ರಾಯಚೂರು: ಜಿಲ್ಲೆಯ ಸಿರವಾರ ತಾಲೂಕಿನ ಕವಿತಾಳದಲ್ಲಿ ಮುಸ್ಲಿಂ ಮುಖಂಡ ಅಬ್ದುಲ್ ಕರೀಂ ಸಾಬ್ ತಮ್ಮ ಮನೆಯಲ್ಲಿ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನ ಸಂತರ್ಪಣೆ ಮಾಡುವ ಮೂಲಕ ಭಾವೈಕ್ಯತೆ ಮೆರೆದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳಿಗೆ ಅನ್ನಸಂತರ್ಪಣೆ ಮಾಡುತ್ತಾ ಹಿಂದೂ ಮುಸ್ಲಿಮರ ನಡುವಿನ ಭಾವೈಕ್ಯತೆ ಸಾರಿದ್ದಾರೆ. ಕವಿತಾಳ ಮತ್ತು ಪಾತಾಪೂರದ ಅಯ್ಯಪ್ಪ ಸ್ವಾಮಿ ಪೀಠದ 40ಕ್ಕೂ ಹೆಚ್ಚು ಮಾಲಾಧಾರಿಗಳಿಗೆ ಹೋಳಿಗೆ ತುಪ್ಪ, ಲಾಡು ಸೇರಿ ಬಗೆಬಗೆಯ ತಿಂಡಿ ತಿನಿಸುಗಳನ್ನು ಮಾಡಿ ಸ್ವತಃ ಬಡಿಸುವ ಮೂಲಕ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: UI ಸಕ್ಸಸ್ ಬೆನ್ನಲ್ಲೇ ಉಪೇಂದ್ರ ಟೆಂಪಲ್ ರನ್
ಅಯ್ಯಪ್ಪ ಮಾಲೆ ಧರಿಸಿದ ಭಕ್ತರಿಗೆ ಸ್ವಚ್ಛತೆ ಹಾಗೂ ಮಡಿಯಿಂದ ಅಡುಗೆ ಮಾಡಿ ಉಣ ಬಡಿಸಿದ್ದಾರೆ. ಕರೀಂಸಾಬ್ ಆತಿಥ್ಯ ಸ್ವೀಕರಿಸಿದ ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಖುಷಿ ವ್ಯಕ್ತಪಡಿಸಿದ್ದಾರೆ.