ಮೈಸೂರು: ಸ್ನೇಹಿತನಿಗೆ ಸಾಲ ಕೊಡಿಸಿದ್ದ ತಪ್ಪಿಗೆ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರು (Mysuru) ತಾಲೂಕು ದಂಡಿಕೆರೆ ಗ್ರಾಮದಲ್ಲಿ ನಡೆದಿದೆ.
ಮೃತನನ್ನು ನಂಜನಗೂಡು (Nanjanagudu) ತಾಲೂಕಿನ ಮುಲ್ಲೂಪುರ ಗ್ರಾಮದ ಸಿದ್ದೇಶ್ (40) ಎಂದು ಗುರುತಿಸಲಾಗಿದೆ.ಇದನ್ನೂ ಓದಿ: ಪತ್ನಿಯ ಖಾಸಗಿ ಫೋಟೋ, ವಿಡಿಯೋ ವೈರಲ್ – ಪತಿ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ಪತ್ನಿ
ಮೃತ ಸಿದ್ದೇಶ್ ತನ್ನ ಸ್ನೇಹಿತ ಮಣಿಕಂಠ ಎಂಬಾತನಿಗೆ ಖಾಸಗಿ ಬ್ಯಾಂಕ್‌ನಲ್ಲಿ ಕಾರು, ಜೊತೆಗೆ ತನ್ನ ಹೆಸರಿನಲ್ಲಿ 2 ಲಕ್ಷ ರೂ. ಸಾಲ ಕೊಡಿಸಿದ್ದರು. ಆತನ ಸ್ನೇಹಿತ ಕೇವಲ ಎರಡು ಕಂತು ಕಟ್ಟಿ ಸುಮ್ಮನಾಗಿದ್ದ. ನಂತರ ಸಾಲ ತೀರಿಸದಕ್ಕೆ ಬ್ಯಾಂಕ್‌ನವರು ಸಿದ್ದೇಶ್‌ಗೆ ಕರೆ ಮಾಡಿ ಸಾಲ ತೀರಿಸುವಂತೆ ತಿಳಿಸಿದ್ದಾರೆ. ಇದರಿಂದ ಮನನೊಂದು ಸಿದ್ದೇಶ್, ವಿಡಿಯೋ ಮಾಡಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ವರುಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ವಿಡಿಯೋದಲ್ಲಿ ಏನಿದೆ?
ನಾನು ಐಸಿಐಸಿ ಬ್ಯಾಂಕ್‌ನಿಂದ ಕಾರ್ ಲೋನ್ ಮಾಡಿ ಕೊಟ್ಟಿದ್ದೆ. ಇದರಿಂದ ನನಗೆ, ನನ್ನ ಪತ್ನಿಗೆ ಫೋನ್ ಮಾಡಿ ಸಾಲ ತೀರಿಸುವಂತೆ ಕಿರುಕುಳ ನೀಡಿದ್ದರು. ಆದರೆ ನನಗೆ ಅಂತಾ ಸಾಲ ತೆಗೆದುಕೊಂಡಿರಲಿಲ್ಲ. ಕಳೆದ 5-6 ವರ್ಷಗಳಿಂದ ಮಣಿಕಂಠ ಉಪ್ಪನಹಳ್ಳಿ ನನ್ನ ಸ್ನೇಹಿತ. ವೀರೇಗೌಡನಹುಂಡಿ ಬಳಿ 50 ಸಾವಿರ ರೂ. ಕುಮಾರ್ ಆಳಗಂಜಿ ಬಳಿ 50 ಸಾವಿರ ರೂ. ಕೊಡಿಸಿದ್ದೇನೆ. ಆತ್ಮೀಯ ಸ್ನೇಹಿತ ಟೀ ಅಂಗಡಿ ಇಟ್ಟುಕೊಂಡು ಜೀವನ ನಡೆಸಲಿ ಎಂದು ಸಾಲ ಕೊಡಿಸಿದೆ. ಅವನೂ ಕೂಡ ಉತ್ತಮ ಜೀವನ ನಡೆಸಿದ. ಬಳಿಕ ಕಾರು ಬೇಕು ಎಂದಿದ್ದ. ಅವನ ಸಿವಿಲ್ ಸ್ಕೋರ್ ಕಡಿಮೆ ಇತ್ತು. ಹೀಗಾಗಿ 87 ಸಾವಿರ ರೂ.. ಡೌನ್‌ಪೇಮೆಂಟ್ ಮಾಡಿ ಅವನಿಗೆ ನನ್ನ ಕಡೆಯಿಂದ ಆಲ್ಟೋ ಕಾರ್ ಕೊಡಿಸಿದೆ. ಕಾರ್ ನನ್ನ ಹೆಸರಿನಲ್ಲಿದೆ. ಆದರೆ ನಾನು ದಡ್ಡತನದ ಕೆಲಸ ಮಾಡಿದೆ. ಸ್ನೇಹಿತನನ್ನು ನಂಬಿ ನನ್ನ ಹೆಂಡತಿ ಮಕ್ಕಳನ್ನು ಬೀದಿಗೆ ಬರುವಂತೆ ಮಾಡಿದೆ ಎಂದು ಆತ್ಮಹತ್ಯೆಗೂ ಮುಂಚೆ ಮಾಡಿದ ವಿಡಿಯೋದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.ಇದನ್ನೂ ಓದಿ: ಮಾಜಿ ಸಚಿವ ಗೂಳಿಹಟ್ಟಿ ಶೇಖರ್‌ಗೆ ಮಾತೃವಿಯೋಗ