ಮುಂಬೈ: ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ – ಅಮಿತ್ ಶಾ ಅವರದ್ದಲ್ಲ, ಭಾರತ ದ್ರಾವಿಡರು ಮತ್ತು ಆದಿವಾಸಿಗಳದ್ದು ಎಂದು AIMIM ಮುಖ್ಯಸ್ಥ ಅಸಾದುದ್ದೀನ್ ಓವೈಸಿ ವಾಗ್ದಾಳಿ ನಡೆಸಿದ್ದಾರೆ.
ಮಹಾರಾಷ್ಟ್ರದ ಭಿವಂಡಿಯಲ್ಲಿ ನಡೆದ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಭಾರತ ನನ್ನದಲ್ಲ, ಠಾಕ್ರೆಯವರದ್ದಲ್ಲ, ಮೋದಿ- ಅಮಿತ್ ಶಾ ಅವರದ್ದಲ್ಲ, ಭಾರತವು ಯಾರದ್ದು ಎಂದರೆ ಅದು ದ್ರಾವಿಡರು ಮತ್ತು ಆದಿವಾಸಿಗಳದ್ದು. ಆಫ್ರಿಕಾ, ಇರಾನ್, ಮಧ್ಯ ಏಷ್ಯಾ, ಪೂರ್ವ ಏಷ್ಯಾ ಭಾಗದಿಂದ ಜನರು ವಲಸೆ ಬಂದ ನಂತರ ಭಾರತ ರಚನೆಯಾಗಿದೆ. ಆದರೆ ದೇಶದಲ್ಲಿ ಮೊಘಲರ ನಂತರವೇ BJP – RSS ನವರು ಎಂದು ಕಿಡಿಕಾರಿದ್ದಾರೆ.
Advertisement
Advertisement
ಇದೇ ವೇಳೆ ಶಿವಸೇನಾ, ಎನ್‌ಸಿಪಿ ಹಾಗೂ ಬಿಜೆಪಿ ನಾಯಕರನ್ನು ತರಾಟೆಗೆ ತೆಗೆದುಕೊಂಡ ಓವೈಸಿ, ಈ ಎಲ್ಲ ಪಕ್ಷಗಳು ಜಾತ್ಯಾತೀತ ಪಕ್ಷದ ನಾಯಕರು ಜೈಲಿಗೆ ಹೋಗಬಾರದು ಎಂದು ಭಾವಿಸುತ್ತಾರೆ. ಆದರೆ ಮುಸ್ಲಿಂ ನಾಯಕರು ಜೈಲಿಗೆ ಹೋದರೆ ಏಕೆ ಎಂದು ಪ್ರಶ್ನಿಸುವುದಿಲ್ಲ. ಅವರು ಜೈಲಿಗೆ ಹೋದರೂ ಪರ್ವಾಗಿಲ್ಲ ಎಂದು ಹೇಳುತ್ತಾರೆ ಎಂದು ಕಿಡಿ ಕಾರಿದರು.
Advertisement
Advertisement
3 ಪಕ್ಷಗಳಲ್ಲಿ ವಧು ಯಾರು?: ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ವೇಳೆ ಬಿಜೆಪಿ, ಶಿವಸೇನೆಯನ್ನು ಸೋಲಿಸಲು ಒವೈಸಿಗೆ ಮತ ನೀಡುವಂತೆ ಎನ್‌ಸಿಪಿ ನಾಯಕರು ಕೇಳುತ್ತಿದ್ದರು. ಚುನಾವಣೆ ಮುಗಿದ ನಂತರ ಎನ್‌ಸಿಪಿ ಶಿವಸೇನೆಯೊಂದಿಗೆ ವಿವಾಹವಾಗಿದೆ. ಆದರೆ ಮೂರು ಪಕ್ಷಗಳಲ್ಲಿ ವಧು ಯಾರು ಎಂಬುದೇ ನನಗೆ ಗೊತ್ತಾಗುತ್ತಿಲ್ಲ ಎಂದು ಓವೈಸಿ ವ್ಯಂಗ್ಯವಾಡಿದ್ದಾರೆ.