Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಆನ್‌ಲೈನ್ ಬೆಟ್ಟಿಂಗ್‌ಗಾಗಿ ಬಡವರ ಹಣಕ್ಕೆ ಕನ್ನ – 10 ಲಕ್ಷ ವಂಚಿಸಿ ಪರಾರಿಯಾದ ಪೋಸ್ಟ್ ಮಾಸ್ಟರ್
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Districts | Chikkaballapur | ಆನ್‌ಲೈನ್ ಬೆಟ್ಟಿಂಗ್‌ಗಾಗಿ ಬಡವರ ಹಣಕ್ಕೆ ಕನ್ನ – 10 ಲಕ್ಷ ವಂಚಿಸಿ ಪರಾರಿಯಾದ ಪೋಸ್ಟ್ ಮಾಸ್ಟರ್

Chikkaballapur

ಆನ್‌ಲೈನ್ ಬೆಟ್ಟಿಂಗ್‌ಗಾಗಿ ಬಡವರ ಹಣಕ್ಕೆ ಕನ್ನ – 10 ಲಕ್ಷ ವಂಚಿಸಿ ಪರಾರಿಯಾದ ಪೋಸ್ಟ್ ಮಾಸ್ಟರ್

Public TV
Last updated: September 30, 2025 8:04 am
Public TV
Share
2 Min Read
post master fraud
SHARE

– ವೃದ್ಧರ ಪಿಂಚಣಿ ಹಣವನ್ನೂ ನುಂಗಿದ ಆಸಾಮಿ

ಚಿಕ್ಕಬಳ್ಳಾಪುರ: ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಆನ್‌ಲೈನ್ ಬೆಟ್ಟಿಂಗ್‌ಗೆ ದಾಸನಾಗಿ ಬಡವರ ಹಣಕ್ಕೆ ಕನ್ನ ಹಾಕಿ ಪರಾರಿಯಾಗಿದ್ದಾನೆ.

ಚಿಕ್ಕಬಳ್ಳಾಪುರ ತಾಲೂಕಿನ ಚಿಕ್ಕಪೈಲಗುರ್ಕಿ ಗ್ರಾಮದ ಅಂಚೆ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪೋಸ್ಟ್ ಮಾಸ್ಟರ್ ನಿಂಗೇಶ್ ಎಂಬಾತ ಬಡವರ ಹಣವನ್ನೇ ಆನ್‌ಲೈನ್ ಬೆಟ್ಟಿಂಗ್‌ಗೆ ಹಾಕಿ ಕೈ ಸುಟ್ಟುಕೊಂಡು ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಅಂದಹಾಗೆ ಚಿಕ್ಕಪೈಲಗುರ್ಕಿ ಅಂಚೆ ಕಚೇರಿಗೆ 13 ಹಳ್ಳಿಗಳು ಸೇರಿದ್ದು, ನೂರಾರು ಮಂದಿ ಹಳ್ಳಿ ಜನ ದುಡಿದ ಹಣವನ್ನ ಅಂಚೆ ಕಚೇರಿಯ ಖಾತೆಗಳಲ್ಲಿ ಜಮೆ ಮಾಡಿಕೊಂಡಿದ್ರು. ಅದರಲ್ಲೂ ಹಳ್ಳಿಗಾಡಿನಲ್ಲಿ ವಯೋವೃದ್ಧರಿಗೆ ಬರುವ ಪಿಂಚಣಿ ಸಹ ಇದೇ ಅಂಚೆ ಕಚೇರಿಯ ಮೂಲಕವೇ ಬರ್ತಿತ್ತು. ಪೆನ್ಷನ್, ಕೂಲಿ, ಆರ್‌ಡಿ, ಎಫ್‌ಡಿ ಹೀಗೆ ಬಡವರ ಖಾತಗೆಳಲ್ಲಿರಬೇಕಾದ ಹಣವನ್ನೆಲ್ಲಾ ಪೋಸ್ಟ್ ಮಾಸ್ಟರ್ ನಿಂಗೇಶ್ ಆನ್‌ಲೈನ್ ಗೇಮ್‌ಗಾಗಿ ಬಳಸಿಕೊಂಡಿದ್ದಾನೆ. ಹಳ್ಳಿಯ ಜನ ಕೇಳಿದಾಗ ಇನ್ನೂ ಬಂದಿಲ್ಲ ಅಂತ ಸುಳ್ಳು ಹೇಳಿಕೊಂಡು ಓಡಾಡಿಕೊಂಡಿದ್ದಾನೆ. ಜೋರಾಗಿ ಮಾತಾಡುವವರಿಗೆ ಆಗಾಗ್ಗೆ ಒಂದಷ್ಟು ಹಣ ಕೊಟ್ಟು ಸಮಾಧಾನ ಮಾಡಿಕೊಂಡು ಬಂದಿದ್ದಾನೆ. ಆದರೆ, ಈಗ ಬರೋಬ್ಬರಿ 10 ಲಕ್ಷಕ್ಕೂ ಅಧಿಕ ಹಣವನ್ನ ದುರುಪಯೋಗ ಮಾಡಿಕೊಂಡಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: ಹಾಸನ | ಮನೆಯಲ್ಲಿ ನಿಗೂಢ ಸ್ಫೋಟ – ಝೀರೋ ಟ್ರಾಫಿಕ್‍ನಲ್ಲಿ ಗಾಯಾಳುಗಳನ್ನು ಬೆಂಗಳೂರಿನ ಆಸ್ಪತ್ರೆಗೆ ರವಾನೆ

ಮೂಲತಃ ಚಿತ್ರದುರ್ಗ ಜಿಲ್ಲೆಯ ನಿಂಗೇಶ್ ಕಳೆದ 2 ವರ್ಷಗಳ ಹಿಂದಷ್ಟೇ ಚಿಕ್ಕಪೈಲಗುರ್ಕಿ ಗ್ರಾಮದ ಅಂಚೆಕಚೇರಿಗೆ ಕೆಲಸಕ್ಕೆ ಸೇರಿಕೊಂಡಿದ್ದ. ಆರಂಭದಲ್ಲಿ ಚೆನ್ನಾಗಿ ಕೆಲಸ ಮಾಡಿಕೊಂಡು ಗ್ರಾಮಸ್ಥರ ಮೆಚ್ಚುಗೆಗೆ ಪಾತ್ರನಾಗಿದ್ದ. ಕಳೆದ ಒಂದು ವರ್ಷದಿಂದ ಆನ್‌ಲೈನ್ ಬೆಟ್ಟಿಂಗ್ ಆ್ಯಪ್‌ಗಳ ದಾಸನಾಗಿ ದುಡ್ಡನ್ನೆಲ್ಲಾ ಅದಕ್ಕೆ ಹಾಕಿ ಹಾಳು ಮಾಡಿಕೊಂಡಿದ್ದ. ಸಾಲದು ಅಂತ ಬಡವರ ಹಣವನ್ನ ಹಾಕಿ ಸಾಕಷ್ಟು ಸಾಲಸೋಲ ಮಾಡಿಕೊಂಡಿದ್ದ. ವೃದ್ಧರಿಗೆ ಬರುತ್ತಿದ್ದ ಪಿಂಚಣಿ ಹಣವನ್ನೂ ಸಹ ಬಿಡದೆ ಪೋಸ್ಟ್ ಮಾಸ್ಟರ್ ಲಿಂಗೇಶ್ ದುರಪಯೋಗ ಮಾಡಿಕೊಂಡಿದ್ದಾನೆ. ನರಸಿಂಹರೆಡ್ಡಿ ಎಂಬವರ ಮಕ್ಕಳ ಹೆಸರಲ್ಲಿ ಇಟ್ಟಿದ್ದ ಎಫ್‌ಡಿ ಹಣವನ್ನೂ ಡ್ರಾ ಮಾಡಿ ನುಂಗಿ ನೀರು ಕುಡಿದಿದ್ದಾನೆ. ಇದರಿಂದ ರೊಚ್ಚಿಗೆದ್ದ ನರಸಿಂಹರೆಡ್ಡಿ ಪೋಸ್ಟ್ ಮಾಸ್ಟರ್ ನಿಂಗೇಶ್ ಬೈಕ್ ಕಿತ್ತುಕೊಂಡು ಮನೆಯಲ್ಲಿಟ್ಟುಕೊಂಡಿದ್ದಾರೆ.

ವಿಷಯ ಬೆಳಕಿಗೆ ಬಂದ ತಕ್ಷಣ, ಅಂಚೆ ನಿರೀಕ್ಷಕರು ಹಾಗೂ ಉಪವಿಭಾಗಾಧಿಕಾರಿ ಶಶಿಕುಮಾರ್ ಚಿಕ್ಕಪೈಲಗುರ್ಕಿ ಅಂಚೆ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಒಂದು ತಿಂಗಳಿನಿಂದ ಅಂಚೆ ಕಚೇರಿಗೆ ಬಂದಿದ್ದ ಪತ್ರಗಳನ್ನು ಸಹ ಹಂಚದೆ ಕಚೇರಿಯಲ್ಲೇ ಬಿಟ್ಟು, ಕೊನೆಗೆ ನಿಂಗೇಶ್ ಪರಾರಿಯಾಗಿದ್ದಾನೆ. ಹೀಗಾಗಿ ಮೇಲಾಧಿಕಾರಿಗಳು ಆತನನ್ನ ಅಮಾನತು ಮಾಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ. ಇದನ್ನೂ ಓದಿ: ಬಿಜೆಪಿ ನಾಯಕರ ಬಣ್ಣ ಬಯಲಾಗುತ್ತಿದೆ, ಸಾರ್ವಜನಿಕರ ಎದುರು ಬೆತ್ತಲಾಗುತ್ತಿದ್ದಾರೆ: ಸಮೀಕ್ಷೆಯಲ್ಲಿ ಭಾಗಿಯಾಗುವಂತೆ ಸಿಎಂ ಮನವಿ

TAGGED:ChikkaballapurafraudPost Masterಚಿಕ್ಕಬಳ್ಳಾಪುರಪೋಸ್ಟ್ ಮಾಸ್ಟರ್ವಂಚನೆ
Share This Article
Facebook Whatsapp Whatsapp Telegram

Cinema news

Harshil Kalia jaipur accident
ಡಿವೈಡರ್‌ಗೆ ಕಾರು ಡಿಕ್ಕಿ – ಭೀಕರ ಅಪಘಾತದಲ್ಲಿ ನಟಿ ಸಾವು
Cinema Latest Main Post National
Ranveer Singh Rishab Shetty Kantara
ʻಕಾಂತಾರʼ ದೈವ ನಿಂದಿಸಿದ್ದ ರಣವೀರ್‌ಗೆ ಪಾಪಪ್ರಜ್ಞೆ – ಚಾಮುಂಡಿ ದೇಗುಲದಲ್ಲೇ ಕ್ಷಮೆ ಕೇಳಲು ನಿರ್ಧಾರ
Cinema Districts Karnataka Latest National Sandalwood South cinema Top Stories
Badshah Isha Rikhi Marriage
ಡಿವೋರ್ಸ್ ಪಡೆದು 6 ವರ್ಷಗಳ ಬಳಿಕ ರ‍್ಯಾಪರ್ ಬಾದ್‌ಶಾ ಎರಡನೇ ಮದುವೆ
Cinema Latest Top Stories
Dhurandhar 2 1
ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡ್ತಿದೆ ‘ಧುರಂಧರ್‌ 2’; 800 ಕೋಟಿ ಕ್ಲಬ್‌ ಸೇರುವತ್ತ ಓಟ
Bollywood Cinema Latest Top Stories

You Might Also Like

LPG 1
Bagalkot

ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

Public TV
By Public TV
4 minutes ago
Chikkaballapura
Chikkaballapur

2ನೇ ಮದ್ವೆಯಾಗ್ತಿದ್ದ ಗಂಡ – ತಾಳಿ ಕಟ್ಟೋ ವೇಳೆ ಮೊದಲ ಹೆಂಡ್ತಿ ಎಂಟ್ರಿ; ಮದುವೆ ರದ್ದು, ಪತಿ ಪೊಲೀಸರ ಅತಿಥಿ

Public TV
By Public TV
24 minutes ago
Money Bag Case
Bengaluru City

ಮತ್ತೊಂದು ʻಮನಿ ಬ್ಯಾಗ್ʼ ಕೇಸ್ – 6 ಲಕ್ಷ ಹಣದೊಂದಿಗೆ ವಿಧಾನಸೌಧಕ್ಕೆ ಬಂದಿದ್ದ ವ್ಯಕ್ತಿ

Public TV
By Public TV
41 minutes ago
all party meeting
Latest

ಮಧ್ಯಪ್ರಾಚ್ಯ ಬಿಕ್ಕಟ್ಟು – ಸರ್ವಪಕ್ಷಗಳ ಸಭೆ ಪ್ರಧಾನಿ ಮೋದಿ ಗೈರು; ವಿಪಕ್ಷಗಳ ತೀವ್ರ ಆಕ್ಷೇಪ

Public TV
By Public TV
55 minutes ago
R Ashok 2
Bengaluru City

ಸಾಲ ತೀರಿಸಲು ಸಾಲ ಮಾಡುವ ಪರಿಸ್ಥಿತಿ, ನಿಗಮ-ಇಲಾಖೆಗಳಿಗೆ ಹಣ ಕಡಿತ: ವಿಪಕ್ಷ ನಾಯಕ ಆರ್‌.ಅಶೋಕ್‌

Public TV
By Public TV
1 hour ago
Siddaramaiah 15
Bengaluru City

ರಾಜ್ಯ ಬಜೆಟ್ ಖಾಲಿ ಚೊಂಬಲ್ಲ, ತುಂಬಿದ ಕೊಡ – ಸಾಲ ಆರ್ಥಿಕ ಶಿಸ್ತು ಮೀರಿಲ್ಲ ಎಂದ ಸಿಎಂ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?