನೆಕ್ಕೆ ಬಂದು ಪಿಎಸ್‍ಐ ದರ್ಪ ತೋರಿದ್ದಾರೆ ಎಂದು ಶಿಕ್ಷಕ ಚಂದ್ರು ಆರೋಪಿಸಿದ್ದಾರೆ. ಘಟನೆಯಲ್ಲಿ ಶಿಕ್ಷಕನ ಕುಟುಂಬಸ್ಥರಿಂದ ಪಿಎಸ್‍ಐಗೆ ಆವಾಜ್ ಹಾಕಿರುವದು ಮೊಬೈಲ್‍ನಲ್ಲಿ ಸೆರೆಯಾಗಿದೆ. ಹಾರೂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪಿಎಸ್‍ಐ ಹಾಗೂ ಶಿಕ್ಷಕ ಇಬ್ಬರ ನಡುವಿನ ಗಲಾಟೆ ವೀಡಿಯೋ ವೈರಲ್ ಆಗಿದೆ. ಇದನ್ನೂ ಓದಿ: ನಾಲ್ಕೂವರೆ ವರ್ಷಗಳಿಂದ ಶೂ, ಜೀನ್ಸ್, ಶರ್ಟ್, ಕಾವಿ ಕುಳಿತಲ್ಲೇ ಕುಳಿತಲ್ಲೇ ಕುಳಿತ ಶವ!