-ಸುಪ್ರೀಂ ಅದೇಶದ ಬೆನ್ನಲ್ಲೇ ಬಂದ ಮೊದಲ ಪ್ರಕರಣ
ಬೆಂಗಳೂರು: ಸುಪ್ರೀಂ ಕೋರ್ಟ್ ತಲಾಖ್ ನಿಷೇಧ ಮಾಡಿದ ಬೆನ್ನಲ್ಲೇ ರಾಷ್ಟ್ರದಲ್ಲೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ವಿಚ್ಛೇದನ ಪಡೆಯೋಕೆ ಮುಸ್ಲಿಂ ಯುವಕನೊಬ್ಬ ವಕೀಲರ ಮನೆ ಕದ ತಟ್ಟಿದ್ದಾರೆ.
ಷರಿಯತ್ ನಂತೆ ತಲಾಖ್ ಪಡೆಯುತ್ತಿದ್ದ ಮುಸ್ಲಿಂ ಸಮುದಾಯದವರು ಈಗ ಸುಪ್ರೀಂಕೋರ್ಟ್ ಆದೇಶದಿಂದ ತಲೆಕೆಡಿಸಿಕೊಂಡಿದ್ದಾರೆ. ಇನ್ನು ಕೇಂದ್ರ ಕಾನೂನು ರೂಪಿಸೋದಕ್ಕೆ 6 ತಿಂಗಳು ಬೇಕಾಗಿದೆ. ಆದ್ರೆ ಈ ನಡುವೆಯೇ ತಲಾಖ್ ನಿಷೇಧ ಮಾಡಿದ ಮೂರೇ ದಿನದಲ್ಲಿ ಬೆಂಗಳೂರಿನ ಮುಸ್ಲಿಂ ಯುವಕನೋರ್ವ ವಿಚ್ಛೇದನ ಬಯಸಿ ಖ್ಯಾತ ವಕೀಲೆ ಪ್ರಮೀಳಾ ನೇಸರ್ಗಿಯನ್ನು ಸಂಪರ್ಕಿಸಿದ್ದಾರೆ.
Advertisement
Advertisement
ಇದು ದೇಶದಲ್ಲಿಯೇ ಮೊದಲ ಬಾರಿಗೆ ಮುಸ್ಲಿಂ ಸಮುದಾಯದವರು ವಿಚ್ಛೇದನಕ್ಕೆ ಕೋರ್ಟ್ ಮೆಟ್ಟಿಲೇರಿದಂತಾಗಿದೆ. ಇನ್ನು ಮೊದಲ ಕೇಸ್ ಫೈಲ್ ಮಾಡಿಕೊಂಡಿರುವ ವಕೀಲೆ ಪ್ರಮೀಳಾ ನೇಸರ್ಗಿ ಮುಸ್ಲಿಂ ಯುವಕನಿಗೆ ಪತ್ನಿಯಿಂದ ವಿಚ್ಛೇದನ ಕೊಡಿಸುವುದು ಹೇಗೆ ಅಂತಾ ಕಾನೂನು ಅಭ್ಯಸಿಸಿ, ಕೇಸ್ ಫೈಲ್ ಮಾಡೋದಾಗಿ ಹೇಳಿದ್ದಾರೆ.
Advertisement
ಏನಿದು ಪ್ರಕರಣ?: ಆಶ್ರಫ್ (ಹೆಸರು ಬದಲಾಯಿಸಲಾಗಿದೆ.) ಅನ್ನೋ ಯುವಕನಿಗೆ ಮದ್ವೆಯಾಗಿ 6-7 ವರ್ಷವೇ ಕಳೆದುಹೋಗಿದೆ. ಮುದ್ದಾದ ಎರಡು ಮಕ್ಕಳಿದ್ದಾರೆ. ಆದ್ರೆ ಸಾಕಷ್ಟು ವರ್ಷದಿಂದ ಹೆಂಡತಿ ಕಿರುಕುಳ ನೀಡುತ್ತಿದ್ದು, ತನ್ನ ತಾಯಿಗೆ ಹೊಡೆಯುತ್ತಿದ್ದಾರೆ. ಸುಖಾಸುಮ್ಮನೆ ನನ್ನ ಮೇಲೆ ಠಾಣೆಯಲ್ಲಿ ಸುಳ್ಳು ಕೇಸ್ ನೀಡುತ್ತಿದ್ದಾರೆ ಅಂತ ಅಶ್ರಪ್ ಆರೋಪಿಸಿದ್ದಾರೆ. ತಲಾಖ್ ನೀಡುವ ಉದ್ದೇಶವಿದ್ರೂ ಮಕ್ಕಳ ಮುಖ ನೋಡಿಕೊಂಡು ಸುಮ್ಮನಾಗಿದ್ದೆನು. ಆದ್ರೇ ಈಗ ಸಹಿಸೋದಕ್ಕೆ ಸಾಧ್ಯವೇ ಇಲ್ಲ ಅಂತಾದಾಗ ತಲಾಖ್ ನೀಡಲು ಮುಂದಾಗಿರುವುದಾಗಿ ಹೇಳಿದ್ದಾರೆ.
Advertisement
ಆದ್ರೆ ಸುಪ್ರೀಂಕೋರ್ಟ್ ತೀರ್ಪು ಬಂದಿದ್ದರಿಂದ ಏನು ಮಾಡಲು ತೋಚಲಿಲ್ಲ. ಕೇಂದ್ರ ಹೊಸ ಕಾಯ್ದೆ ರೂಪಿಸುವವರೆಗೂ ನನ್ನ ಕೈಯಲ್ಲಿ ಪತ್ನಿಯನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಅಂತಾ ವಿಚ್ಛೇದನಕ್ಕೆ ಅರ್ಜಿ ಹಾಕಿದ್ದಾರೆ. ಇದು ಮುಸ್ಲಿಂ ಸಮುದಾಯದಿಂದ ವಿಚ್ಛೇದನ ಬಯಸಿ ಕೋರ್ಟ್ ಮೆಟ್ಟಿಲೇರಿದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ. ಯಾವ ರೀತಿಯ ಕಾನೂನು ಉಪಯೋಗಿಸಿಕೊಳ್ಳಬಹುದು ಅನ್ನೋದನ್ನು ಪರಿಶೀಲನೆ ಮಾಡುತ್ತೇನೆ ಅಂತಾ ನೇಸರ್ಗಿ ಹೇಳಿದ್ದಾರೆ.
ಒಟ್ಟಾರೆ ಸುಪ್ರೀಂ ಆದೇಶದ ಬೆನ್ನಲ್ಲೇ ಸಿಕ್ಕಿದ ಈ ಪ್ರಕರಣ ವಕೀಲರಿಗೆ ಸವಾಲಾಗಿದೆ. ಸೋಮವಾರದಿಂದ ಕಾನೂನು ಹೋರಾಟ ಆರಂಭಿಸೋದಾಗಿ ನೇಸರ್ಗಿ ಅವರು ಹೇಳಿದ್ದಾರೆ.