ಕಲಬುರಗಿ: ಹೆತ್ತ ಮಗಳನ್ನು (Daughter) ಕೊಲೆ ಮಾಡಿ ನೇಣು ಹಾಕಿ, ತಾಯಿ (Mother) ಕೂಡ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಚಿಂಚೋಳಿ (Chincholi) ತಾಲೂಕಿನ ಮರಪಳ್ಳಿ ಗ್ರಾಮದಲ್ಲಿ ನಡೆದಿದೆ.
ಚಿಂಚೋಳಿ ತಾಲೂಕಿನ ಮರಪಳ್ಳಿ ಗ್ರಾಮದ ತಾಯಿ ಶಿವಲೀಲಾ (23), ಮಗಳಾದ ವರ್ಷಿತಾ (2) ನೇಣಿಗೆ ಶರಣಾಗಿರುವ ದುರ್ದೈವಿಗಳಾಗಿದ್ದಾರೆ. ಮಂಗಳವಾರ ಸಂಜೆ ಮರಪಳ್ಳಿ ಗ್ರಾಮದ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ತಾಯಿ ಶಿವಲೀಲಾ ಚಿಂಚೋಳಿ ತಾಲೂಕಿನ ಕೆರೋಳ್ಳಿ ಗ್ರಾಮದ ನಿವಾಸಿಯಾಗಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ಮರಪಳ್ಳಿ ಗ್ರಾಮದ ಆನಂದ ಎಂಬವರ ಜೊತೆ ವಿವಾಹವಾಗಿದ್ದರು. ಇದನ್ನೂ ಓದಿ: ಮಗನನ್ನು ಕೊಂದ ಸುಚನಾ ಸೇಠ್ಗೆ ಯಾವುದೇ ಮಾನಸಿಕ ಖಿನ್ನತೆ ಇಲ್ಲ
Advertisement
Advertisement
ಮದುವೆಯಾದ ಬಳಿಕ ಶಿವಲೀಲಾ ಗಂಡನ ಹಾಗೂ ಅತ್ತೆಯ ಕಿರುಕುಳಕ್ಕೆ ಬೇಸತ್ತು ತವರು ಮನೆಗೆ ಬಂದಿದ್ದರು. ಎರಡು ದಿನಗಳ ಹಿಂದಷ್ಟೇ ಶಿವಲೀಲಾ ಮತ್ತೆ ಗಂಡನ ಮನೆಗೆ ತೆರಳಿದ್ದು, ಮಗುವನ್ನೂ ಕೊಂದು ತಾನೂ ನೇಣಿಗೆ ಶರಣಾಗಿದ್ದಾರೆ. ಈ ಕುರಿತು ಚಿಂಚೋಳಿ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಹೆಲ್ಮೆಟ್ ಹಾಕಿಲ್ಲವೆಂದು ತಡೆದಿದ್ದಕ್ಕೆ ಟ್ರಾಫಿಕ್ ಪೊಲೀಸ್ ಕೈ ಬೆರಳನ್ನೇ ಕಚ್ಚಿದ ಭೂಪ!
Advertisement