ಮಂಡ್ಯ: ಚಿಕನ್ ಅಂಗಡಿಯೊಂದರಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣವನ್ನು ಎತ್ತಿಕೊಂಡು ಕಳ್ಳನೊಬ್ಬ ಎಸ್ಕೇಪ್ ಆಗಿರುವ ಘಟನೆ ಮಂಡ್ಯದಲ್ಲಿ (Mandya) ನಡೆದಿದೆ.
ಶ್ರೀರಂಗಪಟ್ಟಣದ (Srirangapatna) ಹಾಲದಹಳ್ಳಿಯಲ್ಲಿರುವ ಮೋಹನ್ ಚಿಕನ್ ಸೆಂಟರ್‌ನಲ್ಲಿ ಈ ಘಟನೆ ನಡೆದಿದೆ. ಚಿಕನ್ ಸೆಂಟರ್ ಮಾಲೀಕರು ಅಂಗಡಿ ತೆರೆದು ಹೊರಗಡೆ ಹೋಗಿದ್ದರು. ಈ ವೇಳೆ ಅಂಗಡಿಗೆ ಬಂದಿದ್ದ ಆಸಾಮಿ ಕಳ್ಳ, ಯಾರೂ ಇಲ್ಲದ್ದನ್ನು ಗಮನಿಸಿ ಕ್ಯಾಶ್ ಕೌಂಟರ್‌ನಲ್ಲಿದ್ದ ಹಣವನ್ನು ತೆಗೆದುಕೊಂಡು ಪರಾರಿಯಾಗಿದ್ದಾನೆ. ಗಲ್ಲದಲ್ಲಿದ್ದ 12,500 ರೂ. ದೋಚಿ ಬೈಕ್‌ನಲ್ಲಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: Miracle: ಅಪಘಾತಕ್ಕೀಡಾಗಿ ಬೇರ್ಪಟ್ಟ ತಲೆಯನ್ನು ಜೋಡಿಸಿ ಯಶಸ್ವಿಯಾದ ವೈದ್ಯರು!
ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬೈಕ್‌ನಲ್ಲಿ ಸ್ಟೈಲಾಗಿ ಬಂದರ ವ್ಯಕ್ತಿ ನೇರವಾಗಿ ಅಂಗಡಿಗೆ ಬಂದು ಕ್ಯಾಶ್ ಕೌಂಟರ್‌ಗೆ ಕೈ ಹಾಕಿ ಕ್ಷಣಾರ್ಧದಲ್ಲೇ ದುಡ್ಡು ತೆಗೆದುಕೊಂಡು ಹೋಗುತ್ತಾನೆ. ಇಂತಹ ಕಳ್ಳರಿಗೆ ಮಾಲೀಕರು-ಗ್ರಾಹಕರು ಇರದ ಅಂಗಡಿಯೇ ಟಾರ್ಗೆಟ್.
ಚಿಕನ್ ಸೆಂಟರ್, ಹಾರ್ಡ್‌ವೇರ್ ಅಂಗಡಿ ಯಾವುದಿದ್ರೂ ತಮ್ಮ ಕೈಚಳಕ ತೋರುತ್ತಾರೆ. ಮೊನ್ನೆ ಮಳವಳ್ಳಿ ಮಿಕ್ಕರೆಯ ಪೈಂಟ್ & ಹಾರ್ಡ್‌ವೇರ್ ಅಂಗಡಿಯಲ್ಲೂ ಇದೇ ಮಾದರಿಯಲ್ಲಿ ಕಳ್ಳತನವಾಗಿತ್ತು. ಅಂಗಡಿಯಲ್ಲಿ ಯಾರು ಇಲ್ಲದ್ದನ್ನ ಗಮನಿಸಿ 15,೦೦೦ ರೂ. ಕದ್ದು ಕಳ್ಳರು ಎಸ್ಕೇಪ್ ಆಗಿದ್ದರು.
ಅಂಗಡಿ ತೆರೆದಾಗ ಅಲ್ಲಿ ಯಾರಾದರು ಇರಬೇಕು. ಅಂಗಡಿ ತೆರೆದು ಹಾಗೆಯೇ ಬಿಟ್ಟು ಹೊರಗಡೆ ಹೋಗಬೇಡಿ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಟೆಸ್ಟಿಂಗ್ ವೇಳೆ ರಾಕೆಟ್ ಎಂಜಿನ್ ಸ್ಫೋಟ – ಜಪಾನ್ ಬಾಹ್ಯಾಕಾಶ ಸಂಸ್ಥೆಗೆ ಮತ್ತೆ ನಿರಾಸೆ
Web Stories