ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಂತರ ಭಾರತ-ಪಾಕಿಸ್ತಾನ ನಡುವೆ ಉದ್ವಿಗ್ನತೆ ಉಂಟಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ನಾಗರಿಕರ ಸಂರಕ್ಷಣೆಗಾಗಿ ದೇಶಾದ್ಯಂತ ಸ್ವರಕ್ಷಣಾ ತಾಲೀಮು (ಮಾಕ್ ಡ್ರಿಲ್) ನಡೆಸಲಾಯಿತು. ದೇಶಾದ 224 ಕಡೆಗಳಲ್ಲಿ ಮಾಕ್ ಡ್ರಿಲ್ ನಡೆಸಲಾಯಿತು.
05: 38 PM: ಡೆಹ್ರಾಡೂನ್‌ನ ಐಎಸ್‌ಬಿಟಿಯಲ್ಲಿ ಸಂತ್ರಸ್ತರನ್ನು ರಕ್ಷಿಸುವ ಮಾಕ್ ಡ್ರಿಲ್ ನಡೆಸಲಾಯಿತು.
#WATCH | Dehradun | A comprehensive mock drill is being conducted at the ISBT in Dehradun as part of MHA’s orders to conduct a nationwide mock drill today.
SP Pramod Kumar says, “A mock drill was being conducted at the ISBT and MDDA colony… Search and rescue operations are… pic.twitter.com/5Rqyemzfok
— ANI (@ANI) May 7, 2025
05: 24 PM: ಶಿವಮೊಗ್ಗದ ರಕ್ಷಾ ವಿಶ್ವವಿದ್ಯಾಲಯದಲ್ಲಿ ಸೈರನ್ ಸದ್ದು ಮೊಳಗುತ್ತಿದ್ದಂತೆ ವಿದ್ಯಾರ್ಥಿಗಳು ಬೆಂಚಿನ ಕೆಳಗಡೆ ಅವಿತುಕೊಂಡಂತೆ ಮಾಕ್ ಡ್ರಿಲ್ ಮಾಡಿದರು.
05: 20 PM: ಗೋವಾದ ಪಣಜಿಯಲ್ಲಿ ಬೋಟ್‌ಗಳ ಮೂಲಕ ಜನರನ್ನು ರಕ್ಷಿಸುವ ಕಾರ್ಯಾಚರಣೆಯ ಮಾಕ್ ಡ್ರಿಲ್ ನಡೆಯಿತು.
#WATCH | Panaji, Goa | A comprehensive Civil Defence mock drill is being conducted in the city.
MHA has ordered a nationwide mock drill today. pic.twitter.com/kg3tSvMc3O
— ANI (@ANI) May 7, 2025
05: 13 PM: ಚೆನ್ನೈ ಬಂದರಿಗೆ ಟಿಎನ್‌ಡಿಆರ್‌ಎಫ್ ತಂಡ ಆಗಮನ. ಚೆನ್ನೈ ಬಂದರಿನಲ್ಲಿ ಅಣಕು ಕವಾಯತು ನಡೆಸುವ ಮೊದಲು ಕಮಾಂಡರ್ ಬ್ರೀಫಿಂಗ್ ನಡೆದ ದೃಶ್ಯಗಳು.
#WATCH | Tamil Nadu | TNDRF team arrives to Chennai port. Visuals of Commander briefing held before mock drill in Chennai port.
MHA has ordered a nationwide mock drill today. pic.twitter.com/saT1KWjIPp
— ANI (@ANI) May 7, 2025
05: 10 PM: ರಾಯಚೂರು ರೈಲ್ವೇ ನಿಲ್ದಾಣದಲ್ಲಿ ಆಪರೇಷನ್ ಅಭ್ಯಾಸ ಮಾಕ್ ಡ್ರಿಲ್ ನಡೆಯಿತು. ಬಾಂಬ್ ದಾಳಿ ವೇಳೆ ನಾಗರಿಕರನ್ನ ಅಪಾಯದಿಂದ ರಕ್ಷಿಸಿಕೊಳ್ಳಲು ಅಣಕು ಪ್ರದರ್ಶನ ಮಾಡಲಾಯಿತು. ಬಾಂಬ್ ಡಿಸ್ಪೋಸಲ್ ಮಾಡುವ ಬಗ್ಗೆಯು ಮಾಕ್ ಡ್ರಿಲ್ ನಡೆಯಿತು.
05: 08 PM: ಕಟ್ಟಡದ ಮೇಲೆ ನಿಂತು ಜನರು ರಕ್ಷಣೆಗಾಗಿ ಕೂಗಿಕೊಂಡಂತೆ ಮಾಕ್ ಡ್ರಿಲ್ ಮಾಡಿದರು.
05: 03 PM: ಮೊದಲ ಮಹಡಿಯಲ್ಲಿ ಸಿಲುಕಿದ ಗಾಯಳುಗಳ ರೆಸ್ಕ್ಯೂ ಕಾರ್ಯ ಆರಂಭ. ಏಣಿ ಮೂಲಕ ರಕ್ಷಣೆ ಮಾಡಿ ಕರೆದೊಯ್ಯುವ ಕಾರ್ಯ ಆರಂಭಿಸಲಾಯಿತು.
05: 00 PM: ಮಾಕ್ ಡ್ರಿಲ್ ಮತ್ತೆ ಆರಂಭ.
04: 32 PM: ದೆಹಲಿಯ ಎನ್‌ಡಿಎಂಸಿ ಕಚೇರಿಯಲ್ಲಿ ಸೈರನ್ ಸದ್ದು ಮೊಳಗುತ್ತಿದ್ದಂತೆ ಜನ ಭಯಭೀತರಾಗಿ ಹೊರಗಡೆ ಓಡಿಬಂದಂತೆ ಅಣಕು ಪ್ರದರ್ಶನ ಮಾಡಿದರು.
#WATCH | Delhi: A comprehensive mock drill is being conducted at NDMC Office.
MHA has ordered a nationwide mock drill today. pic.twitter.com/yXDl8jpmY0
— ANI (@ANI) May 7, 2025
04: 30 PM: ಬೆಂಗಳೂರಿನ ಗೆಸ್ಟ್ ಹೌಸ್‌ನಲ್ಲಿ ಬಾಂಬ್ ಬ್ಲಾಸ್ಟ್‌ನ ಅಣಕು ಪ್ರದರ್ಶನ ನಡೆಯಿತು.
04: 22 PM: ಗ್ವಾಲಿಯರ್‌ನ ಸಿರೋಲ್ ಪ್ರದೇಶದಲ್ಲಿ ಸಮಗ್ರ ಅಣಕು ಡ್ರಿಲ್ ನಡೆಸಲಾಯಿತು. ಬೆಂಕಿ ಬಿದ್ದ ಕಟ್ಟಡಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ನೀರು ಹಾಕಿ ನಂದಿಸಿದರು.
#WATCH | Madhya Pradesh: A comprehensive mock drill is being conducted in the Sirol area of Gwalior.
MHA has ordered a nationwide mock drill today. pic.twitter.com/OzUlCHlWhH
— ANI (@ANI) May 7, 2025
04: 20 PM: ಮುಂಬೈನ ಕ್ರಾಸ್ ಮೈದಾನದಲ್ಲಿ ಅಣಕು ಪ್ರದರ್ಶನ ನಡೆದ ಪರಿ ಹೀಗಿತ್ತು.
#WATCH | Mumbai, Maharashtra: A mock drill is being carried out at Mumbai’s Cross Maidan.
MHA has ordered a nationwide mock drill today. pic.twitter.com/q7DEzQeOAM
— ANI (@ANI) May 7, 2025
04: 15 PM: ಹಲಸೂರು ಕೆರೆಯಲ್ಲಿ ಸಮಗ್ರ ಅಣಕು ಪ್ರದರ್ಶನ ನಡೆಸಲಾಗುತ್ತಿದೆ.
#WATCH | Bengaluru, Karnataka: A comprehensive mock drill is being conducted at Halsuru lake.
MHA has ordered a nationwide mock drill today. pic.twitter.com/1uBNgRQ5CR
— ANI (@ANI) May 7, 2025
04: 02 PM: ಐ ಲ್ಯಾಂಡ್‌ನಲ್ಲಿ ಸಿಲುಕಿರುವ ಸಂತ್ರಸ್ತರ ರಕ್ಷಣೆ ಅಣುಕು ಪ್ರದರ್ಶನ ಮಾಡಲಾಯಿತು.
04: 01 PM: ಸೈರನ್ ಸದ್ದಿಗೆ ಗುಂಪುಗೂಡಿದ ಜನ. ಕಚೇರಿ, ಅಂಗಡಿಗಳಿಂದ ಹೊರಬಂದ ಜನ. ಫುಟ್‌ಪಾತ್‌ನಲ್ಲಿ ಓಡಾಡೋರೂ ಸೈರನ್‌ಗೆ ಅಲರ್ಟ್.
3:59 PM: ಡಿಫನ್ಸ್ ಪ್ರಧಾನ ಕಚೇರಿ ಮೈದಾನಕ್ಕೆ ಗೃಹ ಸಚಿವ ಪರಮೇಶ್ವರ್ ಆಗಮಿಸಿ ಮಾಕ್ ಡ್ರಿಲ್ ವೀಕ್ಷಣೆ ಮಾಡಿದರು.
3:58 PM: ಚಾಮರಾಜಪೇಟೆ 3:58ಕ್ಕೆ ಸರಿಯಾಗಿ ಸೈರನ್ ಮೊಳಗಿತು. ಹಲಸೂರು ಡಿಫೆನ್ಸ್, ರಾಜಾಜಿನಗರ ಅಗ್ನಿಶಾಮಕ ಠಾಣೆ, ಕಮರ್ಷಿಯಲ್ ಪೊಲೀಸ್ ಠಾಣೆ, ಸಿಟಿ ಮಾರ್ಕೆಟ್ ಠಾಣೆ ಹೀಗೆ ಹಲವೆಡೆ ಸೈರನ್ ಸದ್ದು ಕೇಳಿಬಂತು.