ಬಾಲಿವುಡ್ ಖ್ಯಾತ ನಟ ಸಲ್ಮಾನ್ ಖಾನ್ (Salman Khan) ಕೊಲೆಗೆ ಭಾರೀ ಪ್ಲ್ಯಾನ್ ಮಾಡಲಾಗಿತ್ತು. ಕೊಲೆ ಹೇಗೆ ಮಾಡೋದು, ಯಾರು ಮಾಡೋದು? ಸ್ಥಳದ ಆಯ್ಕೆ ಹೇಗೆ? ಕೊಲೆಯಾದ ನಂತರ ತಪ್ಪಿಸಿಕೊಳ್ಳುವುದು ಎಲ್ಲಿ? ಹೀಗೆ ಅನೇಕ ವಿಚಾರಗಳನ್ನು ಚರ್ಚಿಸಲು ಲಾರೆನ್ಸ್ ಬಿಷ್ಣೋಯ್ (Lawrence Bishnoi) ಅಂಡ್ ಗ್ಯಾಂಗ್ ಮುಂಬೈನಲ್ಲೇ ಸಭೆ ಮಾಡಿದ್ದರು ಎಂದು ಪಂಜಾಬಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Advertisement
ಸಲ್ಮಾನ್ ಖಾನ್ ಕೊಲೆ (Murder) ಬೆದರಿಕೆಗೆ ಸಂಬಂಧಿಸಿದಂತೆ ಪಂಜಾಬಿ (Punjabi) ಪೊಲೀಸರು ಬಿಷ್ಣೋಯ್ ತಂಡದ ಸದಸ್ಯ ಕಪಿಲ್ ಪಂಡಿತ್ (Kapil Pandit) ಅವರನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದ್ದರು. ಈ ಸಮಯದಲ್ಲಿ ಅವನು ಸಲ್ಮಾನ್ ಖಾನ್ ಕೊಲೆಗೆ ಸಂಬಂಧಿಸಿದಂತೆ ಹಲವು ಸ್ಪೋಟಕ ಮಾಹಿತಿಗಳನ್ನು ಬಹಿರಂಗ ಪಡಿಸಿದ್ದಾನೆ ಎಂದು ಪಂಜಾಬಿ ಪೊಲೀಸ್ ಮಹಾ ನಿರ್ದೇಶಕ ಗೌರವ್ ಯಾದವ್ ತಿಳಿಸಿದ್ದಾರೆ. ಮುಂಬೈನಲ್ಲೇ ಸಭೆ ಮಾಡಿ, ಕೊಲೆಗೆ ಪ್ಲ್ಯಾನ್ ಮಾಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ. ಕೇಳಿದ್ದಾರೆ. ಇದನ್ನೂ ಓದಿ:ಹಿಂದಿ ಕಿರುತೆರೆಯಲ್ಲಿ ಬರಲಿದೆ `ಕೆಜಿಎಫ್ 2′ ಚಿತ್ರ: ರಾಕಿಭಾಯ್ ಎಂಟ್ರಿಗೆ ಕೌಂಟ್ ಡೌನ್
Advertisement
Advertisement
ಈ ಮೊದಲು ಸಲ್ಮಾನ್ ಖಾನ್ ಅವರನ್ನು ಕೊಲ್ಲುವುದಾಗಿ ಸಲ್ಮಾನ್ ತಂದೆಗೆ ಪತ್ರ ಬರೆದಿದ್ದರು ಬಿಷ್ಣೋಯ್ ಅಂಡ್ ಗ್ಯಾಂಗ್. ಹೇಗೆ ಜೀವ ಉಳಿಸಿಕೊಳ್ಳುತ್ತೀಯಾ ಉಳಿಸಿಕೊ ಎಂದು ಪತ್ರದಲ್ಲಿ ಬರೆಯಲಾಗಿತ್ತು. ಹೀಗಾಗಿ ಈ ಕುರಿತು ಸಲ್ಮಾನ್ ಕೂಡ ದೂರು ನೀಡಿದ್ದರು. ಇವರ ಮನೆಗೆ ಭದ್ರತೆಯನ್ನು ಒದಗಿಸಲಾಗಿತ್ತು. ಅಲ್ಲದೇ, ಗನ್ ಲೈಸನ್ಸ್ ಕೂಡ ಪಡೆದುಕೊಂಡಿದ್ದರು. ಗುಂಡು ನಿರೋಧಕ ಕಾರು ಕೂಡ ಖರೀದಿಸಿದ್ದಾರೆ ಸಲ್ಮಾನ್.