ಮಹಿಳಾ ಶೌಚಾಲಯ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡ

Public TV
1 Min Read
Belgaum Womens Toilet Sahitya Bhavan

ಬೆಳಗಾವಿ: ನಗರದ ಕನ್ನಡ ಸಾಹಿತ್ಯ ಭವನ ಆವರಣದಲ್ಲಿರುವ ಮಹಿಳಾ ಶೌಚಾಲಯಕ್ಕೆ ವ್ಯಕ್ತಿಯೊಬ್ಬ ಒಳಗಡೆ ಪ್ರವೇಶಿಸಿ ಬಾಗಿಲು ಲಾಕ್ ಮಾಡಿಕೊಂಡು ಹುಚ್ಚಾಟ ಮಾಡಿರುವ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ನಗರದ ಚೆನ್ನಮ್ಮ ವೃತ್ತದಲ್ಲಿರುವ ಸಾಹಿತ್ಯ ಭವನದ ಆವರಣದಲ್ಲಿ ಮಹಿಳಾ ಶೌಚಾಲಯಕ್ಕೆ ನುಗ್ಗಿದ ವ್ಯಕ್ತಿ ಕಿತ್ತೂರು ತಾಲೂಕಿನ ಖೋದಾನಪುರ ಮೂಲದವನು ಎನ್ನಲಾಗಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಹುಚ್ಚಾಟ ಪ್ರದರ್ಶನ ಮಾಡುತ್ತಿದ್ದವನನ್ನು ವಶಕ್ಕೆ ಪಡೆದುಕೊಂಡರು. ಇದನ್ನೂ ಓದಿ: ಯುನಿಕಾರ್ನ್‌ಗಳ ಮೌಲ್ಯ 25 ಲಕ್ಷ ಕೋಟಿಗೆ ಹೆಚ್ಚಳ – ಮೋದಿ

Belgaum Womens Toilet Sahitya Bhavan 4

ನಡೆದಿದ್ದೇನು?
ಇಂದು ಬೆಳಗ್ಗೆ 7 ಗಂಟೆಗೆ ವ್ಯಕ್ತಿಯೊಬ್ಬ ಸಾಹಿತ್ಯ ಭವನದಲ್ಲಿರುವ ಶೌಚಾಲಯಕ್ಕೆ ಹೋಗಿ ಲಾಕ್ ಮಾಡಿಕೊಂಡಿದ್ದಾನೆ. ಈ ವೇಳೆ ಹುಚ್ಚಾಟ ಪ್ರದರ್ಶನ ಮಾಡಿದ್ದು, ಸ್ಥಳೀಯರು ಭಯಗೊಂಡಿದ್ದಾರೆ. ಪರಿಣಾಮ ಭವನದ ಸಿಬ್ಬಂದಿಗಳು ಮತ್ತು ಸ್ಥಳದಲ್ಲಿದ್ದ ಪೊಲೀಸರು ಬಾಗಿಲು ತೆಗೆಸಲು ಹರಸಾಹಸಪಟ್ಟರು.

Belgaum Womens Toilet Sahitya Bhavan 1

ಕಾರಣವೇನು?
ಈ ವೇಳೆ ವ್ಯಕ್ತಿ, ಪಿಎಸ್‍ಐ ಸ್ಥಳಕ್ಕೆ ಬರಬೇಕು ಅಲ್ಲಿವರೆಗೂ ನಾನು ಬಾಗಿಲು ತೆಗೆಯುವುದಿಲ್ಲ ಎಂದು ಪಟ್ಟುಹಿಡಿದಿದ್ದಾನೆ. ಈ ಹಿನ್ನೆಲೆ ಸ್ಥಳಕ್ಕೆ ಮಾರ್ಕೆಟ್ ಪಿಎಸ್‍ಐ ವಿಠ್ಠಲ ಹಾವನ್ನವರ್ ಆಗಮಿಸಿ ಆತನನ್ನು ಮನವೊಲಿಸಿ ಬಾಗಿಲು ತೆಗೆಸಿದರು. ಆದ್ರೆ, ಆ ವ್ಯಕ್ತಿಯು ಕೈಯಲ್ಲಿ ಬಕೆಟ್ ಹಿಡಿದುಕೊಂಡು ಅದರ ತುಂಬ ಗಾಜಿನ ಪುಡಿಯನ್ನು ತುಂಬಿ ಶೌಚಾಲಯದಿಂದ ಹೊರಬಂದಿದ್ದಾನೆ. ಇದನ್ನೂ ಓದಿ: ಭಾರತ ನರೇಂದ್ರ ಮೋದಿ, ಅಮಿತ್ ಶಾ ಅವರದ್ದಲ್ಲ – ಓವೈಸಿ

Belgaum Womens Toilet Sahitya Bhavan 2

ದೃಶ್ಯ ನೋಡಿದ ಎಲ್ಲರು ಒಂದು ಕ್ಷಣ ಗಾಬರಿಗೊಂಡಿದ್ದಾರೆ. ಪೊಲೀಸರು ಸಾಹಸ ಮಾಡಿ ಅವನ ಕೈಯಲ್ಲಿದ್ದ ಗಾಜಿನ ಪುಡಿಯನ್ನು ಕೆಳಗಡೆ ಚೆಲ್ಲಿಸಿದ್ದಾರೆ. ಬಳಿಕ ವ್ಯಕ್ತಿಯನ್ನ ಮನವೊಲಿಸಿದ ಬೆಳಗಾವಿ ಮಾರ್ಕೆಟ್ ಪೊಲೀಸರು ಠಾಣೆಗೆ ಕರೆದುಕೊಂಡು ಹೋದರು.

Share This Article
Leave a Comment

Leave a Reply

Your email address will not be published. Required fields are marked *