ಕಾಮೋತ್ತೇಜಕ ಮಾತ್ರೆ ಸೇವಿಸಿ ರೇಪ್ – ವಿಪರೀತ ರಕ್ತಸ್ರಾವದಿಂದ ಗೆಳತಿ ಸಾವು

Public TV
4 Min Read
‘energy booster pills 1

ಲಕ್ನೋ: 25ರ ವರ್ಷದ ಯುವಕನೊಬ್ಬ ತನ್ನ ಗೆಳೆಯೊಂದಿಗೆ ಲೈಂಗಿಕ ಕ್ರಿಯೆ ನಡೆಸಿದ ಬಳಿಕ ಆಕೆಯ ಖಾಸಗಿ ಭಾಗದಿಂದ ರಕ್ತಸ್ರಾವವಾಗಿದ್ದು, ಮರುದಿನವೇ ಹುಡುಗಿ ಶವವಾಗಿ ಪತ್ತೆಯಾಗಿರುವ ಘಟನೆ ಉತ್ತರಪ್ರದೇಶದಲ್ಲಿ (UttarPradesh) ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಕೊಲೆ ಹಾಗೂ ಅತ್ಯಾಚಾರ ಆರೋಪದ ಅಡಿಯಲ್ಲಿ 25ರ ಯುವಕನನ್ನು ಬಂಧಿಸಲಾಗಿದೆ.

ಆರೋಪಿ ರಾಜ್ ಗೌತಮ್ ಯುವತಿಯೊಂದಿಗೆ ಸಂಬಂಧ ಹೊಂದಿದ್ದು, ರಾತ್ರಿ ಮೃತ ಹುಡುಗಿಯ (Girl) ಮನೆಗೆ ಬರುವ ಮುನ್ನ ಎನರ್ಜಿ ಬೂಸ್ಟರ್ ಮಾತ್ರೆ (Energy Booster Pills) ಸೇವಿಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಇದನ್ನೂ ಓದಿ: ಹೆರಿಗೆಗೆಂದು ಪತ್ನಿಯನ್ನು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ ವ್ಯಕ್ತಿಯಿಂದ ಮಹಿಳಾ ಸಿಬ್ಬಂದಿಗೆ ಕಿರುಕುಳ

ಪೊಲೀಸರ (Police) ಮಾಹಿತಿ ಪ್ರಕಾರ, ಕಳೆದ ಒಂದು ವರ್ಷದ ಹಿಂದೆ ಇಬ್ಬರು ಸಾಮಾಜಿಕ ಜಾಲತಾಣದಲ್ಲಿ (Social Media) ಪರಿಚಯವಾಗಿದ್ದರು. ಅವರ ನಡುವೆ ಅನೇಕ ಸಂದೇಶಗಳು ವಿನಿಮಯವಾಗಿದ್ದವು. ಕೆಲ ದಿನಗಳು ಕಳೆದ ನಂತರ ಯುವಕ ಹುಡುಗಿಯನ್ನು ಬರುವಂತೆ ಕೇಳಿದ್ದಾನೆ. ಮೊದಲು ನಿರಾಕರಿಸಿದ ಆಕೆ ನಂತರ ಬರುವುದಾಗಿ ಒಪ್ಪಿಕೊಂಡಿದ್ದಾಳೆ. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!

‘energy booster pills

ಸಿನಿಮಾವನ್ನೂ ಮೀರಿಸುವ ಥ್ರಿಲ್ಲರ್ ಕಹಾನಿ: ಇದೇ ತಿಂಗಳ ನವೆಂಬರ್ 9ರಂದು ಘಟನೆ ನಡೆದಿದೆ. ಅಂದು ಆರೋಪಿ ಯುವಕ ರಾಜ್ ಬೆಳಗ್ಗೆ 11:32ರ ವೇಳೆಗೆ ತನ್ನ ಹಾಸ್ಟೆಲ್‌ನಿಂದ ಹೊರಟು 11:47ಕ್ಕೆ ಹುಡುಗಿ ಮನೆಗೆ ಬಂದಿದ್ದಾನೆ. ಬರುವ ವೇಳೆ ತನ್ನ ಲೈಂಗಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕಾಗಿ ಎನರ್ಜಿ ಬೂಸ್ಟರ್ ಮಾತ್ರೆ (Energy Booster Pills) ಸೇವಿಸಿದ್ದಾನೆ. ನಂತರ ಹುಡುಗಿ ಮನೆಗೆ ಬಂದವನೇ ಆಕೆಯೊಂದಿಗೆ ಲೈಂಗಿಕ ಕ್ರಿಯೆಗೆ ಮುಂದಾಗಿದ್ದಾನೆ. ಹುಡುಗಿ ಪ್ರತಿಭಟನೆಯ ಹೊರತಾಗಿಯೂ ಮೃಗೀಯವಾಗಿ ವರ್ತಿಸಿದ್ದು, ಆಕೆ ಮೂರ್ಛೆ ಹೋಗುವವರೆಗೂ ಅತ್ಯಾಚಾರ ಮಾಡಿದ್ದಾನೆ. ಇದರಿಂದ ಆಕೆಯ ಖಾಸಗಿ ಭಾಗದಲ್ಲಿ ರಕ್ತಸ್ರಾವವಾಗಿದೆ. ಇದನ್ನು ನೋಡಿದ ರಾಜ್ ಹೆದರಿ ಅಲ್ಲಿಂದ ಓಡಿಹೋಗಿದ್ದಾನೆ. ಅತಿಯಾದ ರಕ್ತಸ್ರಾವದಿಂದ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಹುಡುಗಿ ಮಧ್ಯಾಹ್ನ 1 ಗಂಟೆ ಸುಮಾರಿಗೆ ಸಾವನ್ನಪ್ಪಿದ್ದಾಳೆ.

LOVERS 1 1

ಆಕೆಯ ಕಿರಿ ಸಹೋದರಿ ಮನೆಗೆ ಹಿಂತಿರುಗಿದಾಗ ಸಂತ್ರಸ್ತೆ ಹಾಸಿಗೆ ಮೇಲೆ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದನ್ನು ಕಂಡಿದ್ದಾಳೆ. ನಂತರ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ವೈದ್ಯರು ತಪಾಸಣೆ ನಡೆಸಿದ ಬಳಿಕ ಆಕೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆಯಲ್ಲಿ ಅತ್ಯಾಚಾರ ದೃಢಪಟ್ಟಿದೆ. ಅಲ್ಲದೆ ಆಕೆಯ ಖಾಸಗಿ ಭಾಗಗಳಲ್ಲಿ ಉಂಟಾಗಿದ್ದ ಗಂಭೀರ ಗಾಯಗಳಿಂದಲೇ ಅತಿಯಾದ ರಕ್ತಸ್ರಾವವಾಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಬೈದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ

Lovers

ಇದಾದ ನಂತರ ಸಂತ್ರಸ್ತ ಹುಡುಗಿಯ ಕುಟುಂಬವು, ನೆರೆಹೊರೆಯವರು ಹಾಗೂ 65 ವರ್ಷದ ಮಹಿಳೆಯೊಬ್ಬರು ಕೊಲೆಯಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಲಿಖಿತ ದೂರು ನೀಡಿದ್ದರು. ದೂರನ್ನು ಆಧರಿಸಿ ಪೊಲೀಸ್ ನೆರೆಹೊರೆಯವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು. ಆದರೆ ಹುಡುಗಿಯ ಮೊಬೈಲ್ ಡೇಟಾ ಪರಿಶೀಲಿಸಿದಾಗ ಕೊಲೆಗೆ ರಾಜ್ ಕಾರಣ ಎಂಬುದು ಪತ್ತೆಯಾಗಿದೆ. ಬಳಿಕ ಪೊಲೀಸರು ಆರೋಪಿಯನ್ನು ಹಾಸ್ಟೆಲ್‌ನಿಂದ ಕರೆದುಕೊಂಡುಬಂದಿದ್ದಾರೆ.

CRIME (1)

ರಾಜ್ ರಹಸ್ಯವೇನು?
ಆರೋಪಿ ರಾಜ್ ಬರನ್ ಅಲಿಯಾಸ್ ರಾಜ್ ಗೌತಮ್ ಪೊಲೀಸರು ಬಂಧಿಸಿದ ಬಳಿಕ, ತಾನು ಮೃತ ಹುಡುಗಿಯನ್ನು ಪ್ರೀತಿಸುತ್ತಿದ್ದು, ಇಬ್ಬರ ನಡುವೆ ಸಂಬಂಧವಿತ್ತೆಂದು ಒಪ್ಪಿಕೊಂಡಿದ್ದಾನೆ. ಆಕೆ ಒಬ್ಬಳೆ ಇದ್ದಾಳೆ ಎಂದು ತಿಳಿಸಿದ ಬಳಿಕವೇ ನಾನು ಆಕೆಯ ಮನೆಗೆ ಹೋದೆ. ನಂತರ ಲೈಂಗಿಕ ಕ್ರಿಯೆಗೆ ಮುಂದಾದೆವು. ಆದರೆ ಸಂಭೋಗದ ಸಮಯದಲ್ಲೇ ಹುಡುಗಿಗೆ ವಿಪರೀತ ರಕ್ತಸ್ರಾವ ಪ್ರಾರಂಭವಾಯಿತು. ಆಕೆ ಪ್ರಜ್ಞೆ ಕಳೆದುಕೊಂಡಳು. ನಂತರ ಆಕೆಗೆ ಔಷಧ ಪಡೆಯಲು ಮೆಡಿಕಲ್ ಶಾಪ್‌ಗೆ ಹೋದೆನು. ಆದರೆ ಅವರು ರೋಗ ನಿರ್ಣಯಕ್ಕಾಗಿ ಆಕೆಯನ್ನು ಕರೆತರಲೇಬೇಕು ಎಂದು ಹೇಳಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

crime

ರಾಜ್ ಮೊಬೈಲ್ ಪರಿಶೀಲನೆ ಮಾಡಿದಾಗ ಮೃತ ಹುಡುಗಿಯ ಹೊರತಾಗಿ ಇತರ ಹುಡುಗಿಯರೊಂದಿಗೂ ಚಾಟ್ ಮಾಡಿರುವುದು ಪತ್ತೆಯಾಗಿವೆ. ನಾವು ಎಲ್ಲಾ ಸಾಂದರ್ಭಿಕ ಸಾಕ್ಷ್ಯಗಳನ್ನು ತನಿಖೆ ಮಾಡುತ್ತಿದ್ದೇವೆ ಎಂದು ಪೊಲೀಸರು ಹೇಳಿದರು.

ಕುಟುಂಬದ ಆರೋಪ ಏನು?
ವರದಿಗಳ ಪ್ರಕಾರ, ಅತ್ಯಾಚಾರವೇ ಸಾವಿಗೆ ಕಾರಣ ಅನ್ನೋದನ್ನ ಒಪ್ಪುವುದಿಲ್ಲ. ಆರೋಪಿ ಅತ್ಯಾಚಾರದ ಬಳಿಕ ಆಕೆಯ ಖಾಸಗಿ ಭಾಗಗಳಿಗೆ ಚಾಕುವಿನಿಂದ ಇರಿದಿದ್ದಾನೆ. ಸತ್ಯಾಂಶ ತಿಳಿಯಲು ವಿಧಿವಿಜ್ಞಾನಗಳ ತನಿಖೆಗೆ ಮತ್ತು ಶವ ಪರೀಕ್ಷೆ ನಡೆಸಬೇಕು ಎಂದು ಯುವತಿ ತಂದೆ ಒತ್ತಾಯಿಸಿದ್ದಾರೆ.

ವೈದ್ಯರು ಹೇಳಿದ್ದೇನು?
ಸಾಮಾನ್ಯವಾಗಿ ಮಿತಿ ಮೀರಿದ ಔಷಧ ಸೇವನೆಗಳಿಂದ ಗುಪ್ತಾಂಗಗಳಲ್ಲಿ ಗಾಯ ಉಂಟಾಗಬಹುದು. ಇದರಿಂದ ರಕ್ತಸ್ರಾವವಾಗಲಿ, ರಕ್ತ ಹೆಪ್ಪುಗಟ್ಟುವಿಕೆಯಾಗಲಿ ಆಗುವುದಿಲ್ಲ. ಆದರೆ ಈ ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಕಂಡುಬಂದಿರುವ ಗಾಯಗಳು ರಾಡ್‌ಗಳ ಪ್ರಯೋಗಗಳಿಂದ ಸಂಭವಿಸಬಹುದು ಎಂದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *