ನವದೆಹಲಿ: ವಿಕೃತಕಾಮಿಯೊಬ್ಬ ಬೀದಿ ಹೆಣ್ಣು ನಾಯಿಯನ್ನು (Female Dog) ಎಳೆದೊಯ್ದು ಅತ್ಯಾಚಾರ ಎಸಗಿ ವಿಕೃತಿ ಮೆರೆದಿರುವ ಅಮಾನವೀಯ ಘಟನೆ ದೆಹಲಿಯ (Delhi) ಇಂದರ್ ಪುರಿಯಲ್ಲಿ (Inder Puri) ನಡೆದಿದೆ.
ಯುವಕನೊಬ್ಬ ಹೆಣ್ಣುನಾಯಿಯ ಮೇಲೆ ಅತ್ಯಾಚಾರ ಎಸಗುತ್ತಿರುವ ವೀಡಿಯೋ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪ್ರಾಣಿ ಪ್ರಿಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಕೇಸ್- ಮೋಸ್ಟ್ ವಾಂಟೆಡ್ ಪಿಎಫ್ಐ ಸದಸ್ಯ ಅರೆಸ್ಟ್
Advertisement
The dog rape case indirapuram Delhi FIR DONE SEC 377@pfaindia thank u @Pfa_AntiCruelty@pankhuripathak thsnk u always for supporting the voiceless pic.twitter.com/wkl08NTUhn
— Animal welfare and care services, AWCS foundation (@navneet_AWCS) March 4, 2023
Advertisement
ಕಾಮುಕ ಯುವಕನನ್ನ ದೆಹಲಿ ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಈತ ಇಂದರ್ಪುರಿಯ ಬಿಬ್ಲಾಕ್ ನಂ.333 ರಲ್ಲಿ ವಾಸವಾಗಿದ್ದಾನೆ. ಕೆಲ ದಿನಗಳ ಹಿಂದೆ ನಾಯಿಯ ಮೇಲೆ ಅತ್ಯಾಚಾರ ಎಸಗಿದ್ದು, ಇದೀಗ ವೀಡಿಯೋ ಬೆಳಕಿಗೆ ಬಂದಿದೆ ಎನ್ನಲಾಗಿದೆ. ಇದನ್ನೂ ಓದಿ: ಡೋಲು ಬಡಿಯುತ್ತ ಪಬ್ ಮೇಲೆ ದಾಳಿ- ಸಂಘಟನೆ ಕಾರ್ಯಕರ್ತರು ವಶಕ್ಕೆ
Advertisement
Advertisement
ಈ ಸಂಬಂಧ ಇಂದರ್ ಪುರಿ ಪೊಲೀಸರು ಐಪಿಸಿ (IPC) ಸೆಕ್ಷನ್ 377 (ಅನೈಸರ್ಗಿಕ ಅಪರಾಧ) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿ ಪತ್ತೆಗಾಗಿ ಶೋಧ ಆರಂಭಿಸಿದ್ದು, ನಾಯಿ ಆರೈಕೆಗಾಗಿ ಪ್ರಾಣಿ ಆರೋಗ್ಯ ಕೇಂದ್ರಕ್ಕೆ ಕಳುಹಿಸಲಾಗಿದೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.