ಆನೇಕಲ್: ನವಜಾತ ಶಿಶುವನ್ನು ಹೆತ್ತ ತಾಯಿಯೇ ರಸ್ತೆಗೆ ಎಸೆದು ಹೋಗಿದ್ದು, ಸ್ಥಳೀಯರು ಮಗುವಿನ ಅಳುವಿನ ಶಬ್ದ ಕೇಳಿ ರಕ್ಷಣೆ ಮಾಡಿರುವ ಘಟನೆ ಬನ್ನೇರುಘಟ್ಟ ರಸ್ತೆಯ ವಿವರ್ಸ್ ಕಾಲೋನಿಯಲ್ಲಿ ನಡೆದಿದೆ.
ಮುಂಜಾನೆ ವಿವರ್ಸ್ ಕಾಲೋನಿಯ 5ನೇ ಕ್ರಾಸ್ ರಸ್ತೆ ಬದಿಯಲ್ಲಿ ಮಗುವಿನ ಅಳುವಿನ ಶಬ್ದ ಕೇಳಿಸಿಕೊಂಡ ನಿವಾಸಿಗಳು ಹೊರ ಬಂದು ನೋಡಿದಾಗ ರಕ್ತಸಿಕ್ತ ಸ್ಥಿತಿಯಲ್ಲಿ ಆಗಷ್ಟೇ ಜನಿಸಿದ ಮಗು ಪತ್ತೆಯಾಗಿದೆ. ಅಕ್ಕಪಕ್ಕದ ನಿವಾಸಿಗಳು ಮಗುವನ್ನು ರಕ್ಷಣೆ ಮಾಡಿದ್ದು, ಏರಿಯಾದ ಚೂಡಾಮಣಿ ಎಂಬ ಮಹಿಳೆ ರಕ್ತಸಿಕ್ತವಾಗಿದ್ದ ಮಗುವನ್ನು ಶುಚಿ ಮಾಡಿ ಸ್ನಾನ ಮಾಡಿಸಿದ್ದಾರೆ.
ಇನ್ನೂ ಪ್ರಪಂಚವೇ ಅರಿಯದ ಹಸುಗೂಸುನ್ನು ರಸ್ತೆಗೆಸೆದಿರುವ ಹೆತ್ತಮ್ಮ ಅಪ್ರಾಪ್ತೆ ಇಲ್ಲವೇ ಅನೈತಿಕ ಸಂಬಂಧಕ್ಕೆ ಜನಿಸಿರುವ ಸಂಶಯ ವ್ಯಕ್ತವಾಗಿದ್ದು, ಪುಟ್ಟ ಕಂದನನ್ನು ರಸ್ತೆಯಲ್ಲಿ ಎಸೆದು ಹೋಗಿರುವ ನಿರ್ದಯಿ ತಾಯಿಯ ವಿರುದ್ಧ ಸ್ಥಳೀಯರು ಆಕ್ರೋಶವನ್ನು ಹೊರಹಾಕಿದರು. ಇದನ್ನೂ ಓದಿ: ಕೆಲಸದಲ್ಲಿ ತೃಪ್ತಿ ಇಲ್ಲ – ಡೆತ್ ನೋಟ್ ಬರೆದು ಪೊಲೀಸ್ ಆತ್ಮಹತ್ಯೆ
ವಿಷಯ ತಿಳಿದು ಸ್ಥಳಕ್ಕೆ ಬಂದ ಕೋಣನಕುಂಟೆ ಪೊಲೀಸರು ಬೇಟಿ ನೀಡಿದ್ದಾರೆ. ಬಳಿಕ ಕಂದಮ್ಮನನ್ನ ರಕ್ಷಣೆ ಮಾಡಿದ ಮಹಿಳೆ ಚೂಡಾಮಣಿ ಮಗುವನ್ನು ಸಾಕಲು ನಮ್ಮ ಸುಪರ್ದಿಗೆ ನೀಡಿ ಎಂದು ಗೊಗರೆದ್ದಾರೆ. ಆದರೆ ಕೊಂಣನಕುಂಟೆ ಪೊಲೀಸರು ನವಜಾತ ಹೆಣ್ಣು ಮಗುವನ್ನು ವಶಕ್ಕೆ ಪಡೆದು ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಈಗಲೂ ಬೇಕಾದ್ರೆ ಅವಳನ್ನೇ ಮದುವೆ ಆಗ್ತೀನಿ: ಆ್ಯಸಿಡ್ ನಾಗನ ದುರಹಂಕಾರದ ಮಾತು