ಟೋಕಿಯೋ: ಸ್ಪೇಸ್ ಎಕ್ಸ್‌ನ ಚಂದ್ರಯಾನದಲ್ಲಿ ಮೊದಲ ಖಾಸಗಿ ಪ್ರಯಾಣಿಕನಾಗಿ ಜಪಾನ್ ಮೂಲದ ಯುಸಾಕು ಮೇಜಾವಾ 12 ದಿನಗಳ ಬಾಹ್ಯಾಕಾಶ ಪ್ರವಾಸದಿಂದ ಮರಳಿದ್ದಾರೆ.
ಜಪಾನಿನ ಕೋಟ್ಯಧೀಶ್ವರ ಮೇಜಾವಾ ಸೋಮವಾರ ಭೂಮಿಗೆ ಮರಳಿದ್ದು, ಕಝಾಕಿಸ್ತಾನ್‌ನಲ್ಲಿ ಬಂದಿಳಿದಿದ್ದಾರೆ. ಪ್ರಪಂಚದ ಶ್ರೀಮಂತ ವ್ಯಕ್ತಿ ಎಲೋನ್ ಮಸ್ಕ್ ಅವರ ಸ್ಪೇಸ್ ಎಕ್ಸ್ ಕಂಪನಿ ಚಂದ್ರಯಾನದ ಪರೀಕ್ಷೆಯನ್ನು ಕೈಗೊಂಡಿದ್ದು, ಯಶಸ್ವಿಯಾಗಿ ಪೂರ್ಣಗೊಂಡಿದೆ. ಇದನ್ನೂ ಓದಿ: ಮಾಜಿ ವಿಶ್ವಸುಂದರಿ, ನಟಿ ಐಶ್ವರ್ಯಾ ರೈಗೆ ಇ.ಡಿ ಸಮನ್ಸ್
ಡಿಸೆಂಬರ್ 8ರಂದು ಮೇಜಾವಾ ಹಾಗೂ ಅವರ ಸಹಾಯಕ ಈ ಕೋಟ್ಯಂತರ ಮೌಲ್ಯದ ಪ್ರಯಾಣವನ್ನು ಕೈಗೊಂಡಿದ್ದರು. ಒಂದು ದಶಕದಲ್ಲೇ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ(ಐಎಸ್‌ಎಸ್) ಪ್ರಯಾಣಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಅಯೋಧ್ಯೆ, ಕಾಶಿ ನಂತ್ರ ಮಥುರಾದಲ್ಲೂ ಭವ್ಯ ಮಂದಿರ ನಿರ್ಮಾಣ: ಹೇಮಾ ಮಾಲಿನಿ
ಶ್ರೀಮಂತ ವ್ಯಕ್ತಿಗಳಿಗೆ ಬಾಹ್ಯಾಕಾಶ ಪ್ರಯಾಣ ಒಂದು ಹೊಸ ಯುಗವಾಗಿ ಮಾರ್ಪಡಲು ಹೆಚ್ಚು ಸಮಯ ಬೇಕಾಗಿಲ್ಲ. ಹೀಗಾಗಿ ಐಎಸ್‌ಎಸ್‌ಗೆ ಭೇಟಿ ನೀಡಿದ ಜಪಾನೀ ಪ್ರವಾಸಿ ಮೇಜಾವಾ ಸ್ಪೇಸ್ ಎಕ್ಸ್‌ನ ಚಂದ್ರಯಾನದಲ್ಲಿ ಮೊದಲ ಖಾಸಗಿ ಪ್ರಯಾಣಿಕರಾಗಲು ಸಿದ್ಧರಾದರು.