ನವದೆಹಲಿ: ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್‌ಗಿಂತ ಹೆಚ್ಚು ಕಾಲ ಗುರಾಯಿಸಿದ್ರೆ, ಅಶ್ಲೀಲ ಸನ್ನೆ ಮಾಡಿದ್ರೆ, ಹಾಡು ಅಥವಾ ಕವಿತೆ ಹೇಳಿದ್ರೆ ಐಪಿಸಿ (IPL) ಸೆಕ್ಷನ್ ಅಡಿಯಲ್ಲಿ ಬಂಧಿಸಬಹುದಾಗಿದೆ ಎಂದು ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ (NCIB) ಹೆಸರಿನ ಸರ್ಕಾರೇತರ ಸಂಸ್ಥೆಯೊಂದು ತಿಳಿಸಿದೆ.
किसी भी लड़की/ महिला को 14 सेकेंड से अधिक घूरने पर लड़की के असहजता के मामले पर IPC की धारा 294 (ए) और (बी) का आश्रय लिया जाता है, जो युवती या महिला के प्रति अश्लील इशारों, टिप्पणियों, गाने या कविता-पाठ करने के अपराध में दोषी पाए गए व्यक्ति को अधिकतम तीन महीनों की सजा देती है।
— NCIB Headquarters (@NCIBHQ) November 28, 2022
Advertisement
ನ್ಯಾಷನಲ್ ಕ್ರೈಂ ಇನ್ವೆಷ್ಟಿಗೇಶನ್ ಬ್ಯೂರೋ ಹೆಸರಿನ ಎನ್‌ಜಿಒ (NGO) ಸಂಸ್ಥೆ ಈ ಕುರಿತು ಟ್ವೀಟ್ ಮಾಡಿದ್ದು, ಯಾವುದೇ ಹುಡುಗಿ ಅಥವಾ ಮಹಿಳೆಯನ್ನ 14 ಸೆಕೆಂಡ್‌ಗಿಂತಲೂ ಹೆಚ್ಚುಕಾಲ ಗುರಾಯಿಸುವುದು, ಅಶ್ಲೀಲ ಸನ್ನೆ ಮಾಡಿದ್ರೆ, ಹಾಡು ಅಥವಾ ಕವಿತೆ ಹೇಳುವುದು ಭಾರತೀಯ ದಂಡ ಸಂಹಿತೆ ಸೆಕ್ಷನ್ 294 (A) ಮತ್ತು (B) ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ. ಪಠ್ಯ ಸಂದೇಶ ಕಳುಹಿಸುವ ಅಪರಾಧಕ್ಕೆ ಗರಿಷ್ಠ 3 ತಿಂಗಳ ಶಿಕ್ಷೆ ವಿಧಿಸಬಹುದಾಗಿದೆ. ಆದ್ದರಿಂದ ಈ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಬಹುದು ಎಂದು ತಿಳಿಸಿದೆ.
Advertisement
भारतीय दंड संहिता के तहत महिला या युवती के प्रति अश्लील हरकत, अभद्र इशारे या तीखी टिप्पणियां करने वाले पर एक वर्ष के कठोर कारावास की सजा या जुर्माना या दोनों लगाए जा सकते हैं।
— NCIB Headquarters (@NCIBHQ) November 28, 2022
Advertisement
ಈ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರೀ ಚರ್ಚೆಗೆ ಗ್ರಾಸವಾಗಿದೆ. ಇದು ಜನರನ್ನು ದಾರಿ ತಪ್ಪಿಸುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದೆ. ಇದನ್ನೂ ಓದಿ: ನ.30 ರಿಂದ ಪುರುಷ ಸಂತಾನಹರಣ ಚಿಕಿತ್ಸಾ ಶಿಬಿರ – ಚಿಕಿತ್ಸೆಗುಂಟು 1,100 ರೂ. ಪ್ರೋತ್ಸಾಹಧನ
Advertisement
ಎನ್‌ಸಿಐಬಿ ಕೇಂದ್ರಕಚೇರಿ ಹೆಸರಿನಲ್ಲಿ ಖಾತೆ ಪರಿಶೀಲನೆ ಆಗಿದೆ. ಇದರ ಲೋಗೋ ಪೊಲೀಸ್ ಇಲಾಖೆಯ ಲೋಗೋವನ್ನೇ ಹೋಲುತ್ತದೆ. ಎನ್‌ಜಿಒ ಸಂಸ್ಥೆ ಎಂಬುದನ್ನು ತನ್ನ ಟೈಮ್‌ಲೈನ್‌ನಲ್ಲಿ ಹೇಳಿಕೊಂಡಿದೆ. ಹೀಗಾಗಿ ಇದು ಸರ್ಕಾರದ ಆದೇಶವೆಂದು ಸಾಮಾಜಿಕ ಜಾಲತಾಣ ಬಳಕೆದಾರರು ಗೊಂದಲಕ್ಕೊಳಗಾಗಿದ್ದಾರೆ. ಇದನ್ನೂ ಓದಿ: ಅಶ್ಲೀಲ ವೀಡಿಯೋ ಕಳುಹಿಸಿ ಮುಸ್ಲಿಮ್ ಯುವಕರ ತಲೆಕೆಡಿಸಿದ್ದ ಶಾರೀಕ್
ಸೆಕ್ಷನ್ ಹೇಳೋದೇನು?
ಯಾವುದೇ ಒಬ್ಬ ವ್ಯಕ್ತಿಯು ಮತ್ತೊಬ್ಬರಿಗೆ ಕಿರುಕುಳ ಉಂಟಾಗುವ ಹಾಗೆ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಕೃತ್ಯವನ್ನು ಮಾಡಿದರೆ, ಅಥವಾ ಸಾರ್ವಜನಿಕ ಸ್ಥಳದಲ್ಲಿ ಅಶ್ಲೀಲ ಹಾಡುಗಳನ್ನು ಹಾಡಿದರೆ, ಕೇಳಿದರೆ ಅಥವಾ ಉಚ್ಚರಿಸಿದರೆ ಐಪಿಸಿ ಸೆಕ್ಷನ್ 294 ರ ಅಡಿ ಶಿಕ್ಷಾರ್ಹ ಅಪರಾಧವಾಗಿದೆ. ಹಾಗೆಯೇ ಒಬ್ಬ ಮಹಿಳೆಯ ಮಾನಕ್ಕೆ ಕುಂದುಂಟು ಮಾಡುವ ಉದ್ದೇವಿರುವ ಶಬ್ಧ, ಸಂಜ್ಞೆ ಅಥವಾ ಕೃತ್ಯಗಳು ಸೆಕ್ಷನ್ 509ರ ಅಡಿ ಶಿಕ್ಷಾರ್ಹ ಅಪರಾಧವಾಗುತ್ತದೆ.