ಕೊಪ್ಪಳ: ತನ್ನನ್ನು ಪ್ರೀತಿಸಲು (Love) ನಿರಾಕರಿಸಿದ್ದಕ್ಕೆ ಹುಡುಗಿಯನ್ನ ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಪ್ಪಳ (Koppal) ಜಿಲ್ಲೆಯಲ್ಲಿ ನಡೆದಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಬಳಗೇರಿ ಗ್ರಾಮದಲ್ಲಿ ಘಟನೆ ನಡೆದಿದೆ. ಹುಡುಗಿಯನ್ನು ಕೊಂದ ಬಳಿಕ ಯುವಕ ತಾನೂ ಚಾಕುವಿನಿಂದ ಚುಚ್ಚಿಕೊಂಡು ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾನೆ ಎಂದು ಹೇಳಲಾಗಿದೆ. ಇದನ್ನೂ ಓದಿ: ಕಾರಲ್ಲ, ನಾಯಿ ಹೋಗಿ ಬಿದ್ದಿದ್ದರಿಂದ ವೃದ್ಧೆ ಸಾವು: ಶಾಸಕ ದಡೆಸುಗೂರ್
Advertisement
Advertisement
ಮೃತ ಹುಡುಗಿ ಸುಮಾ ತೋಟದ (17) ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಅದೇ ಗ್ರಾಮದ ಮೃತ ಯುವಕ ಪ್ರಕಾಶ್ ಭಜಂತ್ರಿ ಪಿಯುಸಿ (PUC) ಮುಗಿಸಿ ಐಟಿಐ (ITI) ಓದುತ್ತಿದ್ದ. ಸುಮಾಳನ್ನ ಪ್ರೀತಿಸುವಂತೆ ಒತ್ತಾಯ ಮಾಡ್ತಿದ್ದ. ಆದ್ರೆ ಸುಮಾ ಪ್ರೀತಿ ನಿರಾಕರಿಸಿದ್ದಳು. ಇದನ್ನೂ ಓದಿ: ಮುಂದಿನ ಸಂಕ್ರಾಂತಿಗೆ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣ
Advertisement
Advertisement
ಸುಮಾ ಕೊಲೆಯಾಗೋದಕ್ಕೂ ಮುನ್ನ ಪ್ರಕಾಶ್ ಚಾಕು ಹಿಡಿದುಕೊಂಡು ಆಕೆ ಮನೆಗೆ ಹೋಗೋದನ್ನ ಸ್ಥಳೀಯರು ನೋಡಿದ್ದಾರೆ. ಸದ್ಯ ಸ್ಥಳಕ್ಕೆ ಕುಕನೂರು ಪೊಲೀಸರು ಭೇಟಿ ನೀಡಿ ಪರಿಶೀಲಿಸುತ್ತಿದ್ದಾರೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k