ಆನೇಕಲ್: ದೆಹಲಿಯ ಶ್ರದ್ಧಾವಾಕರ್ (Shraddha Walker) ಹತ್ಯೆ ಪ್ರಕರಣದ ಮಾದರಿಯಲ್ಲೇ ಅನ್ಯಕೋಮಿನ ಮಹಿಳೆಯೊಬ್ಬರು ವೃದ್ಧೆಯನ್ನು ಕೊಂದು, ಮೃತದೇಹವನ್ನು ಕಬೋರ್ಡ್‌ನಲ್ಲಿ ಸುತ್ತಿಟ್ಟಿದ್ದ ಘಟನೆ ಬೆಂಗಳೂರು (Bengaluru) ಹೊರಹೊಲಯದ ಆನೇಕಲ್ ತಾಲೂಕಿನ ನೆರಳೂರು ಗ್ರಾಮದಲ್ಲಿ ನಡೆದಿದೆ.
ಕೊಲೆಯ (Murder) ಆರೋಪಿಯನ್ನು ನೆರಳೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ಪಾಯಲ್ ಖಾನ್ ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ರೆಡ್ಡಿ ಮೊಮ್ಮಗಳ ನಾಮಕರಣಕ್ಕೆ ರಾಮುಲು ಗೈರು- ಮುರಿದು ಬಿತ್ತಾ ದಶಕಗಳ ಗೆಳೆತನದ ನಂಟು..?
ಪಾಯಲ್ ಖಾನ್ ತನ್ನ ಕೆಳಮನೆಯಲ್ಲಿ ಬಾಡಿಗೆಗೆ ವಾಸವಿದ್ದ ವೃದ್ಧೆಯನ್ನು ಕೊಂದು ಎಸ್ಕೇಪ್ ಆಗಿದ್ದಾಳೆ. ಕಳೆದ ಮೂರು ದಿನಗಳ ಹಿಂದೆ ಈ ಮಹಿಳೆ ಅಜ್ಜಿಯನ್ನು ಮನೆಗೆ ಕರೆದಿದ್ದಳು. ಅನಂತರ ಎಷ್ಟು ಹುಡುಕಿದರೂ ಸಿಗಲೇ ಇಲ್ಲ. ಕೊಲೆ ಮಾಡಿ ಒಂದು ದಿನದ ನಂತರ ಮುಸ್ಲಿಂ ಮಹಿಳೆ (Muslim Women) ಎಸ್ಕೇಪ್ ಆಗಿದ್ದಳು. ಇದರಿಂದ ಅನುಮಾನಗೊಂಡ ಅಜ್ಜಿ ಮನೆಯವರು ಆಕೆಯ ಮನೆಬೀಗ ತೆಗೆಸಿ ನೋಡಿದ್ದಾರೆ. ಮನೆಯಲ್ಲಾ ಹುಡುಕಾಡಿದಾಗ ಅಜ್ಜಿಯ ಮೃತದೇಹವನ್ನು ಪ್ಯಾಕ್ ಮಾಡಿ ಕಬೋರ್ಡ್‌ನಲ್ಲಿ ಇಟ್ಟಿದ್ದನ್ನು ಕಂಡು ದಂಗಾಗಿದ್ದಾರೆ. ಬಳಿಕ ಅತ್ತಿಬೆಲೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತುಮಕೂರು ಜಿಲ್ಲೆಯ ಶಿರಾ ಮೂಲತದ ವೃದ್ಧೆ ಪಾರ್ವತಮ್ಮ ಕಳೆದ 9 ತಿಂಗಳ ಹಿಂದೆ ನೆರಳೂರಿಗೆ ಬಾಡಿಗೆಗೆ ಬಂದಿದ್ದರು. ಶುಕ್ರವಾರ ಪಾರ್ವತಮ್ಮ ಅವರ ಸೊಸೆ ಜ್ಯೋತಿ ಮಕ್ಕಳನ್ನು ಟ್ಯೂಷನ್ನಿಂದ ಕರೆದುಕೊಂಡು ಬರಲು ಹೊರಗೆ ಹೋಗಿದ್ದಾರೆ. ಈ ವೇಳೆ ಅಜ್ಜಿಯನ್ನು ಮನೆಗೆ ಕರೆದುಕೊಂಡು ಹೋದ ಮಹಿಳೆ ಕೃತ್ಯ ಎಸಗಿದ್ದಾಳೆ. ಘಟನಾ ಸ್ಥಳಕ್ಕೆ ಬೆಂಗಳೂರು ಗ್ರಾಮಾಂತರ ಎಸ್ಪಿ ಮಲ್ಲಿಕಾರ್ಜುನ್ ಬಾಲದಂಡಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇದನ್ನೂ ಓದಿ: ಕ್ಷೌರಿಕನ ಮಗ 250ನೇ ಏಕದಿನ ಆಟಗಾರನಾಗಿ ಟೀಂ ಇಂಡಿಯಾಗೆ ಎಂಟ್ರಿ ಕೊಟ್ಟಿದ್ದೇ ರೋಚಕ
ಆರೋಪಿ ಮಹಿಳೆ ಪಾಯಲ್ ಖಾನ್ 8 ತಿಂಗಳ ಹಿಂದೆಯಷ್ಟೇ ನೆರಳೂರಿನಲ್ಲಿ ಮನೆ ಬಾಡಿಗೆ ಪಡೆದಿದ್ದರು. ತನ್ನ ಅಣ್ಣನಿಗೆ ಅಪಘಾತವಾಗಿದೆ ಎಂದು ಹೇಳಿ ಮುಸ್ಲಿಂ ಮಹಿಳೆ ಒಬ್ಬಳೇ ವಾಸವಾಗಿದ್ದಳು. ಕಳೆದ ತಿಂಗಳೂ ಬಾಡಿಗೆ ಕೊಟ್ಟಿರಲಿಲ್ಲ. ಆದ್ರೆ ಅಜ್ಜಿ ಕೊಲೆಯಾಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಮನೆ ಮಾಲೀಕ ಅಂಬರೀಶ್ ಹೇಳಿದ್ದಾರೆ.
ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಬೆಂಗಳೂರು ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ, ಕಳೆದ ಮೂರು ದಿನಗಳಿಂದ ಮೃತ ಅಜ್ಜಿ ಪಾರ್ವತಮ್ಮ ನಾಪತ್ತೆಯಾಗಿದ್ದರು. ಈ ಬಗ್ಗೆ ಅತ್ತಿಬೆಲೆ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ದಾಖಲಾಗಿತ್ತು. ನಿನ್ನೆಯಿಂದ ಮುಸ್ಲಿಂ ಮಹಿಳೆ ಪಾಯಲ್ ಖಾನ್ ನಾಪತ್ತೆಯಾದ ಹಿನ್ನೆಲೆಯಲ್ಲಿ ಮನೆ ಪರಿಶೀಲಿಸಿದಾಗ ಕಬೋರ್ಡ್ನಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿದೆ ಎಂದು ಹೇಳಿದ್ದಾರೆ.
ಕೈ ಕಾಲು ಕಟ್ಟಿದ ಸ್ಥಿತಿಯಲ್ಲಿ ವೃದ್ಧೆಯ ಮೃತದೇಹ ಪತ್ತೆಯಾಗಿದೆ. ಮಾರಕಾಸ್ತçಗಳಿಂದ ತಲೆ ಹೊಡೆದು ಹತ್ಯೆ ಮಾಡಲಾಗಿದೆ. ಅಜ್ಜಿಯ ಮೈಮೇಲಿದ್ದ 70 ಗ್ರಾಂ ಚಿನ್ನ ಸಹ ನಾಪತ್ತೆಯಾಗಿದೆ. ಆರೋಪಿ ಮಹಿಳೆ ಪತ್ತೆಗಾಗಿ ಎರಡು ಪೊಲೀಸ್ ತಂಡ ರಚಿಸಲಾಗಿದೆ, ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದು ಹೇಳಿದ್ದಾರೆ.