ಶಿವಮೊಗ್ಗ: ಹೊಟ್ಟೆನೋವು ಎಂದು ಕೂಗಾಡುತ್ತಿದ್ದ ಕೈದಿಯೊಬ್ಬನನ್ನು ವೈದ್ಯರ ಬಳಿ ಕರೆದುಕೊಂಡು ಹೋದಾಗ ಆತನ ಹೊಟ್ಟೆಯಲ್ಲಿ ಮೊಬೈಲ್ ಇರುವುದನ್ನು ಕಂಡು ವೈದ್ಯರೇ ದಂಗಾದ ಘಟನೆ ಶಿವಮೊಗ್ಗದಲ್ಲಿ (Shivamogga) ನಡೆದಿದೆ. ಶಿವಮೊಗ್ಗದ ಕೇಂದ್ರ ಕಾರಾಗೃಹದಲ್ಲಿ ಈ ಘಟನೆ ನಡೆದಿದೆ. ಕೈದಿಯನ್ನು ಪರಶುರಾಮ ಎಂದು ಗುರುತಿಸಲಾಗಿದೆ.
- Advertisement -
ಗೊತ್ತಾಗಿದ್ದು ಹೇಗೆ..?: ಪರಶುರಾಮ ಹೊಟ್ಟೆನೋವು ಎಂದು ಕೂಗಾಡುತ್ತಿದ್ದನು. ಹೀಗಾಗಿ ಆತನಿಗೆ ಮೊದಲು ಕಾರಾಗೃಹದಲ್ಲೇ ಚಿಕಿತ್ಸೆ ನೀಡಲಾಯಿತು. ಬಳಿಕ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಈ ವೇಳೆ ಕಲ್ಲು ನುಂಗಿರುವ ಬಗ್ಗೆ ವೈದ್ಯರು ಹೇಳಿದ್ದಾರೆ. ನಂತರ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ವಿಕ್ಟೋರಿಯಾ ಆಸ್ಪತ್ರೆಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಇಲ್ಲಿ ಪರಶುರಾಮನ ಹೊಟ್ಟೆಯಲ್ಲಿ ಮೊಬೈಲ್ ಇರುವುದು ಬಯಲಾಗಿದೆ. ಕೂಡಲೇ ಶಸ್ತ್ರಚಿಕಿತ್ಸೆಯ ಮೂಲಕ ಆತನ ಹೊಟ್ಟೆಯಲ್ಲಿದ್ದ ಮೊಬೈಲ್ ಅನ್ನು ಹೊರತೆಗೆಯುವಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಯಶಸ್ವಿಯಾಗಿದ್ದಾರೆ. ಇದನ್ನೂ ಓದಿ: ತಕ್ಷಣವೇ ವಿಚಾರಣೆಗೆ ಹಾಜರಾಗಿ- ಪ್ರಜ್ವಲ್, ಹೆಚ್.ಡಿ ರೇವಣ್ಣಗೆ ಎಸ್‍ಐಟಿ ನೋಟಿಸ್
ಭದ್ರತಾ ವೈಫಲ್ಯವಾಯ್ತಾ..?: ಒಟ್ಟಿನಲ್ಲಿ ಕಾರಾಗೃಹದಲ್ಲಿ ಭದ್ರತಾ ವ್ಯವಸ್ಥೆ ನಡುವೆಯೂ ಜೈಲಿನೊಳಗೆ ಮೊಬೈಲ್ ತೆಗೆದುಕೊಂಡು ಹೋಗಿದ್ದು ಹೇಗೆ ಎಂಬ ಪ್ರಶ್ನೆ ಎದ್ದಿದೆ. ಮೊಬೈಲ್ ಒಳಗೆ ತೆಗೆದುಕೊಂಡ ಹೋದ ಪರಿಣಾಮ ಭದ್ರತಾ ವೈಫಲ್ಯದ ಬಗ್ಗೆ ಅನುಮಾನ ಎದ್ದಿದೆ. ಅಲ್ಲದೇ ಮೊಬೈಲ್ ನುಂಗಿದ್ದ ಬಗ್ಗೆ ತುಂಗಾನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.