ಹಾಸನ: ನನ್ನ ಕ್ಷೇತ್ರದ ಮತದಾರರು ಯಾವ ಪಕ್ಷಕ್ಕೆ ಹೋಗಿ ಎನ್ನುವರೋ ಅಲ್ಲಿಗೆ ಹೋಗುತ್ತೇನೆ. ನನಗೆ ಬಿಜೆಪಿ ಅವರು ಅವಮಾನ ಮಾಡಿದ್ದಾರೆ ಅದಕ್ಕೆ ಅನುಭವಿಸಿದ್ದಾರೆ ಎ.ಮಂಜು ನಾಯಕರ ವಿರುದ್ಧವೇ ಮಾಜಿ ಸಚಿವ ಎ.ಮಂಜು ಕಿಡಿ ಕಾರಿದ್ದಾರೆ.
ಅರಕಲಗೂಡು ತಾಲೂಕಿನ ಕೊಣನೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಹಾಸನದಲ್ಲಿ ನನ್ನ ಮಗನಿಗೆ ಟಿಕೆಟ್ ಕೊಡಿ ಎಂದು ನಾವು ಕೇಳಿರಲಿಲ್ಲ. ಆದರೆ ಬಿಜೆಪಿ ಅವರೇ ಬಂದು ಮಂಥರ್ ಗೌಡಗೆ ಟಿಕೆಟ್ ನೀಡುವ ವಿಚಾರ ಮಾತನಾಡಿದ್ದರು. ಜೊತೆಗೆ ನಾನು ಐದು ಕೋಟಿ ರೂ. ಬಂಡವಾಳ ಹಾಕುತ್ತೇನೆ ಎಂದು ಹಾಸನದ ಶಾಸಕರು ಪಾರ್ಟಿ ಮೀಟಿಂಗ್‌ನಲ್ಲಿ ಹೇಳಿದ್ದರು ಎಂದರು.
Advertisement
Advertisement
ಈ ಮಾತುಕತೆಯ ಬಳಿಕ ಶಾಸಕ ಪ್ರೀತಂ ಗೌಡ ಹಾಗೂ ಅವರ ಬೆಂಬಲಿಗರು ನಂತರದಲ್ಲಿ ಕ್ವಾಲಿಟಿ ಬಾರ್ ಶರತ್ ಅವರನ್ನು ಮಂಥರ್ ಬಳಿ ಕಳುಹಿಸಿ, ಚುನಾವಣೆಗೆ ನಿಲ್ಲಬಾರದು ಎಂದು ಹೇಳಿಸಿದ್ದಾರೆ. ನಂತರ ಕಾಂಗ್ರೆಸ್ ನಾಯಕರು ಮಂಥರ್ ಗೌಡನನ್ನು ಗುರುತಿಸಿ ಕೊಡಗಿನಲ್ಲಿ ಟಿಕೆಟ್ ನೀಡಿದ್ದಾರೆ ಎಂದು ತಿಳಿಸಿದರು.
Advertisement
ಒಳ ಒಪ್ಪಂದ ಮಾಡಿಕೊಳ್ಳುವ ಪ್ರವೃತ್ತಿ ಹಾಸನದ ಕೆಲವು ನಾಯಕರಲ್ಲಿ ಇದೆ. ಮತದಾರರ ಮನವೊಲಿಸುವಲ್ಲಿ ಮುಖಂಡರು ವಿಫಲರಾಗಿದ್ದಾರೆ. ಅವರವರ ಸ್ವಾರ್ಥಕ್ಕೆ, ಸ್ವಹಿತಾಸಕ್ತಿಗೆ ಪಕ್ಷ ಬಲಿ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಶಾಸಕರ ವಿರುದ್ಧ ಹರಿಹಾಯದ್ದರು.
Advertisement
ಮತದಾರರು ಕೊಡಗು ವಿಧಾನ ಪರಿಷತ್ ಚುನಾವಣೆಯಲ್ಲಿ ಸರ್ಕಾರದ ಪರ ಮತ ಹಾಕಿದ್ದಾರೆ. ಆದ್ದರಿಂದ ಕೊಡಗಿನಲ್ಲಿ ಬಿಜೆಪಿ ಗೆದ್ದಿದೆ. ಕಾಂಗ್ರೆಸ್ ಪೈಪೋಟಿ ಕೊಟ್ಟಿದೆ. ಕೇವಲ ಹದಿನೈದು ದಿನದಲ್ಲಿ ಅಷ್ಟು ಮತ ನೀಡಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪರ ಅಲೆ ಇದೆ ಎನ್ನುವುದನ್ನು ಕೊಡಗು ವಿಧಾನ ಪರಿಷತ್ ಚುನಾವಣೆಯಿಂದ ಸಾಬೀತಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸರ್ಕಾರದ ಯೋಜನೆಯ ಪ್ರಯೋಜನ ಪಡೆಯಲು ಅಣ್ಣ-ತಂಗಿಯನ್ನೇ ಮದುವೆಯಾದ!
ಇದೇ ವೇಳೆ ಕಾಂಗ್ರೆಸ್ ಬೆಂಬಲ ನೀಡಿರುವ ವಿಚಾರವಾಗಿ ಮಾತನಾಡಿದ ಅವರು, ಮಗನಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದೇನೆ ಹೊರತು ಬಿಜೆಪಿ ವಿರುದ್ಧ ಹೇಳಿಕೆ ನೀಡಿಲ್ಲ. ಹಾಸನದ ಎಂಎಲ್‌ಸಿ ಚುನಾವಣೆಯಲ್ಲಿ ನಾಯಕರ ಕೊರತೆಯೇ ಎರಡು ಪಕ್ಷಗಳು ಹೀನಾಯವಾಗಿ ಸೋಲಲು ಕಾರಣವಾಗಿದೆ ಎಂದರು. ಇದನ್ನೂ ಓದಿ: ಕೊಡಗಿನ ಗ್ರಾಮವೊಂದರಲ್ಲಿ ಪುರಾತನ ಈಶ್ವರ ಕೆತ್ತನೆ ಕಲ್ಲುಗಳು ಪತ್ತೆ
ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ತಟಸ್ಥವಾಗಿದ್ದೆ, ಯಾರನ್ನೂ ಬೆಂಬಲಿಸಿಲ್ಲ. ನಾನು ಬಿಜೆಪಿಯಲ್ಲಿದ್ದೇನೆ ಅಂಥಾ ನನಗೆ ಅನ್ನಿಸುತ್ತದೆ. ಆದರೆ ಪಕ್ಷ ಏನು ಹೇಳುತ್ತದೆ ಎನ್ನುವುದು ಗೊತ್ತಿಲ್ಲ. ಅಧಿಕೃತವಾಗಿ ಬಿಜೆಪಿ ಪಕ್ಷದಲ್ಲಿದ್ದೇನೆ ಎಂದರು. ಇದನ್ನೂ ಓದಿ: ಮೈಸೂರಿನಲ್ಲಿ ನಕಲಿ ನಂದಿನಿ ತುಪ್ಪ ತಯಾರಿಕೆ ಜಾಲ ಪತ್ತೆ- ಗೇಡೌನ್ ಮೇಲೆ ಅಧಿಕಾರಿಗಳ ದಾಳಿ