ಕೋಲ್ಕತ್ತಾ: ಸೇತುವೆ ಏರಿ ಆತ್ಮಹತ್ಯೆ (Suicide) ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿ ಹುಚ್ಚಾಟ ನಡೆಸುತ್ತಿದ್ದ ವ್ಯಕ್ತಿಗೆ ಬಿರಿಯಾನಿ (Biriyani) ಆಫರ್ ನೀಡಿ ಪೊಲೀಸರು ರಕ್ಷಣೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ (West Bengal) ನಡೆದಿದೆ.
ಕೋಲ್ಕತ್ತಾ ಮೂಲದ 40 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ನಗರದಲ್ಲಿರುವ ಸೇತುವೆಯನ್ನು ಏರಿ ಬೆದರಿಕೆ ಹಾಕಿ ಹುಚ್ಚಾಟ ನಡೆಸಿದ್ದಾರೆ. ಹೆಂಡತಿಯಿಂದ ಬೇರ್ಪಟ್ಟ ಕಾರಣ ತೀವ್ರ ಮಾನಸಿಕ ಒತ್ತಡಕ್ಕೆ ತುತ್ತಾಗಿದ್ದರು. ಇತ್ತ ವ್ಯವಹಾರದಲ್ಲಿಯೂ ಅರ್ಥಿಕ ನಷ್ಟಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಡಿಕೆಶಿ ಮತ್ತೆ ತಿಹಾರ್ ಜೈಲು ಸೇರುತ್ತಾರೆ: ಈಶ್ವರಪ್ಪ ಭವಿಷ್ಯ
Advertisement
Advertisement
ವ್ಯಕ್ತಿ ಮಧ್ಯಾಹ್ನ 3:20ರ ಸುಮಾರಿಗೆ ವಾಹನದಲ್ಲಿ ಹಿರಿಯ ಮಗಳನ್ನು ಸೈನ್ಸ್ ಸಿಟಿಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಸೇತುವೆಯ ಬಳಿ ವಾಹನ ನಿಲ್ಲಿಸಿದ್ದಾರೆ. ಮೊಬೈಲ್ ಫೋನ್ ರಸ್ತೆಯ ಮೇಲೆ ಬಿದ್ದುಹೋಗಿದೆ ನಾನು ಅದನ್ನ ಹುಡುಕಿಕೊಂಡು ಬರುತ್ತೇನೆ ಎಂದು ಮಗಳಿಗೆ ಹೇಳಿ ಹೋಗಿದ್ದಾರೆ. ಇದನ್ನೂ ಓದಿ: ಫೆ.13ರಂದು ದೆಹಲಿಯಲ್ಲಿ ರೈತರ ಪ್ರತಿಭಟನೆ- ಹರಿಯಾಣದ ಕೆಲವೆಡೆ ಇಂಟರ್ನೆಟ್ ಬ್ಯಾನ್, ಸೆಕ್ಷನ್ 144 ಜಾರಿ
Advertisement
Advertisement
ನಂತರ ಸೇತುವೆ ಮೇಲೆ ಹತ್ತಿ ಅಲ್ಲಿಂದ ಕೆಳಗೆ ಜಿಗಿಯುವುದಾಗಿ ಬೆದರಿಕೆ ಹಾಕಿ ನೆರೆದಿದ್ದ ಜನರ ಮಂದೆ ಹುಚ್ಚಾಟ ನಡೆಸಿದ್ದಾರೆ. ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಆಗಮಿಸಿ ಆತನ ಮನವೊಲಿಸಲು ಸುಮಾರು ಅರ್ಧ ಗಂಟೆಗಳ ಕಾಲ ಹಲವಾರು ವಿಧಾನಗಳಲ್ಲಿ ಪ್ರಯತ್ನಿಸಿದ್ದಾರೆ. ಇದನ್ನೂ ಓದಿ: ಮಶಾಕ್ ದರ್ಗಾದಲ್ಲಿ ಶಿವರಾತ್ರಿಯಂದು ಗುದ್ದಲಿ ಪೂಜೆ ಮಾಡ್ತೀವಿ: ಮುತಾಲಿಕ್
ಕೊನೆಗೆ ತಿನ್ನಲು ಬಿರಿಯಾನಿ ನೀಡಿ ನಿನಗೆ ಕೆಲಸವನ್ನು ಸಹ ನೀಡುತ್ತೇವೆ ಎಂದು ಉದ್ಯೋಗದ ಭರವಸೆ ನೀಡಿದಾಗ ಆತ ಕೆಳಗೆ ಬಂದಿದ್ದಾರೆ. ಮಗಳೊಂದಿಗೆ ಮಾತನಾಡಿದ ಬಳಿಕ ವ್ಯಕ್ತಿಯ ಮನವೊಲಿಸಲು ಸಾಧ್ಯವಾಯಿತು ಎಂದು ಕೋಲ್ಕತ್ತಾ ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಪ್ಪು ಪಟ್ಟಿ ಧರಿಸಿ ಅಮಿತ್ ಶಾ ವಿರುದ್ಧ ಪ್ರತಿಭಟನೆ