ಪಾಟ್ನಾ: ಪತ್ನಿಯನ್ನು (Wife) ಹೆರಿಗೆಗೆಂದು ಕರೆದುಕೊಂಡು ಬಂದಿದ್ದ ಮಹಿಳಾ ಸಿಬ್ಬಂದಿಗೆ (Female Guard) ಕಿರುಕುಳ ನೀಡಿದ ಘಟನೆ ಬಿಹಾರದಲ್ಲಿ (Bihar) ನಡೆದಿದೆ.
ಬಿಹಾರದ ಹಾಜಿಪುರದಲ್ಲಿ ಈ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿ ಪ್ರತೀಕ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಕ್ ತನ್ನ ಪತ್ನಿಯನ್ನು ಹೆರಿಗೆಗೆ ಎಂದು ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದ. ಪ್ರತಿಕ್‍ನ ಪತ್ನಿಯನ್ನು ಆಸ್ಪತ್ರೆಯವರು (Hospital) ವಾರ್ಡ್‍ನಲ್ಲಿ ದಾಖಲಿಸಿದ್ದರು. ಆರೋಪಿ ಆಸ್ಪತ್ರೆಯ ಹೊರಗೆ ತಿರುಗಾಡುತ್ತಿದ್ದ. ಈ ವೇಳೆ ಮಹಿಳಾ ಸಿಬ್ಬಂದಿಗೆ ಕಿರುಕುಳ ನೀಡಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ.
Advertisement
Advertisement
ಆಸ್ಪತ್ರೆಯ ಹೊರಗೆ ಭದ್ರತೆಯಲ್ಲಿ ನಿಯೋಜಿಸಲಾದ ಮಹಿಳೆ ಮಾತನಾಡಿ, ಪ್ರತೀಕ್ ತನಗೆ ಲೈಂಗಿಕ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದನು. ತಾನು ಸ್ವೀಟ್ ಅಂಗಡಿಯ ಮಾಲೀಕನೆಂದು ಹೇಳಿಕೊಂಡ ಆತ ಸಿಹಿ ತಿನ್ನುವಂತೆ ಒತ್ತಾಯಿಸುತ್ತಿದ್ದಾನೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದಾಗ ಆರೋಪಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ ಎಂದು ತಿಳಿಸಿದರು. ಇದನ್ನೂ ಓದಿ: ಗೆಳತಿಯ ದೇಹವನ್ನು 35 ಪೀಸ್ ಮಾಡಿ, ದೆಹಲಿಯಾದ್ಯಂತ ಕಾಡುಗಳಲ್ಲಿ ಹೂತು ಹಾಕಿದ!
Advertisement
ಆರೋಪಿಯು ಪರಾರಿಯಾಗಲು ಯತ್ನಿಸಿದಾಗ ಆಸ್ಪತ್ರೆ ಸಿಬ್ಬಂದಿಗೆ ಸಿಕ್ಕಿಬಿದ್ದಿದ್ದಾನೆ. ಈ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿವಿಲ್ ಸರ್ಜನ್ ಸ್ಥಳಕ್ಕೆ ಆಗಮಿಸಿ ಪೊಲೀಸರಿಗೆ ಕರೆ ಮಾಡಿದ್ದಾರೆ. ಆರೋಪಿಯನ್ನು ಬಂಧಿಸಿ, ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಶಿಕ್ಷಕಿ ಬೈದಿದ್ದಕ್ಕೆ ಡೆತ್‍ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ