ಬೆಂಗಳೂರು: ಕೊನೆಯದಿನದ ಚುನಾವಣಾ ಪ್ರಚಾರ (Election Campaign) ನಡೆಸಿದ ಪ್ರಧಾನಿ ಮೋದಿ ಅವರ ರೋಡ್ ಶೋ (Modi RoadShow) ಅದ್ಧೂರಿಯಾಗಿ ನೆರವೇರಿತು.
ಬಹಿರಂಗ ಪ್ರಚಾರಕ್ಕೆ ತೆರ ಬೀಳಲು ಒಂದು ದಿನ ಬಾಕಿ ಇರುವಾಗ ಪ್ರಧಾನಿ ಮೋದಿ, ಬೆಂಗಳೂರಿನಲ್ಲಿ (Bengaluru) ಭರ್ಜರಿ ರೋಡ್ ನಡೆಸಿ ಮತಬೇಟೆ ಮಾಡಿದರು. ಭಾನುವಾರ ಬೆಳಗ್ಗೆ ತುಂತುರು ಮಳೆ ನಡುವೆಯೂ ಅಭಿಮಾನಿಗಳಲ್ಲಿ ಉತ್ಸಾಹ, ಹುರುಪಿಗೇನೂ ಕಮ್ಮಿ ಇರಲಿಲ್ಲ. ಅತ್ಯಂತ ಸುಗಮವಾಗಿ ಮೋದಿ ರೋಡ್ ಶೋ ನಡೀತು. ನ್ಯೂ ತಿಪ್ಪಸಂದ್ರದ ಕೆಂಪೇಗೌಡ ಸರ್ಕಲ್‌ನಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮೋದಿ ನಂತ್ರ ರೋಡ್‌ಶೋ ಶುರು ಮಾಡಿದರು.
Advertisement
Advertisement
6.5 ಕಿಲೊಮೀಟರ್ ರಸ್ತೆಯ ಉದ್ದಕ್ಕೂ ಇಕ್ಕೆಲಗಳಲ್ಲಿ ಸೇರಿದ್ದ ಅಪಾರ ಅಭಿಮಾನಿಗಳು ಮೋದಿ ಪರ ಘೋಷಣೆ ಮೊಳಗಿಸಿದ್ರು. ದಾರಿಯುದ್ದಕ್ಕೂ ಪುಷ್ಟವೃಷ್ಟಿಗೈದರು. ಇದನ್ನೂ ಓದಿ: ಕರ್ನಾಟಕವನ್ನ ಭಾರತದಿಂದ ಬೇರೆ ಮಾಡುವ ಹುನ್ನಾರ ನಡೆಸಿದೆ ಕಾಂಗ್ರೆಸ್ – ಮೋದಿ ವಾಗ್ದಾಳಿ
Advertisement
Advertisement
ಪ್ರಧಾನಿ ಮೋದಿ ಅವರು ನಡೆಸಿದ ಕೊನೆಯದಿನದ ರೋಡ್‌ಶೋನಲ್ಲಿ ಹಲವು ವಿಶೇಷತೆಗಳು ಕಂಡುಬಂದವು. ರೋಡ್ ಶೋ ಉದ್ದಕ್ಕೂ ಕೇಸರಿ ಕಲರವ ತುಂಬಿ ತುಳುಕಿತ್ತು. ಇದೇ ವೇಳೆ ಮುಸ್ಲಿಂ ಮಹಿಳೆಯೊಬ್ಬರು (Muslim Women) `ಜೈ ಬಜರಂಗಿ.. ಜೈ ಬಿಜೆಪಿ’ ಎಂದು ಬರೆದಿದ್ದ ಪೋಸ್ಟರ್ ಹಿಡಿದು ಪ್ರಧಾನಿ ಮೋದಿ ನೋಡಲು ಬಿಸಿಲಿನಲ್ಲೂ ಕಾದು ನಿಂತಿದ್ದ ದೃಶ್ಯ ಗಮನ ಸೆಳೆಯಿತು. `ಜೈ ಬಜರಂಗಿ’ ಘೋಷವಾಕ್ಯದ ಪೋಸ್ಟರ್‌ನಲ್ಲಿ ಪ್ರಧಾನಿ ಮೋದಿ ಅವರ ಭಾವಚಿತ್ರವೂ ಇತ್ತು. ಇದನ್ನೂ ಓದಿ: ಸುಡಾನ್‌ನಿಂದ ಬಂದ ಹಕ್ಕಿಪಿಕ್ಕಿ ಜನರ ಜೊತೆ ಮೋದಿ ಸಂವಾದ
ಅಲ್ಲದೇ, 500 ಪುರೋಹಿತರಿಂದ ಹನುಮಾನ್ ಚಾಲೀಸಾ ಪಠಣ ನಡೆಸಲಾಯಿತು. ಪುಟ್ಟ ಬಾಲಕನೊಬ್ಬ ಐ ಲವ್‌ಯೂ ಮೋದಿಜಿ ಪೋಸ್ಟರ್ ಹಿಡಿದಿದ್ದ ದೃಶ್ಯವೂ ರೋಡ್‌ಶೋ ವೇಳೆ ಗಮನ ಸೆಳೆಯಿತು.