ರಾಯ್ಪುರ: ತನ್ನ ಸಂಕಲ್ಪ ಈಡೇರುವವರೆಗೆ ಗಡ್ಡವನ್ನು ಕತ್ತರಿಸುವುದಿಲ್ಲವೆಂದು ಪ್ರತಿಜ್ಞೆ ಮಾಡಿದ್ದ ವ್ಯಕ್ತಿ ಬರೋಬ್ಬರಿ 21 ವರ್ಷಗಳ ಬಳಿಕ ಶುಕ್ರವಾರ ತಮ್ಮ ಸಂಕಲ್ಪ ಈಡೇರಿದ ಹಿನ್ನೆಲೆ ಗಡ್ಡವನ್ನು ತೆಗೆಸಿಕೊಂಡಿದ್ದಾರೆ.
ಛತ್ತೀಸ್‌ಗಢದ(Chhattisgarh) ವ್ಯಕ್ತಿ 21 ವರ್ಷಗಳ ಹಿಂದೆ ರಾಜ್ಯದ ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರ(MCB) ಹೊಸ ಜಿಲ್ಲೆಯಾಗುವವರೆಗೆ ತಾವು ಗಡ್ಡವನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರು. ಇದೀಗ ಛತ್ತೀಸ್‌ಗಢ ಸರ್ಕಾರ ಎಂಸಿಬಿಯನ್ನು ರಾಜ್ಯದ 32ನೇ ಜಿಲ್ಲೆಯಾಗಿ ಗುರುತಿಸಿದೆ. ಈ ಹಿನ್ನೆಲೆ ವ್ಯಕ್ತಿ ಕನಸು ನನಸಾಗಿರುವುದರಿಂದ ತನ್ನ ಗಡ್ಡಕ್ಕೆ ಕತ್ತರಿ ಹಾಕಿದ್ದಾರೆ.
Advertisement
ಹೌದು, ಈ ವ್ಯಕ್ತಿಯ ಹೆಸರು ರಾಮಶಂಕರ್ ಗುಪ್ತಾ. ಇವರು ಮಹೇಂದ್ರಗಢ ನಿವಾಸಿಯಾಗಿದ್ದು, ಆರ್‌ಟಿಐ ಕಾರ್ಯಕರ್ತರೂ ಆಗಿದ್ದಾರೆ. ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರವನ್ನು ಹೊಸ ಜಿಲ್ಲೆಯನ್ನಾಗಿ ಮಾಡುವ ಘೋಷಣೆಯನ್ನು ಕಳೆದ ವರ್ಷ ಆಗಸ್ಟ್‌ನಲ್ಲಿಯೇ ಮಾಡಲಾಗಿತ್ತು. ಈ ಹಿನ್ನೆಲೆ ಗುಪ್ತಾ ಅವರು 21 ವರ್ಷಗಳ ಬಳಿಕ ಗಡ್ಡವನ್ನು ಕತ್ತರಿಸಿದ್ದರು. ಆದರೆ ಹೊಸದಾಗಿ ಘೋಷಣೆಯಾದ ಜಿಲ್ಲೆ ಉದ್ಘಾಟನೆಗೊಳ್ಳಲು ಮತ್ತೊಂದು ವರ್ಷವೇ ಬೇಕಾಯಿತು. ತಾನು ಮಾಡಿದ ಸಂಕಲ್ಪದಂತೆ ಗುಪ್ತಾ ಅವರು ಮತ್ತೆ ತನ್ನ ಗಡ್ಡವನ್ನು ಕತ್ತರಿಸದೇ 1 ವರ್ಷ ಹಾಗೆಯೇ ಬಿಟ್ಟಿದ್ದರು. ಇದೀಗ ಶುಕ್ರವಾರ ಎಂಸಿಬಿಯನ್ನು ಹೊಸ ಜಿಲ್ಲೆಯಾಗಿ ಉದ್ಘಾಟನೆಗೊಳಿಸುತ್ತಲೇ ಗುಪ್ತಾ ಅವರು ಕೊನೆಗೂ ಕ್ಲೀನ್ ಶೇವ್ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರತಿ 44 ಸೆಕೆಂಡ್‍ಗೆ ಒಬ್ಬರಂತೆ ಕೊರೊನಾಗೆ ಬಲಿಯಾಗುತ್ತಿದ್ದಾರೆ – WHO
Advertisement
Advertisement
ಈ ಬಗ್ಗೆ ತಿಳಿಸಿರುವ ಗುಪ್ತಾ ಎಂಸಿಬಿ ಜಿಲ್ಲೆ ರಚನೆಯಾಗುವವರೆಗೂ ನಾನು ನನ್ನ ಗಡ್ಡವನ್ನು ಕತ್ತರಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದೆ. ಒಂದು ವೇಳೆ ಎಂಸಿಬಿ ಜಿಲ್ಲೆಯಾಗದೇ ಹೋಗಿದ್ದರೆ ನಾನು ಗಡ್ಡವನ್ನು ತೆಗೆಸುತ್ತಿರಲಿಲ್ಲ. ಈ ಜಿಲ್ಲೆಗಾಗಿ 40 ವರ್ಷಗಳ ಸುದೀರ್ಘ ಹೋರಾಟ ನಡೆಸಲಾಗಿದೆ. ಆದರೆ ಈ ಜಿಲ್ಲೆಗಾಗಿ ನಿಜವಾಗಿಯೂ ಹೋರಾಟ ಮಾಡಿದವರು ಇಂದು ನಮ್ಮೊಂದಿಗಿಲ್ಲ. ಇದೀಗ ಜಿಲ್ಲೆ ರಚನೆಯಾಗಿದ್ದು, ಇದಕ್ಕಾಗಿ ಹೋರಾಟ ಮಾಡಿದವರ ಆತ್ಮಕ್ಕೆ ಶಾಂತಿ ಸಿಗಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಾಕ್‌ನಲ್ಲಿ ಭೀಕರ ಪ್ರವಾಹ – ಸಂತ್ರಸ್ತರಿಗೆ ದೇವಾಲಯದಲ್ಲಿ ಆಶ್ರಯ ನೀಡಿದ ಹಿಂದೂ ಸಮುದಾಯ
Advertisement
ಛತ್ತೀಸ್‌ಗಢ ಮುಖ್ಯಮಂತ್ರಿ ಭೂಪೇಶ್ ಬಘೇಲ್ ಅವರು ಶುಕ್ರವಾರ ತಮ್ಮ ರಾಜ್ಯದಲ್ಲಿ 2 ಹೊಸ ಜಿಲ್ಲೆಗಳ ರಚನೆಗೆ ಅನುಮೋದನೆ ನೀಡಿದ್ದಾರೆ. ಈ ಮೂಲಕ ರಾಜ್ಯದ ಒಟ್ಟು ಜಿಲ್ಲೆಗಳ ಸಂಖ್ಯೆ 33ಕ್ಕೆ ಏರಿಕೆಯಾಗಿದೆ. ಮನೇಂದ್ರಗಢ-ಚಿರ್ಮಿರಿ-ಭಾರತ್‌ಪುರ ಹಾಗೂ ಶಕ್ತಿ ಎಂಬ ಹೊಸ 2 ಜಿಲ್ಲೆಗಳಿಗೆ ಬಘೇಲ್ ಅನುಮೋದನೆ ನೀಡಿದ್ದಾರೆ ಎಂದು ರಾಜ್ಯ ಸಾರ್ವಜನಿಕ ಸಂಪರ್ಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.