ಚಿಕ್ಕಮಗಳೂರು: ಕಳೆದ 16 ವರ್ಷಗಳ ನಂತರ ಕೆರೆಗೆ ಕೋಡಿ ಬಿದ್ದಿದ್ದರಿಂದ ಗ್ರಾಮದ ಕಲ್ಲೇಶ್ವರ ಸ್ವಾಮಿಗೆ ಅದ್ಧೂರಿಯಾಗಿ ತೆಪ್ಪೋತ್ಸವ ಆಚರಿಸಿ ಗ್ರಾಮಸ್ಥರು ತಮ್ಮ ಭಕ್ತಿಯನ್ನು ಮೆರೆದರು.
ಜಿಲ್ಲೆಯ ಕಡೂರು ತಾಲೂಕಿನ ಸಿಂಗಟಗೆರೆ ಗ್ರಾಮದ ಕೆರೆ ಭರ್ತಿಯಾಗಿದೆ. ಈ ಹಿನ್ನೆಲೆಯಲ್ಲಿ 7 ಗ್ರಾಮದ ಗ್ರಾಮಸ್ಥರು ಸೇರಿ ಅದ್ಧೂರಿಯಾಗಿ ತೆಪ್ಪೋತ್ಸವ ನಡೆಸಿದರು. ತೆಪ್ಪದಲ್ಲಿ ಕಲ್ಲೇಶ್ವರ ಸ್ವಾಮಿ ಮತ್ತು ಆಂಜನೇಯ ಸ್ವಾಮಿ ಉತ್ಸವ ಮೂರ್ತಿಯನ್ನು ಕೂರಿಸಿ 7 ಹಳ್ಳಿ ಫಿರ್ಕಾ ಗ್ರಾಮಸ್ಥರಲ್ಲಿ ಎಲ್ಲಾ ಕೋಮಿನ ಒಬ್ಬರನ್ನು ತೆಪ್ಪದಲ್ಲಿ ಕೂರಿಸಿದ್ದು, ಜಾತ್ಯಾತೀತ ಮನೋಭಾವನೆಗೆ ಸಾಕ್ಷಿಯಾಯಿತು.
Advertisement
Advertisement
ತೆಪ್ಪೋತ್ಸವ ನಡೆಸುವ ಮುನ್ನ ತೆಪ್ಪವು ದಡದಲ್ಲಿ ಗಟ್ಟಿಯಾಗಿ ಹೂತುಕೊಂಡಿದ್ದ ಪರಿಣಾಮ ಗಂಟೆಗೂ ಹೆಚ್ಚು ಹೊತ್ತು ಭಕ್ತರು ಹರಸಾಹಸಪಟ್ಟರು. ನಂತರ ತೆಪ್ಪವನ್ನು ಚಲಿಸುವಂತೆ ಮಾಡಿದರು. ಈ ವೇಳೆ ಭಕ್ತರಿಂದ ದೇವರ ನಾಮಸ್ಮರಣೆ ಎಲ್ಲೆಡೆ ಹಬ್ಬಿತ್ತು. ಇದನ್ನೂ ಓದಿ: ಕೊರೊನಾದೊಂದಿಗೆ ಪ್ರತಿಪಕ್ಷಗಳು ಸ್ನೇಹ ಬೆಳೆಸುತ್ತಿದೆ: ಯೋಗಿ ಆದಿತ್ಯನಾಥ್
Advertisement
ಕಡೂರು ಶಾಶ್ವತ ಬರಗಾಲಕ್ಕೆ ತುತ್ತಾದ ತಾಲೂಕು. ಇಲ್ಲಿ ವಾರ್ಷಿಕ ವಾಡಿಕೆ ಮಳೆಯೂ ಬೀಳುವುದು ತುಂಬಾ ಕಡಿಮೆ. ಆದರೆ, ಈ ವರ್ಷ ಇತಿಹಾಸದಲ್ಲಿ ಕಂಡು-ಕೇಳರಿಯದಷ್ಟು ಮಳೆಯಾಗಿದೆ. ವರ್ಷಗಳಿಂದ ನಿಂತಿದ್ದ ಬೋರ್‌ಗಳಿಗೆ ಮರುಜೀವ ಬಂದಿದೆ. ಕೆರೆ-ಕಟ್ಟೆ ತುಂಬಿ ಜನ-ಜಾನುವಾರುಗಳಿಗೆ ಸಮೃದ್ಧ ನೀರಾಗಿದೆ.
Advertisement
ಈ ಹಿನ್ನೆಲೆಯಲ್ಲಿ ಸಿಂಗಟಗೆರೆ ಮತ್ತು ಫಿರ್ಕಾ 7 ಹಳ್ಳಿ ಗ್ರಾಮಸ್ಥರು ಕಳೆದೊಂದು ತಿಂಗಳಿನಿಂದ ತೆಪ್ಪೋತ್ಸವಕ್ಕೆ ಸಿದ್ಧತೆ ಮಾಡಿದ್ದರು. ಕೆರೆ ಕೋಡಿ ಬಿದ್ದ ವೇಳೆ ಈ ರೀತಿ ತೆಪ್ಪೋತ್ಸವ ನಡೆಸುವುದು ವಾಡಿಕೆ. 2005ರಲ್ಲಿ ತೆಪ್ಪೋತ್ಸವ ನಡೆದಿತ್ತು. 16 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕೆರೆ ಕೋಡಿ ಬಿದ್ದಿದೆ. ಇದರಿಂದಾಗಿ ತೆಪ್ಪೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದರು. ಇದನ್ನೂ ಓದಿ: ಓಮಿಕ್ರಾನ್ ಆತಂಕ – ಇಂದಿನಿಂದ ದೆಹಲಿಯಲ್ಲಿ ನೈಟ್ ಕರ್ಫ್ಯೂ
ಇದನ್ನು ನೋಡಲು ಸಿಂಗಟಗೆರೆ ಸುತ್ತಮುತ್ತಲಿನ ನೂರಾರು ಹಳ್ಳಿಗರ ಜೊತೆ ಚಿತ್ರದುರ್ಗ, ದಾವಣಗೆರೆ, ತುಮಕೂರು, ಶಿವಮೊಗ್ಗ, ಹಾಸನ, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿದ್ದರು. ಇದನ್ನೂ ಓದಿ: ಪ್ರಧಾನಿ ಮೋದಿ ಕ್ಷಮೆ ಕೇಳುವುದು ಬೇಡ: ರಾಕೇಶ್ ಟಿಕಾಯತ್
ತೆಪ್ಪೋತ್ಸವವನ್ನು ನೋಡಲು ಬೆಳಗ್ಗೆಯಿಂದಲೂ ಸಾವಿರಾರು ಜನ ಕಾದು ಕೂತಿದ್ದರು. ಕೆರೆ ಏರಿ ಸುತ್ತಲು ಮರದಿಂದ ತಡೆಗೋಡೆ ನಿರ್ಮಿಸಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸಿಂಗಟಗೆರೆ, ಪಂಚನಹಳ್ಳಿ, ಯಗಟಿ, ಬೀರೂರು, ಕಡೂರು ಪೊಲೀಸರು ಬಂದೋಬಸ್ತ್ ಕಲ್ಪಿಸಿದ್ದರು.