KoppalLatestLeading NewsMain Post

ಕುಡಿತ ಬಿಡು ಎಂದಿದ್ದಕ್ಕೆ ಮನೆಯನ್ನೇ ತೊರೆದಿದ್ದ – ಆಧಾರ್‌ಗಾಗಿ 24 ವರ್ಷಗಳ ಬಳಿಕ ವಾಪಸ್‌ ಬಂದ

ಕೊಪ್ಪಳ: ಕುಡಿತ ಬಿಡು ಎಂದು ಮಾವ ಬದ್ಧಿಮಾತು ಹೇಳಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ ವ್ಯಕ್ತಿ, ಆಧಾರ್‌ ಕಾರ್ಡ್‌ಗಾಗಿ (Aadhar Card) 24 ವರ್ಷಗಳ ಬಳಿಕ ಮತ್ತೆ ಮನೆಗೆ ಮರಳಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.

ಹೌದು ಈತನ ಹೆಸರು ಗಂಗಾಧರ. ಕೊಪ್ಪಳ (Koppala) ಜಿಲ್ಲೆಯ ಕನಕಗಿರಿ ತಾಲೂಕಿನ ಚಿಕ್ಕಖೇಡ ಗ್ರಾಮದ ನಿವಾಸಿ. ಈತನಿಗೆ ಕಳೆದ 24 ವರ್ಷಗಳ ಹಿಂದೆ ಕುಡಿತ ಬಿಡು ಎಂದು ಮಾವ ಬೈದಿದ್ದಕ್ಕೆ ಮನೆ ಬಿಟ್ಟು ಹೋಗಿದ್ದ. ಮಾವ ಬೈದ ಎಂಬ ಒಂದೇ ಕಾರಣಕ್ಕೆ ಅಂದು ಗ್ರಾಮವನ್ನೇ ಬಿಟ್ಟು ಹೋಗಿದ್ದವನು ಇದೀಗ ಮತ್ತೆ ತವರು ಸೇರಿದ್ದಾನೆ. ಇದನ್ನೂ ಓದಿ: ಯುವತಿಗೆ ಆ್ಯಸಿಡ್ ಹಾಕಿ ಜೈಲು ಸೇರಿರುವ ನಾಗನಿಗೆ ಗ್ಯಾಂಗ್ರಿನ್

ಗಂಗಾದರ್ ಮನೆ ಬಿಟ್ಟು ಹೋಗ್ತಿದ್ದಂತೆ ಮನೆಯವರು ಈತನಿಗಾಗಿ ಸಾಕಷ್ಟು ಹುಡುಕಾಟ ನಡೆಸಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಕೊನೆಗೆ ಬೇಸತ್ತ ಕುಟುಂಬಸ್ಥರು ಗಂಗಾಧರ ಮೃತಪಟ್ಟಿರಬಹುದು ಎಂದು ಕೈಚೆಲ್ಲಿ ಕೂತಿದ್ರು. ಇತ್ತ ಗಂಗಾಧರ್ ಮಂಗಳೂರಿನ ಹಂದಿ ಸಾಕಾಣಿಕೆ ಕೇಂದ್ರದಲ್ಲಿ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ. ಕುಟುಂಬಸ್ಥರನ್ನು ನೆನಪು ಮಾಡಿಕೊಳ್ಳದೇ 24 ವರ್ಷಗಳಿಂದ ಜೀವನ ನಡೆಸ್ತಿದ್ದ. ಮಂಗಳೂರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ಹೋಗಿದ್ದ ವೇಳೆ ಆಧಾರ್ ಕಾರ್ಡ್ ಕೇಳಿದ್ದಾರೆ. ಆಧಾರ ಕಾರ್ಡ್ ಇಲ್ಲದೆ ಇರುವುದರಿಂದ ಚಿಕ್ಕಖೇಡ ಗ್ರಾಮಕ್ಕೆ ಒಮ್ಮೆ ಬಂದು ಹೋಗಿದ್ದ. ಆಗ ಮನೆಯವರು ಸಿಕ್ಕಿರಲಿಲ್ಲ. ಇದೀಗ ಎರಡನೇ ಬಾರಿ ಗ್ರಾಮಕ್ಕೆ ಆಗಮಿಸಿ ಮನೆ ಹುಡುಕಾಡಿ, ತವರು ಸೇರಿಕೊಂಡಿದ್ದಾನೆ.

ಗಂಗಾಧರನಿಗೆ ಹೆಂಡತಿ ಸೇರಿದಂತೆ ಇಬ್ಬರು ಗಂಡು ಮಕ್ಕಳು ಇದ್ದಾರೆ. ಮಕ್ಕಳಿಗೆ 2 ವರ್ಷಗಳು ಆಗಿದ್ದಾಗ ಮನೆ ಬಿಟ್ಟು ಹೋಗಿದ್ದಾನೆ. ಈಗ ಮಕ್ಕಳು ದೊಡ್ಡವರಾಗಿದ್ದಾರೆ. ಮಕ್ಕಳು ತಮಗೆ ಬುದ್ದಿ ತಿಳಿದಾಗಿನಿಂದ ತಂದೆಗಾಗಿ ಹುಡುಕಾಟವನ್ನು ನಡೆಸಿ, ತಂದೆ ಬದುಕಿಲ್ಲ ಅಂದುಕೊಂಡಿದ್ರು. ಆದರೆ ಹೆಂಡತಿ ಮಾತ್ರ ಗಂಡನು ಇನ್ನೂ ಬದುಕಿದ್ದಾನೆ ಎನ್ನುವ ನಂಬಿಕೆಯಲ್ಲಿಯೇ ತಾಳಿಯನ್ನು ತೆಗೆಯದೇ ಕಾಯುತ್ತಿದ್ದಳು. 24 ವರ್ಷಗಳ ನಂತರ ಗಂಗಾಧರ ಮನೆಗೆ ಬಂದಿರುವುದು ಮಕ್ಕಳು, ಹೆಂಡತಿಯಲ್ಲಿ ಸಂತಸ ಮನೆ ಮಾಡಿದೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ಯಮಸ್ವರೂಪಿ ರಸ್ತೆ ಗುಂಡಿ ಅವಾಂತರ – ಬೈಕ್‌ನಿಂದ ಬಿದ್ದು ವ್ಯಕ್ತಿ ಕೋಮಾ

Live Tv

Leave a Reply

Your email address will not be published. Required fields are marked *

Back to top button