ಕೊಪ್ಪಳ: ಹಿಂದೂ ಮತ್ತು ಮುಸ್ಲಿಂ ಸಾಮರಸ್ಯಕ್ಕೆ ಕೊಪ್ಪಳ ತಾಲೂಕಿನ ಅಳವಂಡಿ ಗ್ರಾಮದ ಮುಸ್ಲಿಂ ಕುಟುಂಬ ಸಾಕ್ಷ್ಯಿಯಾಗಿದೆ.
ಶುಕ್ರವಾರ ಹಿಂದೂ ಸಂಸ್ಕøತಿಯ ವರಮಹಾಲಕ್ಷ್ಮಿ ಹಬ್ಬವನ್ನು ನೆರವೇರಿಸುವ ಭಾವೈಕ್ಯತೆಯನ್ನು ಅಳವಂಡಿ ಗ್ರಾಮದ ನಜೀರುದ್ದಿನ್ ಕುಟುಂಬ ಸಾರಿದೆ. ಧಾರ್ಮಿಕ ಆಚರಣೆಗಳನ್ನು ಗ್ರಾಮದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಭಾವೈಕ್ಯತೆಯಿಂದ ಆಚರಿಸುತ್ತಾ ಬಂದಿದ್ದಾರೆ. ಪ್ರತಿಯೊಂದು ಧಾರ್ಮಿಕ ಆಚರಣೆಗಳನ್ನು ಒಗ್ಗಟ್ಟಾಗಿ ಆಚರಿಸುತ್ತಾರೆ. ಅದರಂತೆ ಮುಸ್ಲಿಂ ಸಮುದಾಯದ ಕುಟುಂಬವೊಂದು ಕಳೆದ ಮೂರು ವರ್ಷಗಳಿಂದ ತಮ್ಮ ಹಬ್ಬಗಳನ್ನು ಆಚರಿಸುವ ರೀತಿಯಲ್ಲಿಯೇ ಸಂಪ್ರದಾಯ ಬದ್ಧವಾಗಿ ವರಮಹಾಲಕ್ಷ್ಮಿ ಹಬ್ಬವನ್ನು ಆಚರಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ನನ್ನ ಪತ್ನಿ ಜೊತೆ ಮಾತನಾಡಬೇಡ ಅಂದಿದ್ದಕ್ಕೆ ಕ್ರಿಕೆಟ್ ಬ್ಯಾಟ್, ವಿಕೆಟ್‌ನಿಂದ ಹೊಡೆದು ಕೊಲೆಗೈದ್ರು
Advertisement
Advertisement
ಅಳವಂಡಿ ಗ್ರಾಮದ ನಜುರುದ್ದೀನ್ ಬಿಸರಳ್ಳಿ ಅವರು ಮುಸ್ಲಿಂ ಕುಟುಂಬದ ಮನೆಯಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಮನೆತನದ ಹಬ್ಬದ ರೀತಿ ಆಚರಿಸುತ್ತಿದ್ದಾರೆ. ಹಬ್ಬದ ಪ್ರಯುಕ್ತ ಮನೆಯನ್ನು ದೀಪಾಲಂಕಾರ ಮಾಡುವ ಮೂಲಕ ವಿಶೇಷ ಪೂಜೆ ನೆರವೇರಿಸಿದ್ದಾರೆ. ಹೋಳಿಗೆ ನೈವೇದ್ಯ, ವಿವಿಧ ತರಹದ ಹಣ್ಣುಗಳು ಸಮರ್ಪಿಸಿ, ಹಣತೆ ಹಚ್ಚಿ ಭಾವೈಕ್ಯತೆ ಮೆರೆದಿದ್ದಾರೆ.
Advertisement
ಮನೆಯನ್ನು ವಿದ್ಯುತ್ ದೀಪ ಹಾಗೂ ತೋರಣ ಕಟ್ಟಿ ಸಿಂಗರಿಸಲಾಗಿತ್ತು. ನಜುರುದ್ದೀನ್ ಬಿಸರಳ್ಳಿ ಅವರು ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಸರ್ವ ಧರ್ಮದ ಸ್ನೇಹಿತರನ್ನು ಆಹ್ವಾನಿಸಿ ಸತ್ಕರಿಸಿದರು.
Advertisement
ನಜುರುದ್ದೀನ್ ಬಿಸರಳ್ಳಿ ಈ ಕುರಿತು ಮಾತನಾಡಿದ್ದು, ಕಳೆದ ಮೂರು ವರ್ಷದ ಹಿಂದೆ ವರಮಹಾಲಕ್ಷ್ಮಿ ಹಬ್ಬದ ದಿನದಂದು, ನನ್ನ ಮನೆಯ ಗೃಹ ಪ್ರವೇಶ ಕಾರ್ಯಕ್ರಮ ನಡೆಯಿತು. ಅದರಂತೆ ಪ್ರತಿವರ್ಷ ಹಿಂದೂ ಸಂಪ್ರದಾಯದಂತೆ ವರಮಹಾಲಕ್ಷ್ಮಿ ಹಬ್ಬ ಮಾಡುತ್ತಾ ಬಂದಿದ್ದೇನೆ. ಇದರಿಂದ ಒಳ್ಳೆಯದು ಆಗಿದೆ. ನಾನು ಕೂಡ ಗ್ರಾಮದಲ್ಲಿ ಪ್ರತಿಯೊಂದು ಧಾರ್ಮಿಕ ಆಚರಣೆಗಳನ್ನು ಪಾಲ್ಗೋಳ್ಳುತ್ತೇನೆ ಎಂದರು. ಇದನ್ನೂ ಓದಿ: ‘ಇಂಡಿಯಾ ಕಿ ಉಡಾನ್’ ಮೂಲಕ ಸ್ವಾತಂತ್ರ್ಯ ನಂತರದ ದಿನ ನೆನಪಿಸಲಿರುವ ಗೂಗಲ್