ಲೋಕ ಸಮರ ಗೆಲ್ಲೋಕೆ ರಣತಂತ್ರ- ಹೊಸತೊಡಕು ನೆಪದಲ್ಲಿ ಹೆಚ್‍ಡಿಕೆ ತೋಟದ ಮನೆಯಲ್ಲಿ ಸಭೆ

Public TV
1 Min Read
HD Kumaraswamy

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಚುನಾವಣಾ ಕಣ ರಂಗೇರುತ್ತಿದೆ. ಲೋಕಸಭಾ ಸಮರ ಗೆಲ್ಲೋಕೆ ಮೈತ್ರಿ ನಾಯಕರು ರಣತಂತ್ರ ಹೂಡುತ್ತಿದ್ದಾರೆ.

ಹೊಸತೊಡಕು ನೆಪದಲ್ಲಿ ಇಂದು ಮೈತ್ರಿ ಒಕ್ಕಲಿಗ ನಾಯಕರು ತಂತ್ರ ರೂಪಿಸಿದ್ದಾರೆ. ಹೀಗಾಗಿ ಮಂಡ್ಯ ಲೋಕಸಭಾ ಮೈತ್ರಿ ಅಭ್ಯರ್ಥಿ ಹೆಚ್‍ಡಿ ಕುಮಾರಸ್ವಾಮಿ (HD Kumaraswamy) ಅವರ ಬಿಡದಿ ತೋಟದ ಮನೆಯಲ್ಲಿ ಒಕ್ಕಲಿಗ ನಾಯಕರ ಸಭೆ ನಡೆಸಲಾಗುತ್ತಿದೆ. ಈ ಮೂಲಕ ಹಳೆ ಮೈಸೂರು ಭಾಗದಲ್ಲಿ ಮತ ಬೇಟೆಗೆ ದೋಸ್ತಿ ತಂತ್ರ ರೂಪಿಸಿದೆ. ಹಳೆ ಮೈಸೂರು ಭಾಗವೇ ಮೈತ್ರಿ ನಾಯಕರ ಟಾರ್ಗೆಟ್ ಆಗಿದ್ದು, ಕಾಂಗ್ರೆಸ್ (Congress) ತಂತ್ರಕ್ಕೆ ಪ್ರತಿತಂತ್ರ ಎಳೆಯಲು ಸಭೆಯಲ್ಲಿ ಚರ್ಚೆ ನಡೆಸುವ ಸಾಧ್ಯತೆಗಳಿವೆ.

ಹಳೆ ಮೈಸೂರು ಭಾಗದಲ್ಲಿ ಮೈತ್ರಿ ಪರಿಣಾಮವಾಗಿ ಕೆಲಸ ಮಾಡಲು ಒಗ್ಗಟ್ಟು ಪ್ರದರ್ಶನ ಹಾಗೂ ಒಕ್ಕಲಿಗ ಮತಗಳು ಕಾಂಗ್ರೆಸ್ ಕಡೆ ವಾಲದಂತೆ ತಂತ್ರಗಾರಿಕೆ ರೂಪಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆಗಳಿವೆ. ಇದನ್ನೂ ಓದಿ: ಪ್ರಣಾಳಿಕೆಯಲ್ಲಿ ಸಿಎಎ ಉಲ್ಲೇಖಿಸಲು ಭಯ – ಕಾಂಗ್ರೆಸ್‌ ವಿರುದ್ಧ ಪಿಣರಾಯಿ ಕಿಡಿ

ಒಕ್ಕಲಿಗ ಮತಗಳು ಮೈತ್ರಿ ಅಭ್ಯರ್ಥಿಗಳಿಗೆ ಬರುವ ನಿಟ್ಟಿನಲ್ಲಿ ತಂತ್ರಗಾರಿಕೆ, ಮಂಡ್ಯ, ಬೆಂಗಳೂರು ಗ್ರಾಮಾಂತರ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು-ಕೊಡಗಿನಲ್ಲಿ ಕಾಂಗ್ರೆಸ್‍ಗೆ ಟಕ್ಕರ್ ಕೊಡಲು ಪ್ಲಾನ್. ಒಟ್ಟಿನಲ್ಲಿ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ.

Share This Article