ರಾಯಚೂರು: ನಗರದ ಪ್ರತಿಷ್ಠಿತ ರಿಮ್ಸ್ (Rims Hospital Raichur) ವೈದ್ಯಕೀಯ ವಿಜ್ಞಾನಗಳ ಬೋಧಕ ಆಸ್ಪತ್ರೆಯಲ್ಲಿ ನಾಯಿ, ಹಂದಿಗಳ ಬಳಿಕ ಈಗ ಕೋತಿಗಳ ಕಾಟ ಶುರುವಾಗಿದೆ. ಆಸ್ಪತ್ರೆಗೆ ನುಗ್ಗುವ ಕೋತಿಗಳು ಡಸ್ಟ್ ಬಿನ್‍ನ ತ್ಯಾಜ್ಯ ಚೆಲ್ಲಾಪಿಲ್ಲಿ ಮಾಡಿ, ಎಲ್ಲೆಂದರಲ್ಲಿ ಓಡಾಡಿ ರೋಗಿಗಳನ್ನ ಹೆದರಿಸುತ್ತಿವೆ.
ನವಜಾತ ಶಿಶುಗಳು, ಬಾಣಂತಿಯರು ಇರೋ ವಾರ್ಡ್ ಗಳ ಬಳಿಯೂ ಕೋತಿಗಳು ನುಗ್ಗುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ವಾರ್ಡ್ ಗಳಿಗೆ ನುಗ್ಗಿ ಜನರನ್ನ ಹೆದರಿಸಿ ಊಟ, ತಿಂಡಿ ಕಿತ್ತಿಕೊಳ್ಳುವುದು ಸಾಮಾನ್ಯವಾಗಿದೆ. ಕೋತಿಗಳ ಕಾಟಕ್ಕೆ ಕಂಗೆಟ್ಟ ರೋಗಿಗಳು, ರೋಗಿಗಳ ಸಂಬಂಧಿಕರು ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ.
ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆಗೆ ಹಿಡಿದ ಕೈಗನ್ನಡಿಯಂತೆ ಪರಸ್ಥಿತಿ ಇದ್ದರೂ ಅಧಿಕಾರಿಗಳು ಕ್ರಮಕ್ಕೆ ಮುಂದಾಗಿಲ್ಲ. ಕೆಲದಿನಗಳ ಹಿಂದೆ ನಾಯಿ, ಹಂದಿಗಳು ಆಸ್ಪತ್ರೆಯಲ್ಲಿ ನಿರ್ಭೀತಿಯಿಂದ ಓಡಾಡಿ ರೋಗಿಗಳನ್ನ ಹೆದರಿಸಿದ್ದವು ಈಗ ಕೋತಿಗಳ ಕಾಟ ಶುರುವಾಗಿದೆ. ಇದನ್ನೂ ಓದಿ: ಸಿನಿಮಾ ರೀತಿಯಲ್ಲೇ ಮನೆಗೆ ನುಗ್ಗಿದ 50 ಗೂಂಡಾಗಳು- ವೈದ್ಯೆ ಕಿಡ್ನ್ಯಾಪ್