ಮಡಿಕೇರಿ: ಕಳೆದ 15 ವರ್ಷಗಳಿಂದ ತನ್ನ ಮನೆಯಲ್ಲೇ ಸಾವಿರಾರು ಮಕ್ಕಳಿಗೆ ಶಿಕ್ಷಣ (Education) ನೀಡುತ್ತಿದ್ದ ಶಿಕ್ಷಕಿಯೊಬ್ಬರು (Teacher), ದಸರಾ (Dasara) ರಜೆ ಕಳೆಯಲು ಬೆಂಗಳೂರಿನಲ್ಲಿರುವ (Bengaluru) ತನ್ನ ಮಗಳ ಮನೆಗೆ ತೆರಳಿದ್ದ ವೇಳೆ ಮೆದುಳು ಪಾರ್ಶ್ವವಾಯುವಿಗೆ ತುತ್ತಾಗಿ ಮೃತಪಟ್ಟಿದ್ದಾರೆ. ಆದರೆ ಸಾಯುವಾಗಲೂ ಎಂಟು ಜನರಿಗೆ ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದಿದ್ದಾರೆ.
ಕಣ್ಣು, ಕಿಡ್ನಿ, ಹೃದಯ (Heart), ಲೀವರ್ ದಾನ ಮಾಡುವ ಮೂಲಕ ಮಡಿಕೇರಿ (Madikeri) ನಿವಾಸಿ ಹಾಗೂ ಶಿಕ್ಷಕರೂ ಆದ ಪಂದ್ಯಂಡ ಆಶಾ (53) ಸಾವಿನಲ್ಲೂ ಸಾರ್ಥಕತೆ ಮೆರೆದ್ದಾರೆ. ಇದನ್ನೂ ಓದಿ: ಅತ್ತ ಭಾರತ್ ಜೋಡೋ ಪಾದಯಾತ್ರೆ- ಇತ್ತ ಕಾಂಗ್ರೆಸ್ ಚೋಡೋ ಯಾತ್ರೆ
ಕಳೆದ ಶನಿವಾರ ಬೆಂಗಳೂರಿನಲ್ಲಿರುವ ತನ್ನ ಮಗಳ ಮನೆಗೆ ಹೋಗಿದ್ದ ಆಶಾ, ಅವರು ಮೆದುಳು ಪಾರ್ಶ್ವವಾಯುವಿಗೆ (Brain Stroke) ತುತ್ತಾಗಿದ್ದರು. ತಕ್ಷಣವೇ ಅವರನ್ನು ನಾರಾಯಣ ಹೃದಯಾಲಯ (Narayana hrudayalaya) ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಅಷ್ಟರಲ್ಲಾಗಲೇ ಮೆದುಳು ನಿಷ್ಕ್ರಿಯಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಶಿಕ್ಷಕಿ ಆಶಾ ಅವರ ಪತಿ ಹಾಗೂ ಮಕ್ಕಳು ಅಂಗಾಂಗ ದಾನಕ್ಕೆ ಒಪ್ಪಿ ಸಹಿ ಮಾಡಿದ್ದಾರೆ. ಇದನ್ನೂ ಓದಿ: ರಾಜ್ಯದಲ್ಲಿ `108′ ಸಮಸ್ಯೆ – 2 ತಿಂಗಳಲ್ಲಿ ಬಗೆಹರಿಯಲಿದೆ ಎಂದ ಸುಧಾಕರ್
ಮಡಿಕೇರಿ ನಗರದ ಸುದರ್ಶನ ಬಡಾವಣೆಯ ನಿವಾಸಿ ಆಶಾ ಅವರು, ಕಳೆದ 15 ವರ್ಷದಿಂದ ತಮ್ಮ ಮನೆಯಲ್ಲೇ ಬೇಬಿ ಸಿಟ್ಟಿಂಗ್ ನಡೆಸುತ್ತಿದ್ದರು. ಮಕ್ಕಳೆಂದರೆ ಇವರಿಗೆ ಅಚ್ಚುಮೆಚ್ಚು. ಹಾಗಾಗಿ ಮಕ್ಕಳ ಹೆಸರಿನಲ್ಲೇ ಅಂಗಾಂಗ ದಾನ ಮಾಡಿ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದಾರೆ.