LatestMain PostNational

ಹನುಮನ ವೇಷ ಧರಿಸಿದ್ದ ವ್ಯಕ್ತಿ ಪ್ರದರ್ಶನ ನೀಡುತ್ತಲೇ ಕುಸಿದು ಸಾವು

ಲಕ್ನೋ: ಗಣೇಶ ಚತುರ್ಥಿ ಆಚರಣೆಯಲ್ಲಿ ಹನುಮಂತನ ವೇಷ ಧರಿಸಿ ನೃತ್ಯ ಪ್ರದರ್ಶನ ಮಾಡುತ್ತಿದ್ದ ಕಲಾವಿದನೊಬ್ಬ ಮೃತಪಟ್ಟ ಘಟನೆ ಉತ್ತರಪ್ರದೇಶದ ಮೈನ್‍ಪುರಿದಲ್ಲಿ ನಡೆದಿದೆ.

ಮೃತರನ್ನು ಹನುಮಂತರನ ವೇಷ ಧರಿಸಿದ್ದ ರವಿ ಶರ್ಮಾ ಎಂದು ಗುರುತಿಸಲಾಗಿದೆ. ಈತ ಉತ್ತರಪ್ರದೇಶದ ಮೈನ್‍ಪುರಿಯಲ್ಲಿ ಪ್ರದರ್ಶನ ನೀಡುತ್ತಿದ್ದ ವೇಳೆ ಮೃತಪಟ್ಟಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗುತ್ತಿದೆ.

ರವಿ ಶರ್ಮಾ ಅವರು ಮೈನ್‍ಪುರಿಯ ಕೊತ್ವಾಲಿ ಪ್ರದೇಶದ ಶಿವ ದೇವಾಲಯದಲ್ಲಿ ಗಣೇಶ ಚತುರ್ಥಿ ಆಚರಣೆಯ ಅಂಗವಾಗಿ ಬಂದಿದ್ದ ಭಜನಾ ತಂಡದ ಭಾಗವಾಗಿದ್ದರು. ಇದನ್ನೂ ಓದಿ: ತಮ್ಮ ಮಗುವಿಗೆ ಭಾರತೀಯ ಖಾದ್ಯದ ಹೆಸರಿಟ್ಟ ವಿದೇಶಿ ದಂಪತಿ

ನೃತ್ಯ ಪ್ರದರ್ಶನದ ಸಮಯದಲ್ಲಿ ಅವರು ಹನುಮಾನ್ ವೇಷ ಧರಿಸಿ ವೇದಿಕೆಯ ಮೇಲೆ ಕುಸಿದುಬಿದ್ದರು. ಕೆಲ ನಿಮಿಷಗಳ ಕಾಲ ಅಲ್ಲಿ ನರೆದಿದ್ದ ಪ್ರೇಕ್ಷಕರಿಗೆ ಅವರು ಕುಸಿದು ಬಿದ್ದಿದ್ದಾರೆ ಎಂದೇ ತಿಳಿದಿರಲಿಲ್ಲ. ಬದಲಿಗೆ ಪ್ರದರ್ಶನ ನೀಡುತ್ತಿದ್ದಾರೆ ಎಂದು ಕೊಂಡಿದ್ದರು. ಇದಾದ ನಂತರ ಅವರನ್ನು ಮೈನ್‍ಪುರಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿನ ವೈದ್ಯರು ರವಿ ಶರ್ಮಾ ಮೃತಪಟ್ಟಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಜನಜಂಗುಳಿ ಪ್ರದೇಶದಲ್ಲಿ ಹಾಡಹಗಲೇ ಗ್ಯಾಂಗ್ ಅಟ್ಯಾಕ್

Live Tv

Leave a Reply

Your email address will not be published.

Back to top button