ರಾಯಚೂರು: ಮಂತ್ರಪಠಣ, ವಾಲಗಗಳ ಅಬ್ಬರವಿಲ್ಲದೇ ರಾಯಚೂರಿನಲ್ಲೊಂದು ಸಿಂಪಲ್ ಮದ್ವೆ ನಡೀತು. ಜಹಿರಬಾದ್‍ನ ಚಿತ್ರಕಲಾವಿದ ಮಲ್ಲಿಕಾರ್ಜುನ್ ಕಲ್ಯಾಣ ಕಲಾಶಿಬಿರ ನಡೆಸೋ ಮೂಲಕ ಅನಕ್ಷರಸ್ಥ ಯುವತಿ ಮಹಾಲಕ್ಷ್ಮಿಯೊಂದಿಗೆ ಸಪ್ತಪದಿ ತುಳಿದ್ರು.
ನಗರದ ಕನ್ನಡ ಭವನದಲ್ಲಿ ನಡೆದ ಕಲಾಶಿಬಿರದಲ್ಲಿ ಕ್ಯಾನ್‍ವಾಸ್ ಮೇಲೆ ಶಿವಲಿಂಗ ಬಿಡಿಸಿ ಅದಕ್ಕೆ ಹಳದಿ ,ಕೆಂಪು ಬಣ್ಣ ಹಚ್ಚುವ ಮೂಲಕ ಹಾರಬದಲಿಸಿಕೊಂಡು ಸರಳ ಹಾಗೂ ವಿಶೇಷವಾಗಿ ಮದ್ವೆಯಾದ್ರು.
ರಾಜ್ಯದ ವಿವಿಧೆಡೆಯಿಂದ ಬಂದ 20 ಕಲಾವಿದರು ಬಿಡಿಸಿದ ಕಲಾಕೃತಿಗಳನ್ನೇ ಪ್ರದರ್ಶನಕ್ಕಿಡಲಾಗಿತ್ತು. ಎರಡು ದಿನಗಳ ಕಾಲ ನಡೆದ ಕಲ್ಯಾಣ ಕಲಾ ಶಿಬಿರದಲ್ಲಿ ಒಟ್ಟು 150 ಜನ ಕಲಾವಿದರು ಭಾಗವಹಿಸಿ ವಧುವರರಿಗೆ ಹಾರೈಸಿದರು. ದುಬಾರಿ ಮದುವೆಗಳಿಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿರುವ ಹೊತ್ತಿನಲ್ಲಿ ಸರಳ ವಿವಾಹ ನಡೆದಿರೋದು ವಿಶೇಷ.