ಚೆನ್ನೈ: ಪಾಪಿ ತಾಯಿಯೊಬ್ಬಳು ತನ್ನ 16 ವರ್ಷದ ಪುತ್ರಿಗೆ ಅಂಡಾಣು ದಾನ ಮಾಡುವಂತೆ ಒತ್ತಾಯಿಸಿ ಇದೀಗ ಪೊಲೀಸರ ಅತಿಥಿಯಾಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಆರೋಪಿ ತಾಯಿಯನ್ನು ಇಂದ್ರಾಣಿ ಅಲಿಯಾಸ್ ಸುಮಯ್ಯಾ(33) ಎಂದು ಗುರುತಿಸಲಾಗಿದೆ. ಈಕೆಯ ಜೊತೆಗೆ ಪತಿ ಸೈಯದ್ ಅಲಿ (40) ಹಾಗೂ ಮಾಲತಿ (30) ಎಂಬಿಬ್ಬರನ್ನು ಕೂಡ ಬಂಧಿಸಿ ಜೈಲಿಗಟ್ಟಲಾಗಿದೆ. ಸೈಯದ್ ಅಲಿಯನ್ನು ಇಂದ್ರಾಣಿ ಎರಡನೇ ಮದುವೆಯಾಗಿದ್ದಾಳೆ. ಈಕೆ ಖಾಸಗಿ ಫರ್ಟಿಲಿಟಿ ಕೇಂದ್ರಕ್ಕೆ ಅಂಡಾಣು ದಾನ ಮಾಡುವ ಕೆಲಸದಲ್ಲಿ ಭಾಗಿಯಾಗಿದ್ದಾಳೆ.
Advertisement
Advertisement
ಇಂದ್ರಾಣಿಯ ಮೊದಲ ಪತಿಯಲ್ಲಿ ಓರ್ವ ಮಗಳಿದ್ದಾಳೆ. ಇದೀಗ 16 ವರ್ಷದ ತನ್ನ ಮಗಳನ್ನು ಅಂಡಾಣು ದಾನ ಮಾಡುವಂತೆ ತಾಯಿ ಇಂದ್ರಾಣಿ ಒತ್ತಾಯಿಸಿದ್ದಾಳೆ. ಇದಕ್ಕೆ ಅಪ್ರಾಪ್ತೆಯ ಮಲ ತಂದೆಯಾಗಿರುವ ಸೈಯದ್ ಅಲಿ ಕೂಡ ಸಾಥ್ ನೀಡಿದ್ದಾನೆ. ಅಲ್ಲದೆ ಈತ ಹವಾರು ಬಾರಿ ಹುಡುಗಿಗೆ ಕಿರುಕುಳ ನೀಡಿದ್ದಾನೆ ಎನ್ನಲಾಗಿದೆ. ಇದನ್ನೂ ಓದಿ: ಲೋಕಲ್ ಅಲ್ಲ ಫಾರೀನ್ ಹೆಂಡವೇ ಬೇಕು – ಎಣ್ಣೆಯಿಲ್ಲದೆ ನೀರು ಮುಟ್ಟಲ್ಲ ಈ ಹುಂಜ
Advertisement
Advertisement
ಸದ್ಯ ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ. ಅಪ್ರಾಪ್ತೆ ಪರಾರಿಯಾಗುವ ಮುನ್ನ 8 ಬಾರಿ ಅಂಡಾಣು ದಾನ ಮಾಡುವಂತೆ ಆರೋಪಿಗಳು ಒತ್ತಾಯಿಸಿದ್ದಾರೆ. ಪ್ರತಿ ಅಂಡಾಣು ದಾನದಲ್ಲಿಯೂ ಸುಮಯ್ಯ 20 ಸಾವಿರ ಹಾಗೂ ಮಾಲತಿ 5 ಸಾವಿರ ಕಮಿಷನ್ ತೆಗೆದುಕೊಳ್ಳುತ್ತಿದ್ದರು ಎಂದು ಈರೋಡ್ ದಕ್ಷಿಣ ಪೊಲೀಸ್ ಇನ್ಸ್ ಪೆಕ್ಟರ್ ಪಿ ವಿಜಯಾ ತಿಳಿಸಿದ್ದಾರೆ.
ಈ ಸಂಬಂಧ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ, ಪ್ರಕರಣ ಕುರಿತು ತನಿಖೆ ಕೈಗೊಳ್ಳಲಾಗಿದೆ. ಖಾಸಗಿ ಕೇಂದ್ರ ಬಲವಂತವಾಗಿ ಅಂಡಾಣು ದಾನ ಮಾಡಿರುವುದು ಕಂಡುಬಂದಲ್ಲಿ ಅದರ ವಿರುದ್ಧವೂ ಕಠೀನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.