ಬೆಂಗಳೂರು: ದೇವರ ಮೈಮೇಲಿನ ಚಿನ್ನಾಭರಣವನ್ನು ಕದಿಯಲು ಬಂದಿದ್ದ ಕಳ್ಳ ದೇವರಿಗೆ ನಮಿಸಿ ಹಾಗೇ ಹೊರಬಂದಿರುವ ವಿಚಿತ್ರ ಘಟನೆ ರಾಜ್ಯ ರಾಜಧಾನಿಯಲ್ಲಿ ನಡೆದಿದೆ.
ಬೆಂಗಳೂರು ಹೊರವಲಯದ ತಾವರೆಕೆರೆಯ ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಈ ಘಟನೆ ನಡೆದಿದೆ. ದೇವಸ್ಥಾನದ ಬೀಗವೊಡೆದು ಒಳಗೆ ಪ್ರವೇಶಿಸಿದ ಕಳ್ಳ ಅರೆಬೆತ್ತಲಾಗಿ ಇಡೀ ದೇವಸ್ಥಾನದ ತುಂಬೆಲ್ಲಾ ಅಡ್ಡಾಡಿದ.
ನಂತರ ಗರ್ಭಗುಡಿಯ ಬಾಗಿಲು ತೆಗೆದು ಒಳಗೆ ಹೋದ. ಚಿನ್ನಾಭರಣ ಕದಿಯೋಕೆ ಬಂದು ದೇವರನ್ನು ನೋಡಿ ಫುಲ್ ಸೈಲೆಂಟ್ ಆದ. ಕೆಲ ಕಾಲ ಗರ್ಭಗುಡಿಯಲ್ಲೇ ಇದ್ದು ಭಕ್ತಿಯಿಂದ ದೇವರಿಗೆ ನಮಸ್ಕರಿಸಿದ್ದಾನೆ. ಆದರೆ ದೇವರ ಮೇಲಿನ ಯಾವುದೇ ಚಿನ್ನಾಭರಣ, ನಗದು ತೆಗೆದುಕೊಳ್ಳದೆ ಹೊರಗೆ ಬಂದಿದ್ದಾನೆ. ಇದನ್ನೂ ಓದಿ: ಕನ್ನಡದ ಕಬೀರ, ಪದ್ಮಶ್ರೀ ಪುರಸ್ಕೃತ ಇಬ್ರಾಹಿಂ ಸುತಾರ ನಿಧನ
ದೇವಸ್ಥಾನದಲ್ಲಿ ಕಳ್ಳನ ಓಡಾಟ, ಗರ್ಭಗುಡಿಗೆ ಪ್ರವೇಶಿಸಿದ ಎಲ್ಲಾ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಿಸಿಟಿವಿ ನೋಡಿದ ದೇವಸ್ಥಾನದ ಆಡಳಿತ ಮಂಡಳಿ ತಾವರೆಕೆರೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮುಂಬೈ ಸರಣಿ ಸ್ಫೋಟ ಪ್ರಕರಣದ ಮೋಸ್ಟ್ ವಾಂಟೆಡ್ ಭಯೋತ್ಪಾದಕ ಅರೆಸ್ಟ್