ತುಮಕೂರು: ಕರುಳಬಳ್ಳಿಗೆ ವಿಷ ಉಣಿಸಿದ ತಾಯಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ತುಮಕೂರು (Tumakuru) ಜಿಲ್ಲೆಯ ಗುಬ್ಬಿ (Gubbi) ತಾಲೂಕಿನ ತ್ಯಾಗಟೂರು ಬಳಿಯ ಬೊಮ್ಮರಸನಹಳ್ಳಿಯಲ್ಲಿ ನಡೆದಿದೆ.
ಇಂದ್ರಮ್ಮ ಸ್ವಂತ ಮಗಳಿಗೆ ವಿಷ ಉಣಿಸಿ ತಾನೂ ವಿಷ ಸೇವಿಸಿದ ಪರಿಣಾಮ ಮಗಳು ದೀಕ್ಷಿತಾ (6) ಸಾವನ್ನಪ್ಪಿದ್ದು, ತಾಯಿ ಸ್ಥಿತಿ ಚಿಂತಾಜನಕವಾಗಿದೆ. ಮಧುಗಿರಿ ಮೂಲದ ಇಂದ್ರಮ್ಮ ಬೊಮ್ಮರಸನಹಳ್ಳಿಯಲ್ಲಿ ವಾಸವಾಗಿದ್ದರು. ಶ್ರೀರಂಗಯ್ಯ ಎಂಬವರನ್ನು ಮದುವೆಯಾಗಿದ್ದ ಇಂದ್ರಮ್ಮ ದಾಂಪತ್ಯದಲ್ಲಿ ಬಿರುಕು ಮೂಡಿ ಗಂಡನನ್ನು ಬಿಟ್ಟು ಮಗಳೊಂದಿಗೆ ವಾಸವಾಗಿದ್ದಳು. ಇದನ್ನೂ ಓದಿ: ಹೆಚ್‌ಡಿಕೆ ಬಣ್ಣದ ಬಗ್ಗೆ ಜಮೀರ್ ನಿಂದನೆ – ವಿವಾದದ ಬಳಿಕ ಪ್ರೀತಿಯಿಂದ ಕರೆದಿದ್ದು ಅಂತ ಸ್ಪಷ್ಟನೆ
ತನ್ನ ಹೆಣ್ಣು ಮಗುವನ್ನು ಕೊಂದು ತಾನು ವಿಷ ಕುಡಿದು ಇಂದ್ರಮ್ಮ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಇಂದ್ರಮ್ಮಳ ಸ್ಥಿತಿ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಗುಬ್ಬಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: Karwar| ಕೈಗಾ ನ್ಯೂಕ್ಲಿಯರ್ ಪ್ಲಾಂಟ್‌ನಲ್ಲಿ ಗುಂಡು ಹಾರಿಸಿಕೊಂಡು ರಕ್ಷಣಾ ಸಿಬ್ಬಂದಿ ಆತ್ಮಹತ್ಯೆ