ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ಪತ್ತೆಹಚ್ಚಿದ ತಾಯಿ ಹಸು!

Public TV
1 Min Read
COW

ಮಂಡ್ಯ: ಚಿರತೆ ದಾಳಿಗೆ ಬಲಿಯಾದ ತನ್ನ ಕರುವನ್ನು ತಾಯಿ ಹಸುವೊಂದು ಪತ್ತೆ ಹಚ್ಚಿದ ಘಟನೆ ಸಕ್ಕರೆ ನಾಡು ಮಂಡ್ಯದಲ್ಲಿ ನಡೆದಿದೆ.

COW 1

ಈ ಘಟನೆ ಮಂಡ್ಯ ಜಿಲ್ಲೆಯ ಹಲಗೂರಿನಲ್ಲಿ ಮನಕಲಕುವ ಘಟನೆ ನಡೆದಿದೆ. ಕೊಟ್ಟಿಗೆಯಲ್ಲಿ ಕಟ್ಟಿದ್ದ ಕರುವನ್ನು ತಡರಾತ್ರಿ ಚಿರತೆ ಹೊತ್ತೊಯ್ದಿದೆ. ಹೀಗಾಗಿ ಕರುವನ್ನು ಮಾಲೀಕ ಕೊನ್ನಾಪುರ ಚಂದ್ರಶೇಖರ್ ಹುಡುಕಾಡುತ್ತಿದ್ದರು. ಇದನ್ನೂ ಓದಿ: ಮಿಸ್‍ಕಾಲ್ ಪ್ರೇಯಸಿಯಿಂದ ಪ್ರಿಯಕರನ ಬರ್ಬರ ಹತ್ಯೆ

COW 2

ಕರು ಎಲ್ಲೂ ಸಿಗದಿದ್ದಾಗ ಚಂದ್ರಶೇಖರ್ ಅವರು ತಾಯಿ ಹಸುವಿನ ಹಗ್ಗ ಬಿಚ್ಚಿ ಬಿಟ್ಟಿದ್ದರು. ಅಂತೆಯೇ ತಾಯಿ ಹಸು ತನ್ನ ಕರುವಿಗಾಗಿ ಹುಡುಕುತ್ತಾ ಸಾಗಿತ್ತು. ಕೊಟ್ಟಿಗೆಯಿಂದ ಅರ್ಧ ಕಿಲೋ ಮೀಟರ್ ದೂರದಲ್ಲಿದ್ದ ಗದ್ದೆ ಬಯಲಿನಲ್ಲಿ ಕರುವನ್ನು ಹಸು ಪತ್ತೆ ಹಚ್ಚಿದೆ.

COW 3

ಚಿರತೆ ದಾಳಿಯಿಂದ ಕರು ಪ್ರಾಣಬಿಟ್ಟಿತ್ತು. ಒಟ್ಟಿನಲ್ಲಿ ತನ್ನ ಕರುವಿನ ಮೃತದೇಹ ಪತ್ತೆ ಹಚ್ಚುವ ಮೂಲಕ ತಾಯಿ ಎಲ್ಲರ ಗಮನಸೆಳೆಯುವಂತೆ ಮಾಡಿದೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *