ಲಕ್ನೋ: ವಯಸ್ಸಾಯಿತು ಇನ್ನೂ ಯಾವಾಗ ನೀನು ಮದ್ವೆ (Marriage) ಆಗೋದು ಅಂತ ಪದೇ ಪದೇ ತಮಾಷೆ ಮಾಡುತ್ತಿದ್ದಕ್ಕೆ ತನ್ನ ಅತ್ತಿಗೆಯನ್ನೇ ಕೊಂದಿರುವ ಘಟನೆ ಉತ್ತರ ಪ್ರದೇಶದ (Uttar Pradesh) ಬಂದಾ ಪಟ್ಟಣದಲ್ಲಿ ನಡೆದಿದೆ.
ಕೊಲೆ ಆರೋಪಿಯನ್ನು ಸುನೀಲ್ ಹಾಗೂ ಕೊಲೆಯಾದ ಆತನ ಅತ್ತಿಗೆಯನ್ನು (Sister in Law) ಆಶಾದೇವಿ ಎಂದು ಗುರುತಿಸಲಾಗಿದೆ. ಆಶಾದೇವಿ ತನ್ನ ಮೈದುನನೊಂದಿಗೆ ಆಗಾಗ್ಗೆ ಮದುವೆ ವಿಚಾರವಾಗಿ ತಮಾಷೆ ಮಾಡುತ್ತಲೇ ಇದ್ದಳು. ಇದರಿಂದ ಮನನೊಂದಿದ್ದ ಮೈದುನ ಆಕೆಯನ್ನು ಕೊಂದೇಬಿಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಗೆದ್ದ ಟ್ರಂಪ್, ಸೋತ ಹ್ಯಾರಿಸ್‌ಗೆ ರಾಹುಲ್ ಗಾಂಧಿ ಪತ್ರ
ಮಾಹಿತಿ ಪ್ರಕಾರ, ಕೊಲೆಯಾದ ಮಹಿಳೆ ಹಾಗೂ ಆತನ ಮೈದುನ ಬಂದಾ ಪಟ್ಟಣದ ನಿವಾಸಿಗಳು. ಆಶಾದೇವಿ ಸುನೀಲ್‌ಗೆ ಆಗಾಗ್ಗೆ ಮದುವೆ ವಿಷಯದಲ್ಲಿ ತಮಾಷೆ ಮಾಡುತ್ತಿದ್ದಳು. ಅಷ್ಟೇ ಅಲ್ಲ, ನನಗೆ ಆಗಾಗ್ಗೆ ಹಣ ಕೊಡ್ತಾನೆ ಅಂತ ಸುನೀಲ್ ತಾಯಿ ಮುಂದೆ ಹೇಳಿದ್ದಳು. ಇದರಿಂದ ಸುನೀಲ್ ತಾಯಿ ಅಸಮಾಧಾನಗೊಂಡಿದ್ದರು. ಬಳಿಕ ತನ್ನ ಅತ್ತಿಗೆಗೆ ತಮಾಷೆ ಮಾಡುವುದನ್ನು ನಿಲ್ಲಿಸುವಂತೆ ಹೇಳಿದ್ದ. ಆದರೂ ಆಶಾ ತಮಾಷೆ ಮುಂದುವರಿಸಿದ್ದಳು. ಇದರಿಂದ ಬೇಸತ್ತ ಸುನೀಲ್ ಆಕೆಯನ್ನ ಕೊಂದೇ ಬಿಟ್ಟಿದ್ದಾನೆ ಎನ್ನಲಾಗಿದೆ.
ಸ್ಕೆಚ್ ಹಾಕಿದ್ದು ಹೇಗೆ?
ಇದೇ ನವೆಂಬರ್ 3ರ ರಾತ್ರಿ ಸುನೀಲ್ ಟೆರೇಸ್ ಮೇಲಿಂದ ತನ್ನ ಅತ್ತಿಗೆ ಮಲಗಿದ್ದ ಕೊಠಡಿಗೆ ನುಗ್ಗಿದ್ದಾನೆ. ನಿದ್ರೆ ಮಾಡುತ್ತಿದ್ದ ಆಶಾಳ ತಲೆಗೆ ದೊಣ್ಣೆಯಿಂದ ಬಲವಾಗಿ ಹೊಡೆದು ಪ್ರಜ್ಞೆ ತಪ್ಪಿಸಿದ್ದಾನೆ. ಬಳಿಕ ಆಕೆಯನ್ನ ಹೊರಗೆ ಎಳೆದೊಯ್ದು, ಇಟ್ಟಿಗೆಯಿಂದ ತಲೆಯನ್ನ ಜಜ್ಜಿ, ಕಾಲಿನಿಂದ ಚೆನ್ನಾಗಿ ತುಳಿದು ಕೊಲೆ ಮಾಡಿದ್ದಾನೆ. ನಂತರ ಕಸದ ರಾಶಿಯಿಂದ ಆಕೆಯ ದೇಹವನ್ನ ಮುಚ್ಚಿಟ್ಟು, ಯಾರಿಗೂ ತಿಳಿಯದಂತೆ ಮನೆಗೆ ಬಂದಿದ್ದಾನೆ. ಇದನ್ನೂ ಓದಿ: ಜಮ್ಮು & ಕಾಶ್ಮೀರ | ಭದ್ರತಾ ಪಡೆಗಳ ಎನ್‌ಕೌಂಟರ್‌ಗೆ ಇಬ್ಬರು ಉಗ್ರರು ಬಲಿ
ಘಟನೆ ನಡೆದ ಮರುದಿನ ಆಶಾಳ ಮಗು ಮನೆಯಲ್ಲಿ ಅಳುತ್ತಿದ್ದುದ್ದನ್ನು ಕಂಡು ಮನೆಯವರು ಗಾಬರಿಯಾಗಿದ್ದಾರೆ. ಆಶಾ ಇಲ್ಲದಿರುವುದು ಗೊತ್ತಾದಾಗ ಆಕೆಯನ್ನ ಹುಡುಕಲು ಪ್ರಾರಂಭಿಸಿದ್ದಾರೆ. ಬಳಿಕ ಮನೆಯಿಂದ ಸ್ವಲ್ಪ ದೂರದಲ್ಲಿದ್ದ ಕಸದ ಗುಡ್ಡೆಯಲ್ಲಿ ಆಕೆಯ ಶವ ಪತ್ತೆಯಾಗಿದೆ. ಬಳಿಕ ಕುಟುಂಬಸ್ಥರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ತನಿಖೆ ನಡೆಸಿ ಆರೋಪಿಯನ್ನ ಬಂಧಿಸಿದ್ದಾರೆ.
ಬಳಿಕ ಆರೋಪಿ ಕೊಲೆಗೆ ಬಳಸಿದ್ದ ದೊಣ್ಣೆ ಮತ್ತು ಇಟ್ಟಿಗೆಯನ್ನು ವಶಪಡಿಸಿಕೊಂಡಿದ್ದಾರೆ. ಘಟನೆಯನ್ನು ಯಶಸ್ವಿಯಾಗಿ ಪತ್ತೆ ಮಾಡಿದ ತಂಡಕ್ಕೆ ಎಸ್ಪಿ ಅಂಕುರ್ ಅಗರ್ವಾಲ್ 10,000 ರೂ. ಬಹುಮಾನ ನೀಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಗಾಂಧಿ ಸ್ಪರ್ಧಿಸಿರೋ ಕ್ಷೇತ್ರದಲ್ಲಿ ಸಿದ್ದರಾಮಯ್ಯ, ಡಿಕೆಶಿ ಭಾವಚಿತ್ರ ಇರುವ 30 ರೇಶನ್ ಕಿಟ್‌ಗಳು ಜಪ್ತಿ