ಡಿಸಿಪಿ ಕಾರಿನ ಮೇಲೆ ಬಿತ್ತು ಬೃಹತ್‌ ಕೊಂಬೆ

Public TV
1 Min Read
A huge Tree branch falls on DCPs car in Benglauru 1

ಬೆಂಗಳೂರು: ಬೃಹತ್ ಗಾತ್ರದ ಮರದ ಕೊಂಬೆ ಬಿದ್ದು ಡಿಸಿಪಿ ಕಾರು ಜಖಂಗೊಂಡ ಘಟನೆ ಜಯನಗರದ ದಕ್ಷಿಣ ವಿಭಾಗ ಡಿಸಿಪಿ ಕಚೇರಿಯ ಆವರಣದಲ್ಲಿ ನಡೆದಿದೆ.

ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣ ಕಾಂತ್ ಅವರು ಇನ್ನೋವಾ ಕಾರಿನಿಂದ ಇಳಿದು ಕಚೇರಿಗೆ ತೆರಳಿದ 5 ನಿಮಿಷದ ಬಳಿಕ ಕೊಂಬೆ ಬಿದ್ದಿದೆ.

A huge Tree branch falls on DCPs car in Benglauru 2

ಡಿಸಿಪಿಯವರು ಇಳಿದ ಬಳಿಕ ಚಾಲಕ ಕಾರಿನಲ್ಲೇ ಕುಳಿತಿದ್ದರು. ಈ ವೇಳೆ ಮೊಬೈಲಿಗೆ ಕರೆ ಬಂದಿದೆ. ಕರೆ ಬಂದ ಹಿನ್ನೆಲೆಯಲ್ಲಿ ಕಾರಿನಿಂದ ಇಳಿದು ಹೊರ ಬಂದು ಮಾತನಾಡುತ್ತಿದ್ದಾಗ ಘಟನೆ ನಡೆದಿದೆ. ಇದನ್ನೂ ಓದಿ: ಹನುಮನ ವೇಷ ಧರಿಸಿದ್ದ ವ್ಯಕ್ತಿ ಪ್ರದರ್ಶನ ನೀಡುತ್ತಲೇ ಕುಸಿದು ಸಾವು

ಕೊಂಬೆ ಚಾಲಕ ಕುಳಿತಿದ್ದ ಸ್ಥಳದ ಮೇಲೆ ಬಿದ್ದಿದೆ. ಒಂದು ವೇಳೆ ಚಾಲಕ ಕಾರಿನಲ್ಲಿ ಇದ್ದಿದ್ದರೆ ಗಂಭೀರವಾದ ಗಾಯಗಳಾಗುವ ಸಾಧ್ಯತೆ ಇತ್ತು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *